Viral Video: ಆಟವಾಡುತ್ತಿದ್ದಾಗ ಮೊದಲ ಮಹಡಿಯಿಂದ ಬಿದ್ದ 3 ವರ್ಷದ ಮಗು- ಶಾಕಿಂಗ್ ವಿಡಿಯೊ ಇಲ್ಲಿದೆ
ಮೂರು ವರ್ಷದ ಪುಟ್ಟ ಮಗುವೊಂದು ಮಹಡಿಯಿಂದ ಬಿದ್ದು ತಲೆಗೆ ತೀವ್ರವಾಗಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ನಾಸಿಕ್ ನಗರದಲ್ಲಿ ನಡೆದಿದೆ. ಶ್ರೀರಾಜ್ ಅಮೊಲ್ ಶಿಂಧೆ ಎನ್ನುವ ಮಗು ತನ್ನ ಮನೆಯ ಬಾಲ್ಕನಿಯ ಗೋಡೆಯ ಮೇಲೆ ಏರಲು ಹೋದಾಗ ಆಯ ತಪ್ಪಿ ಕೆಳಗೆ ಬಿದ್ದಿದೆ. ಸದ್ಯ ಇದರ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಎದೆಯಲ್ಲಿ ನಡುಕ ಹುಟ್ಟಿಸುವಂತಿದೆ.
ಆಟವಾಡುವಾಗ ಮೊದಲ ಮಹಡಿಯಿಂದ ಬಿದ್ದ ಮಗು -
ಮುಂಬೈ: ಇಂದು ಪೋಷಕರು ಮಕ್ಕಳ ಬಗ್ಗೆ ಎಷ್ಟೇ ಜಾಗೃತ ವಹಿಸಿದರೂ ಸಾಲದು, ಅದ ರಲ್ಲೂ ಮಕ್ಕಳನ್ನು ಒಂಟಿಯಾಗಿ ಆಡಲು ಬಿಡುವ ಮುನ್ನ ಪೋಷಕರು ಬಹಳಷ್ಟು ಎಚ್ಚರಿಕೆ ವಹಿಸಿಬೇಕಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮೂರು ವರ್ಷದ ಪುಟ್ಟ ಮಗುವೊಂದು ಮಹಡಿಯಿಂದ ಬಿದ್ದು ತಲೆಗೆ ತೀವ್ರವಾಗಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ನಾಸಿಕ್ ನಗರದಲ್ಲಿ ನಡೆದಿದೆ. ಶ್ರಿರಾಜ್ ಅಮೊಲ್ ಶಿಂಧೆ ಎನ್ನುವ ಮಗು ತನ್ನ ಮನೆಯ ಬಾಲ್ಕನಿಯ ಗೋಡೆಯ ಮೇಲೆ ಏರಲು ಹೋದಾಗ ಆಯ ತಪ್ಪಿ ಕೆಳಗೆ ಬಿದ್ದಿದೆ. ಸದ್ಯ ಇದರ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು (Viral Video) ಎದೆಯಲ್ಲಿ ನಡುಕ ಹುಟ್ಟಿಸುವಂತಿದೆ.
ಶ್ರೀರಾಜ್ ಅಮೋಲ್ ಶಿಂಧೆ ಎಂಬ ಮಗುವು ಮನೆಯ ಮಹಡಿಯ ಬಾಲ್ಕನಿಯಲ್ಲಿ ಆಟ ಆಡುತ್ತಿತ್ತು. ಈ ವೇಳೆ ತನ್ನ ಸ್ನೇಹಿತರನ್ನು ಕರೆಯಲು ಬಾಲ್ಕನಿಯ ಇನ್ನೊಂದು ಗೋಡೆಯ ಮೇಲೆ ಹತ್ತಲು ಪ್ರಯತ್ನಿಸಿ, ನಂತರ ಸಣ್ಣ ಅಂಚಿನಲ್ಲಿ ಬಾಗಿ ನೋಡಲು ಹೋಗಿದೆ. ಈ ವೇಳೆ ಆಯತಪ್ಪಿ ನೇರವಾಗಿ ನೆಲಕ್ಕೆ ಬಿದ್ದಿದೆ. ವಿಡಿಯೊದಲ್ಲಿ ಮಗುವು ಕಂಬಿಯ ಮೇಲೆ ಬಾಗುತ್ತಿರುವುದನ್ನು ಕಾಣಬಹುದು, ಮತ್ತು ಕೆಲವೇ ಕ್ಷಣಗಳಲ್ಲಿ ಮಗು ಆಯತಪ್ಪಿ ನೆಲಕ್ಕೆ ಬಿದ್ದಿದ್ದು ಮಗುವಿನ ತಲೆಗೆ ತೀವ್ರ ಗಾಯಗಳಾಗಿದೆ.
ವಿಡಿಯೊ ವೀಕ್ಷಿಸಿ:
नाशकात ३ वर्षांचा मुलगा इमारतीच्या पहिल्या मजल्यावरून पडला pic.twitter.com/gTZoKCJ3R7
— News18Lokmat (@News18lokmat) November 27, 2025
ಮಗು ಕೆಳಗೆ ಬಿದ್ದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.ಈ ಸಂದರ್ಭದಲ್ಲಿ ತಕ್ಷಣವೇ ಸ್ಥಳಿಯರು ಆಗಿಮಿಸಿದ್ದು ಕೂಡಲೇ ಮಗುವನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗು ಸದ್ಯ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕ ದಲ್ಲಿದ್ದು ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ. ಮಗುವಿನ ತಲೆಗೆ ಗಾಯವಾಗಿದ್ದು ತೀವ್ರ ಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ
ಇದನ್ನು ಓದಿ:Viral Video: ಇದೆಂಥ ಕೃತ್ಯ? ಕೈಕಾಲುಗಳಿಗೆ ಸಂಕೋಲೆ ಬಿಗಿದಿದ್ದರೂ ದುಡಿಯುತ್ತಿರುವ ಕಾರ್ಮಿಕನ ವಿಡಿಯೊ ವೈರಲ್
ಸದ್ಯ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರೊಬ್ಬರು ಪೋಷಕರು ಮಕ್ಕಳ ಬಗ್ಗೆ ಎಷ್ಟು ಜಾಗೃತಿ ವಹಿಸಿದರೂ ಕಡಿಮೆಯೇ, ಹಾಗಾಗಿ ನಿಮ್ಮ ಮಕ್ಕಳನ್ನು ಒಂಟಿಯಾಗಿ ಆಡಲು ಬಿಡುವ ಮುನ್ನ ಎಚ್ಚರ ವಹಿಸಿ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಮಗು ಬದುಕಿ ಉಳಿದಿದ್ದೇ ಹೆಚ್ಚು ಇನ್ನಾದರೂ ಮನೆಯವರು ಎಚ್ಚೆತ್ತುಕೊಳ್ಳಿ ಎಂದು ಬರೆದುಕೊಂಡಿದ್ದಾರೆ.