ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ದರೋಡೆ ಮಾಡಲು ಬಂದ ಖದೀಮರನ್ನು ಅಟ್ಟಾಡಿಸಿ ಹಿಡಿದ ಪೆಟ್ರೋಲ್ ಬಂಕ್ ಸಿಬಂದಿ; ವಿಡಿಯೊ ವೈರಲ್

ಉತ್ತರ ಪ್ರದೇಶದ ಅಮ್ರೋಹಾದಲ್ಲಿನ ಪೆಟ್ರೋಲ್ ಬಂಕ್ ಬೈಕ್ ಸವಾರರಿಬ್ಬರು ಪೆಟ್ರೋಲ್ ಹಾಕಿಸಲು ಬಂದಿದ್ದಾರೆ. ತಮ್ಮ ಬೈಕ್‌ಗೆ ಪೆಟ್ರೋಲ್ ಹಾಕಿದ ಬಳಿಕ ಹಣ ನೀಡಿದ್ದಾರೆ. ಅದನ್ನು ನೌಕರ ಲೆಕ್ಕ ಮಾಡುವಾಗ ಬೈಕ್‌ ‌ಸವಾರರು ಒಮ್ಮಿಂದೊಮ್ಮೆಲೆ ಆತನ ಕೈಲಿದ್ದ ಅಷ್ಟು ಹಣ ಎಗರಿಸಿ ಅಲ್ಲಿಂದ ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾರೆ.

ಪೆಟ್ರೋಲ್ ಬಂಕ್‌ನಲ್ಲಿ ಹಣ ಕದಿಯಲು ಯತ್ನ; ಖದೀಮರನ್ನು ಹಿಡಿದ ನೌಕರ

Robbers Try To Snatch Money From Petrol Pump

Profile Pushpa Kumari Apr 6, 2025 4:08 PM

ಲಖನೌ: ಉತ್ತರ ಪ್ರದೇಶದ ಅಮ್ರೋಹಾದಲ್ಲಿರುವ ಪೆಟ್ರೋಲ್ ಬಂಕ್  ಒಂದರಲ್ಲಿ ಬೈಕ್ ಸವಾರರಿಬ್ಬರು ಕಳ್ಳತನಕ್ಕೆ ಯತ್ನಿಸಿದ್ದ ಘಟನೆ ನಡೆದಿದೆ. ಪೆಟ್ರೋಲ್ ಬಂಕ್ ನೌಕರನ ಮೇಲೆ ಹಲ್ಲೆ ನಡೆಸಿ ಹಣ ಕಿತ್ತುಕೊಳ್ಳಲು ಪ್ರಯತ್ನಿಸಿದ್ದು, ಈ ವೇಳೆ ನೌಕರ ಭಯಪಡದೆ ಕಳ್ಳರನ್ನು ಬೆನ್ನಟ್ಟಿದ್ದ ಸಾಹಸಮಯ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಎಪ್ರಿಲ್ 4ರ ಸಂಜೆ ಪೆಟ್ರೋಲ್ ಬಂಕ್ ನಲ್ಲಿ ಹಣ ಲಪಟಾಯಿಸಲು ಇಬ್ಬರು ಯುವಕರು ಬೈಕ್‌ನಲ್ಲಿ ಬಂದಿದ್ದರು. ಆದರೆ ನೌಕರನ ಸಮಯ ಪ್ರಜ್ಞೆ ಮತ್ತು ಧೈರ್ಯದಿಂದಾಗಿ ಈ ಕಳ್ಳತನದ ಯತ್ನ ವಿಫಲವಾಗಿದ್ದು,  ಕಳ್ಳತನ ಮಾಡಲು ಬಂದ ಖದೀಮರನ್ನು ಧೈರ್ಯದಿಂದ ಎದುರಿಸಿದ್ದಾನೆ. ಈ ದೃಶ್ಯ ಇದೀಗ ಬಹಳಷ್ಟು ವೈರಲ್ (Viral Video) ಆಗಿದ್ದು ನೌಕರನ ದೈರ್ಯಕ್ಕೆ ನೆಟ್ಟಿಗರು  ಮೆಚ್ಚುಗೆ ಸೂಚಿಸಿದ್ದಾರೆ.

ಘಟನೆಯ ವಿವರ

ಉತ್ತರ ಪ್ರದೇಶದ ಅಮ್ರೋಹಾದಲ್ಲಿನ ಪೆಟ್ರೋಲ್ ಬಂಕ್‌ಗೆ ಬೈಕ್  ಸವಾರರಿಬ್ಬರು ಪೆಟ್ರೋಲ್ ಹಾಕಿಸಲು ಬಂದಿದ್ದಾರೆ. ತಮ್ಮ ಬೈಕ್‌ಗೆ  ಪೆಟ್ರೋಲ್  ಹಾಕಿದ ಬಳಿಕ ಹಣ ನೀಡಿದ್ದಾರೆ. ಅದನ್ನು ನೌಕರ ಲೆಕ್ಕ ಮಾಡಿ ಇತರ ಹಣದೊಂದಿಗೆ ಇರಿಸುವಾಗ ಬೈಕ್ ಸವಾರರು ಒಮ್ಮಿಂದೊಮ್ಮೆಲೆ ಆತನ ಕೈಲಿದ್ದ ಅಷ್ಟು ಹಣ ಎಗರಿಸಿ ಅಲ್ಲಿಂದ ಎಸ್ಕೇಪ್ ಆಗಲು ಪ್ರಯತ್ನಿ ಸಿದ್ದಾರೆ. ಆದರೆ ಸಿಬಂದಿ ತನ್ನ ಕೈಯಲ್ಲಿ ಇದ್ದ ಹಣ ಬಿಟ್ಟುಕೊಡದೆ ಬೈಕ್‌ನ ಹಿಂದೆಯೇ ಓಡಿದ್ದಾನೆ. ಬೈಕ್ ಚಲಾಯಿಸುತ್ತಿದ್ದ ವ್ಯಕ್ಯಿ ಬ್ಯಾಲೆನ್ಸ್ ತಪ್ಪಿ ಹೋಗಿದೆ. ಅಷ್ಟರಲ್ಲೇ ಉಳಿದ ಸಿಬಂದಿ ಬಂದು ಇಬ್ಬರನ್ನು ಹಿಡಿಯಲು ಯಶಸ್ವಿಯಾದರು.



ಆರೋಪಿಗಳನ್ನು ಡ್ಯಾನಿಶ್ ಮತ್ತು ಫರ್ಮಾನ ಎಂದು ಗುರುತಿಸಲಾಗಿದೆ. ಬೈಕ್ ಚಾಲಕ ಮತ್ತು ಹಿಂಬದಿ ಸವಾರನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದು, ಇಬ್ಬರ ಬಳಿಯೂ ಹಣ ಇರದ ಕಾರಣ‌ ಕದಿಯಲು ಪ್ರಯತ್ನ ಪಟ್ಟಿದ್ದಾಗಿ ತಿಳಿಸಿದ್ದಾರೆ. ಈ ಇಬ್ಬರು ಅಪರಾಧಿಗಳು ಈ ಹಿಂದೆ ಕ್ರಮಿನಲ್ ಕೇಸ್ ಅನ್ನು ಹೊಂದಿರುವ ಬಗ್ಗೆಯು ತಿಳಿದುಬಂದಿದೆ. ಹೀಗೆ ಕದಿಯುವ ಇನ್ನಷ್ಟು ಗ್ಯಾಂಗ್ ಇರಬಹುದೆ ಎಂಬ ಅನುಮಾನ ಕೂಡ ಪೊಲೀಸರಿಗೆ ವ್ಯಕ್ತವಾಗಿದ್ದು  ತನಿಖೆ ಬಳಿಕವೇ ಈ ಎಲ್ಲ ಅಂಶಗಳು ಬಯಲಾಗಲಿವೆ. ಉತ್ತರ ಪ್ರದೇಶದಲ್ಲಿ ಕಳ್ಳತನ ಹಾಗೂ ದರೋಡೆ ಇತ್ಯಾದಿ ಅಪರಾಧ ಪ್ರಕರಣಗಳ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಹೀಗಾಗಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದು, ಸಿಸಿ ಟಿವಿ ಅಳವಡಿಕೆ , ಪೊಲೀಸ್ ಬೀಟ್ ಇತ್ಯಾದಿ ಕ್ರಮಕ್ಕೂ ಕೂಡ ಮುಂದಾಗಿದೆ.

ಇದನ್ನು ಓದಿ: Viral Video: ಘಿಬ್ಲಿ ಎಡವಟ್ಟು; ಯುವತಿಯ ಫೋಟೊದಲ್ಲಿ 3ನೇ ಕಾಲು ಉದ್ಭವ: ನಕ್ಕು ನಕ್ಕು ಸುಸ್ತಾದ ನೆಟ್ಟಿಗರು

ಇದೇ ಫೆಬ್ರವರಿಯಂದು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ದರೋಡೆ ಯತ್ನ ನಡೆದಿತ್ತು. ತಮ್ಮ ಗ್ಯಾಂಗ್‌ನ ಕಿಂಗ್ ಪಿನ್‌ನ ಹುಟ್ಟುಹಬ್ಬದ ಆಚರಣೆ ಮಾಡಲು ಹಣ ಅವಶ್ಯಕತೆ ಇದ್ದ ಕಾರಣ ದರೋಡೆಕೋರರ ಗುಂಪು ಭೋಪಾಲ್‌ನ ಟಿಟಿ ನಗರದ  ಪೆಟ್ರೋಲ್ ಬಂಕ್‌ನಲ್ಲಿ ದರೋಡೆ ಮಾಡಲು ಯತ್ನಿಸಿ ಘಟನೆ ಸಹ ನಡೆದಿತ್ತು. ಈ ಗ್ಯಾಂಗ್‌ನ ಆರು ಜನರು ಅರೆಸ್ಟ್ ಆಗಿದ್ದರು. ಇದೀಗ ಇಬ್ಬರು ಯುವಕರು ಕೂಡ ಬೈಕ್‌ನಲ್ಲಿ ಬಂದು ಹಣ ಲಪಟಾಯಿಸಲು ಮುಂದಾಗಿದ್ದು ಈ ಘಟನೆಯ ವಿಡಿಯೊ ಬಹಳಷ್ಟು ವೈರಲ್ ಆಗುತ್ತಿದೆ.