ಬೆಂಗಳೂರು,ಜೂ.19: ಕುಟುಂಬದ ಜೊತೆ ಪ್ರವಾಸ ಕೈಗೊಳ್ಳುವುದು ಅಂದ್ರೆ ಎಲ್ಲರೂ ಇಷ್ಟ ಪಡುತ್ತಾರೆ. ಆದರೆ ಇಲ್ಲೊಂದು ಕುಟುಂಬ ಖುಷಿಯಿಂದ ಬೋಟ್ ಪ್ರವಾಸ ಮಾಡುವಾಗ ಅಘಾತವಾಗಿ ಮಾರ್ಪಟ್ಟಿದೆ. ಚಿಕ್ಕ ಮಗುವೊಂದು ಅನಿರೀಕ್ಷಿತವಾಗಿ ತನ್ನ ಕೈಯಲ್ಲಿಂದ ಐಫೋನ್ ಅನ್ನು ಸರೋವರಕ್ಕೆ ಎಸೆದಿದ್ದು ಇದರ ವಿಡಿಯೊವೊಂದು ಭಾರೀ ವೈರಲ್ (Viral News) ಆಗುತ್ತಿದೆ. ಮಕ್ಕಳಿಗೆ ಮೊಬೈಲ್ ಬಳಕೆ ಮಾಡಲು ಕೊಡುವವರಿಗೆ ಇಂದು ತಕ್ಕ ಪಾಠ ಎಂದು ಅನೇಕರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಹೌದು ಆನಂದದಾಯಕ ಬೋಟ್ ಪ್ರಯಾಣವು ಕ್ಷಣಾರ್ಧದಲ್ಲಿ ಭಾರೀ ನಷ್ಟಕ್ಕೆ ಕಾರಣವಾಗಿದೆ. ಮಗುವೊಂದು ಸ್ಮಾರ್ಟ್‌ಫೋನ್ ಹಿಡಿದುಕೊಂಡು ದೋಣಿಯ ಮೇಲೆ ಶಾಂತವಾಗಿ ಕುಳಿತಿರು ವುದನ್ನು ತೋರಿಸುತ್ತದೆ. ಕೆಲವೇ ಕ್ಷಣಗಳಲ್ಲಿ ಪುಟ್ಟ ಬಾಲಕ ಆಕಸ್ಮಿಕವಾಗಿ ಮೊಬೈಲ್ ಅನ್ನು ನೀರಿಗೆ ಬೀಸಾಕಿದ್ದಾನೆ. ಫೋನ್ ನೀರಿನ ಅಳಕ್ಕೆ ಹೋಗಿ ತಕ್ಷಣವೇ ಕಣ್ಮರೆಯಾಗುತ್ತದೆ.
ವಿಡಿಯೋ ನೋಡಿ:
ಮಗು ಫೋನ್ಎಸೆಯುತ್ತಿದ್ದಂತೆ ಗಾಬರಿಗೊಂಡ ತಾಯಿ ಫೋನ್ ಹಿಡಿಯಲು ಕೈ ಚಾಚಿದರೂ ಕೇವಲ ಸೆಕೆಂಡುಗಳ ಅವಧಿಯಲ್ಲಿ ಈ ಘಟನೆ ನಡೆದು ಹೋಗಿದೆ. ಫೋನ್ ಅನ್ನು ತಕ್ಷಣವೇ ಹುಡುಕಿ ತೆಗೆಯಲು ಸಾಧ್ಯವಾಗಿಲ್ಲ. ಸದ್ಯ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಅನೇಕರು ಹಾಸ್ಯತ್ಮಕ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
viral video: ಬಾಂಗ್ಲಾದಲ್ಲಿ ನಿಲ್ಲದ ದೌರ್ಜನ್ಯ; ಹಿಂದೂ ಶಿಕ್ಷಕನ ಮನೆಗೆ ಬೆಂಕಿ
ಒಬ್ಬ ಬಳಕೆದಾರರು ಚೆನ್ನಾಗಿ ಮಾಡಿದ್ದೀರಿ ಮಗು... ನೀವು ಈ ವಸ್ತುವಿಗೆ ಸರಿಯಾದ ಸ್ಥಳವನ್ನು ತೋರಿಸಿದ್ದೀರಿ ಮತ್ತು ನಿಮ್ಮ ತಾಯಿಗೆ ಅವರ ತಪ್ಪನ್ನು ತೋರಿಸಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ನೀರಿನಲ್ಲಿ ಮೊಬೈಲ್ ಬಿಟ್ಟಾಗ ಏನಾಗುತ್ತದೆ ಎಂಬ ಕುತೂಹಲ ಮಗುವಿಗೆ ಇರಬಹುದು ಎಂದು ತಮಾಷೆ ಮಾಡಿದ್ದಾರೆ. ಈ ಘಟನೆಯನ್ನು ಹಲವರು ಹಾಸ್ಯದ ದೃಷ್ಟಿಯಿಂದ ನೋಡಿದರೂ ಇಲ್ಲಿನ ಸುರಕ್ಷತಾ ಲೋಪದ ಪ್ರತಿಕ್ರಿಯೆ ನೀಡಿದ್ದಾರೆ.ಬೋಟ್ ಪ್ರಯಾಣದ ಸಮಯದಲ್ಲಿ ಮಗು ಲೈಫ್ ಜಾಕೆಟ್ ಧರಿಸಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.