ನವದೆಹಲಿ: ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಆಗಾಗ ದೈನಂದಿನ ಜೀವನದಲ್ಲಿ ತಮಗಾದ ಹೊಸದಾದ, ವಿಚಿತ್ರವಾದ ಅನುಭವಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅದೇರೀತಿ ಇತ್ತೀಚೆಗೆ 'ಸಮ್ಥಿಂಗ್ ಅಂಡ್ ಎನಿಥಿಂಗ್' ನೆಟ್ಟಿಗಳೊಬ್ಬಳು ಇತ್ತೀಚಿನ ತನ್ನ ಸೋಶಿಯಲ್ ಮಿಡಿಯಾ ಪೋಸ್ಟ್‌ನಲ್ಲಿ ಭಾರತದಲ್ಲಿ ಚಹಾ ಮಾರಾಟಗಾರರನ್ನು ಹೇಗೆ ಸಂಬೋಧಿಸುವುದು ಎಂಬುದರ ಕುರಿತು ಆಕರ್ಷಕ ಚರ್ಚೆಯನ್ನು ಹುಟ್ಟುಹಾಕಿದ್ದಾಳೆ. ನಿಮಗಿಂತ ವಯಸ್ಸಿನಲ್ಲಿ ಹೆಚ್ಚು ದೊಡ್ಡವರಾದ ಚಹಾ ಅಂಗಡಿಯವನ ಬಳಿ ಚಹಾ ಕೇಳುವಾಗ ನೀವು ಅವರನ್ನು ಏನೆಂದು ಕರೆಯುತ್ತೀರಿ? ಎಂದು ತನ್ನ ಫಾಲೋವರ್ಸ್ ಅನ್ನು ಪ್ರಶ್ನಿಸಿದ್ದಾಳೆ. ಹಾಗೂ ಇತ್ತೀಚೆಗೆ ಈ ಬಗ್ಗೆ ತನಗಾದ ಅನುಭವವನ್ನು ಕೂಡ ಹಂಚಿಕೊಂಡಿದ್ದಾಳೆ. ಇದು ಈಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ.
ಈ ಪೋಸ್ಟ್ ತ್ವರಿತವಾಗಿ ಗಮನ ಸೆಳೆದು ವೈರಲ್ ಆಗಿದೆ. ಇದಕ್ಕೆ ನೆಟ್ಟಿಗರಿಂದ 135 ಕ್ಕೂ ಹೆಚ್ಚು ಕಾಮೆಂಟ್‍ಗಳು ಬಂದಿವೆ. ಅವರು ಈ ವಿಷಯವನ್ನು ಸಾಕಷ್ಟು ಸಾಮಾನ್ಯವೆಂದು ಹೇಳಿದ್ದಾರೆ. ಒಬ್ಬ ನೆಟ್ಟಿಗರು, "ಅವರನ್ನು ಭಾಯ್ ಅಥವಾ ಬಾಸ್ ಎಂದು ಕರೆಯಿರಿ." ಎಂದರೆ, ಇನ್ನೊಬ್ಬರು ಅದಕ್ಕೆ ಪ್ರತಿಕ್ರಿಯಿಸಿ, "ಬಾಸ್, ಹೌದಾ? ಇದು ಒಳ್ಳೆಯ ಸಲಹೆ, ಅಭ್ಯಾಸವಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ " ಎಂದಿದ್ದಾರೆ. "ನೀವು ಅವನನ್ನು ದೋಸ್ತ್ ಎಂದು ಕರೆಯಬಹುದು" ಎಂದು ಮತ್ತೊಬ್ಬರು ಸಲಹೆ ನೀಡಿದ್ದಾರೆ. ಇತರರು ಅವರಿಗೆ "ಏಕ್ ಚಾಯ್ ದೇನಾ" ಎಂದು ಹೇಳಲು ತಿಳಿಸಿದ್ದಾರೆ. ಇದಕ್ಕೆ ಬೇರೆ ಏನೂ ಅಗತ್ಯವಿಲ್ಲ ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ:Hubli News: 50 ವರ್ಷದ ಅಂಕಲ್ ಜತೆ 18ರ ಯುವತಿ ಪರಾರಿ; ಒಂದೂವರೆ ತಿಂಗಳು ಕಳೆದ್ರೂ ಪತ್ತೆಯಾಗದ ಜೋಡಿ!
ಸಲ್ಮಾನ್ ಖಾನ್‌ಗೆ ಅಂಕಲ್ ಎಂದ ಸಾರಾ
ಕಳೆದ ಬಾರಿ ಅಬುಧಾಬಿಯಲ್ಲಿ ನಡೆದ ಐಐಎಫ್ಎ ಕಾರ್ಯಕ್ರಮದಲ್ಲಿ ನಟರಾದ ವಿಕ್ಕಿ ಕೌಶಲ್, ಶಾಹಿದ್ ಕಪೂರ್, ಐಶ್ವರ್ಯಾ ರೈ ಬಚ್ಚನ್ ಮತ್ತು ಅನನ್ಯಾ ಪಾಂಡೆ ಸೇರಿದಂತೆ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಐಐಎಫ್ಎ ಅವಾರ್ಡ್ಸ್ 2022 ರಲ್ಲಿ ನಟ ಸಲ್ಮಾನ್ ಖಾನ್ ಮತ್ತು ಸಾರಾ ಅಲಿ ಖಾನ್ ಕೂಡ ಭಾಗವಹಿಸಿದ್ದು, ಈ ವೇಳೆ ಸಾರಾ ಅಲಿ ಖಾನ್ ಸಲ್ಮಾನ್ ಖಾನ್ ಅವರನ್ನು ಬ್ರಾಂಡ್ ಅನುಮೋದನೆಗೆ ಸಹಾಯ ಮಾಡುವಂತೆ ವಿನಂತಿಸುತ್ತಾ ಅಂಕಲ್ ಎಂದು ಕರೆದಿದ್ದಾಳೆ. ಇದಕ್ಕೆ ಸಲ್ಮಾನ್ ಖಾನ್ “ನೀನು ಎಲ್ಲರ ಮುಂದೆ ನನ್ನ ಅಂಕಲ್ ಎಂದು ಕರೆದೆಯಾ?” ಎಂದು ಆಕೆಗೆ ತಮಾಷೆ ಮಾಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.