Viral Video: ಬಿಯರ್ ಪ್ರಿಯರಿಗೆ ಇಲ್ಲಿದೆ ಹೊಸ ಟ್ರಿಕ್ಸ್- ನೀವೂ ಟ್ರೈ ಮಾಡಿ ನೋಡಿ! ವಿಡಿಯೊ ನೋಡಿ
ಜರ್ಮನ್ ವ್ಯಕ್ತಿಯೊಬ್ಬ ಸೋಶಿಯಲ್ ಮಿಡಿಯಾದ ವಿಡಿಯೊ ನೋಡಿ ಶೂಲೇಸ್ ಬಳಸಿ ಬಿಯರ್ ಬಾಟಲಿಯ ಮುಚ್ಚಳವನ್ನು ತೆರೆಯುವ ಹ್ಯಾಕ್ ಅನ್ನು ಪ್ರಯತ್ನಿಸಿದ್ದಾನೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ. ಆದರೆ ಆತ ಬಳಸಿದ ಈ ಟ್ರಿಕ್ ಕೆಲಸ ಮಾಡಿದೆಯೇ? ಇಲ್ಲವೇ? ಎಂಬುದರ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.


ಜರ್ಮನಿ: ಸೋಶಿಯಲ್ ಮಿಡಿಯಾದಲ್ಲಿ ಹಲವು ರೀತಿಯ ಟ್ರಿಕ್‍ಗಳನ್ನು ತೋರಿಸಲಾಗುತ್ತದೆ. ಆದರೆ ಅವುಗಳಲ್ಲಿ ಕೆಲವೊಂದು ಕೆಲಸ ಮಾಡಿದರೆ ಇನ್ನೂ ಕೆಲವು ವರ್ಕೌಟ್ ಆಗುವುದಿಲ್ಲ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಸೋಶಿಯಲ್ ಮೀಡಿಯಾದಲ್ಲಿ ತೋರಿಸಿದ ಟ್ರಿಕ್ ಅನ್ನು ಮಾಡಲು ಹೋದ ವಿಡಿಯೊವೊಂದು ವೈರಲ್ ಆಗಿದೆ. ಅದೇನು ಅಂದ್ರೆ, ಹೆಚ್ಚಿನ ಜನರು ಬಿಯರ್ ಬಾಟಲಿಯ ಮುಚ್ಚಳವನ್ನು ಓಪನರ್ ಬಳಸಿ ತೆರೆಯುತ್ತಾರೆ. ಆದರೆ ಜರ್ಮನ್ ವ್ಯಕ್ತಿಯೊಬ್ಬ ಇತ್ತೀಚೆಗೆ ತನ್ನ ಶೂಲೇಸ್ ಬಳಸಿ ಬಿಯರ್ ಬಾಟಲಿಯ ಮುಚ್ಚಳವನ್ನು ತೆರೆಯುವ ಹ್ಯಾಕ್ ಅನ್ನು ಪ್ರಯತ್ನಿಸಿದ್ದಾನೆ. ವಿಚಿತ್ರವೆಂದರೆ ಆ ಟ್ರಿಕ್ ಕೆಲಸ ಮಾಡಿದೆ. ಬಿಯರ್ ಬಾಟಲಿ ಸುಲಭವಾಗಿ ಓಪನ್ ಆಗಿದೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ.
ವೈರಲ್ ವಿಡಿಯೊದಲ್ಲಿ ಆತ ಬಿಯರ್ ಬಾಟಲಿಯನ್ನು ತೆರೆಯುವ ಸುಲಭ ಮಾರ್ಗವನ್ನು ಸೋಶಿಯಲ್ ಮೀಡಿಯಾದ ವಿಡಿಯೊವನ್ನು ನೋಡುತ್ತಿರುವುದನ್ನು ಸೆರೆಹಿಡಿಯಲಾಗಿತ್ತು. ಆ ಹ್ಯಾಕ್ ನಿಜವಾಗಿಯೂ ಕೆಲಸ ಮಾಡುತ್ತದೆಯೇ? ಅಥವಾ ಇಲ್ಲವೇ? ಎಂದು ಪರಿಶೀಲಿಸಲು ಆತ ಟ್ರೈ ಮಾಡಿದ್ದಾನೆ. ಅದಕ್ಕಾಗಿ ಆತ ಶೂಲೇಸ್ ಅನ್ನು ಒಂದು ಕೈಯಲ್ಲಿ ಹಿಡಿದುಕೊಂಡು ಇನ್ನೊಂದು ಕೈಯಲ್ಲಿ ಬಿಯರ್ ಬಾಟಲಿಯನ್ನು ಹಿಡಿದುಕೊಂಡು ಪ್ರಯೋಗ ಮಾಡಿದ್ದಾನೆ. ಅವನು ತನ್ನ ಶೂಲೇಸ್ ಅನ್ನು ಬಾಟಲಿಯ ಕ್ಯಾಪ್‌ಗೆ ಕಟ್ಟಿ ಜೋರಾಗಿ ಎಳೆದಿದ್ದಾನೆ. ಇದರಿಂದ ಬಿಯರ್ ಬಾಟಲಿ ಓಪನ್ ಆಗಿದೆ.
ಶೂ ಲೇಸ್‌ನಿಂದ ಬಿಯರ್ ಬಾಟಲಿ ಮುಚ್ಚಳ ತೆಗೆದ ವಿಡಿಯೊ ಇಲ್ಲಿದೆ ನೋಡಿ...
ಈ ವಿಡಿಯೊ 20 ದಶಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿ ವೈರಲ್ ಆಗಿದ್ದು, ನೆಟ್ಟಿಗರು ಅದನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. "ಇದು ಅದ್ಭುತ, ಮುಂದಿನ ಬಾರಿ ನಾನು ಸಹ ಪ್ರಯತ್ನಿಸುತ್ತೇನೆ" ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಇನ್ನೊಬ್ಬರು "ತುಂಬಾ ಕಷ್ಟಪಟ್ಟು ಈ ಕೆಲಸ ಮಾಡುವುದಕ್ಕಿಂತ ಓಪನರ್ ಬಳಸುವುದು ಉತ್ತಮ" ಎಂದು ಬರೆದಿದ್ದಾರೆ. "ಈ ಟ್ರಿಕ್ ತುಂಬಾ ಚೆನ್ನಾಗಿದೆ" ಎಂದು ಒಬ್ಬರು ಕಾಮೆಂಟ್ ಮಾಡಿದರೆ, "ವಾವ್!" ಎಂದು ಕೆಲವರು ಹೇಳಿದ್ದಾರೆ.
ಈ ರೀತಿ ಶೂಲೇಸ್ ಬಳಸಿ ಬಿಯರ್ ಬಾಟಲಿ ಓಪನ್ ಮಾಡುವಂತಹ ಟ್ರಿಕ್‍ನ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು ಇದೇ ಮೊದಲಲ್ಲ. ಈ ಹಿಂದೆ 2021ರಲ್ಲಿ ವ್ಯಕ್ತಿಯೊಬ್ಬ ಶೂಲೇಸ್ ಬಳಸಿ ಬಿಯರ್ ಬಾಟಲಿಯನ್ನು ಓಪನ್ ಮಾಡಿದ್ದಾನೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದು 93 ರಿಟ್ವೀಟ್ ಮತ್ತು 675 ಲೈಕ್‌ಗಳೊಂದಿಗೆ 39,900 ವ್ಯೂವ್ಸ್ ಗಳಿಸಿತ್ತು.
ಈ ಸುದ್ದಿಯನ್ನೂ ಓದಿ:Viral Post: ಒಂದು ಕೈಯಲ್ಲಿ ಮಗು, ಇನ್ನೊಂದು ಕೈಯಲ್ಲಿ ಬಿಯರ್; ಮನಶಾಸ್ತ್ರಜ್ಞೆಯ ಮನಸ್ಸನ್ನು ಅರಿತವರು ಯಾರು? ಇಲ್ಲಿದ ವೈರಲ್ ಫೊಟೋ
ಇತ್ತೀಚೆಗೆ ಮಗುವಿಗೆ ಎದೆ ಹಾಲುಣಿಸುತ್ತಿರುವ ಸಂದರ್ಭದಲ್ಲೇ ಮಹಿಳೆಯೊಬ್ಬಳು ಇನ್ನೊಂದು ಕೈಯಲ್ಲಿ ಬಿಯರ್ ಬಾಟಲ್ ಹಿಡಿದುಕೊಂಡು ಅದನ್ನು ಕುಡಿಯುತ್ತಿರುವ ಫೊಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅಂದ ಹಾಗೆ ಬೀಚ್‌ನಲ್ಲಿ ಕುಳಿತು ಈ ರೀತಿಯಾಗಿ ಎಂಜಾಯ್ ಮಾಡುತ್ತಿರುವ ಈ ಮಹಿಳೆ ಸೈಕಾಲಜಿಸ್ಟ್ ಎನ್ನುವುದು ಇನ್ನೂ ಆಶ್ಚರ್ಯಕರ ಸಂಗತಿ.