ಬೆಂಗಳೂರು,ಅ.23: ಇತ್ತೀಚೆಗೆ ಬೆಂಗಳೂರಿನಲ್ಲಿ ಕ್ಯಾಬ್ ದರವು ಮಿತಿ ಮೀರಿ ಹೋಗುತ್ತಿದೆ. ಅದರಲ್ಲೂ ಕೊನೆ ಕ್ಷಣದಲ್ಲಿ ಚಾಲಕರು ಕ್ಯಾಬ್ ರದ್ದು ಮಾಡುವುದು, ಮಾರ್ಗ ಮಧ್ಯ ನಿಲ್ಲಿಸುವುದು ಕಿರಿಕಿರಿ ಎನಿಸುತ್ತದೆ. ಇದಕ್ಕೆ ಸಾಕ್ಷಿಯಾಗಿ ಸೇಲ್ಸ್ ಡೆವಲಪ್ಮೆಂಟ್ ಮ್ಯಾನೇಜರ್ ಸುಭಾಷ್ ನಾಯರ್ ಲಿಂಕ್ಡ್ಇನ್ನಲ್ಲಿ ಶೇರ್ (Viral News) ಮಾಡಿದ ಪೋಸ್ಟ್ ವೊಂದು ಭಾರೀ ವೈರಲ್ ಆಗುತ್ತಿದೆ. ಮಳೆ ಬಂದಾಗ ದರಗಳು 400 ರಿಂದ 1,000 ಕ್ಕೆ ಏರಿಕೆಯಾಗುತ್ತವೆ. ಜೊತೆಗೆ ವಾಹನಗಳು ರದ್ದಾಗುವುದರಿಂದ ಪ್ರಯಾಣಿಕರು ವಾಹನ ಸಿಗದೆ ಪರದಾಡುವಂತಾಗುತ್ತದೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಳೆ ಬಂದಾಗ ಕ್ಯಾಬ್ ನಲ್ಲಿ ಪ್ರಯಾಣಿ ಸುವುದು ಬಹಳಷ್ಟು ದುಬಾರಿ. ಜನರಿಗೆ ವಾಹನದ ಅಗತ್ಯ ವಿರುವ ಸಮಯದಲ್ಲೇ ದರಗಳು ದಿಢೀರನೆ ಏರಿಕೆಯಾಗುತ್ತವೆ. ಈ ಹಿನ್ನೆಲೆಯಲ್ಲಿ, ಸೇಲ್ಸ್ ಡೆವಲಪ್ಮೆಂಟ್ ಮ್ಯಾನೇಜರ್ ಸುಭಾಷ್ ನಾಯರ್ ಅವರು, ಮಳೆ ಬರುವ ಸಮಯದಲ್ಲಿ ಆ್ಯಪ್ಗಳು ದರಗಳನ್ನು ಹೇಗೆ ನಿರ್ಧರಿಸುತ್ತವೆ ಮತ್ತು ಬುಕಿಂಗ್ಗಳನ್ನು ಹೇಗೆ ನಿರ್ವಹಿಸುತ್ತವೆ ಎಂದು ಪ್ರಶ್ನಿಸಿದ್ದಾರೆ.
ಸಾಮಾನ್ಯವಾಗಿ 25 ಕಿ.ಮೀ ಪ್ರಯಾಣದ ದೂರಕ್ಕೆ ರೂ. 400 ರಿಂದ 500 ಇರಬೇಕಾದ ದರವು, ಮಳೆ ಬಂದಾಗ ರೂ. 800 ರಿಂದ 1,000 ವರೆಗೆ ಏರಿಕೆಯಾಗುತ್ತದೆ. ಚಾಲಕರು ಕೆಲವೊಮ್ಮೆ ಮುಂಗಡವಾಗಿ ಬುಕ್ ಮಾಡಿದ ರೈಡ್ಗಳನ್ನು ರದ್ದು ಗೊಳಿಸುತ್ತಾರೆ. ಅಥವಾ ಪ್ರಯಾಣಿಕರೇ ಬುಕಿಂಗ್ ರದ್ದು ಗೊಳಿಸುವಂತೆ ಕೇಳುತ್ತಾರೆ ಎಂದೂ ಅವರು ಆರೋಪ ಮಾಡಿದ್ದಾರೆ.
Viral Video: ಮರೆಯಾದ ಮಾನವೀಯತೆ; ನೇಪಾಳ ಪ್ರವಾಹದಲ್ಲಿ ಮೃತಪಟ್ಟ ಮಹಿಳೆಯ ಚಿನ್ನದ ಓಲೆ ಕದ್ದ ಕಿಡೀಗೆಡಿಗಳು!
ಮಳೆ ಬರುತ್ತಿದ್ದಂತೆ ಬೆಂಗಳೂರಿನಲ್ಲಿ ಕ್ಯಾಬ್ ಆಪ್ಗಳು ಲೂಟಿ ಮಾಡಲು ಶುರು ಮಾಡುತ್ತವೆ. ಪ್ರಯಾಣಿಕರು ಎಟಿಎಂ ಮೆಷಿನ್ ಎಂದು ಅಂದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ರೈಡ್ಗಳನ್ನು ರದ್ದುಗೊಳಿಸುವ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ದರಗಳನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಎಂಬುದರ ಕುರಿತು ಸ್ಪಷ್ಟ ಮಾಹಿತಿ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.