Viral Video: ಮೈ ಜುಮ್ಮೆನಿಸುವ ದೃಶ್ಯ; ಲಂಡನ್‌ನ ಕಟ್ಟಡದ ಮೇಲಿಂದ ಬಿದ್ದ ಮಗುವನ್ನು 'ಕ್ಯಾಚ್' ಹಿಡಿದು ಜೀವ ಉಳಿಸಿದ ಭಾರತೀಯ
ಭಾರತೀಯ ವ್ಯಕ್ತಿಯೊಬ್ಬರು ಕ್ರಿಕೆಟ್ ಆಟದ ಸ್ಕಿಲ್ ಬಳಸಿ ಮಗುವಿನ ಪ್ರಾಣ ಉಳಿಸಿದ ಘಟನೆಯೊಂದು ಇಂಗ್ಲೆಂಡ್‌ನ ಲಂಡನ್‌ನಲ್ಲಿ ನಡೆದಿದೆ. 3 ವರ್ಷದ ಹೆಣ್ಣು ಮಗುವೊಂದು ಕಟ್ಟಡದ ಕಿಟಕಿಯಿಂದ ಕೆಳಗೆ ಬೀಳುತ್ತಿದ್ದಂತೆ ವ್ಯಕ್ತಿ ಕ್ರಿಕೆಟ್ ಕೌಶಲ್ಯ ಬಳಸಿ ಮಗುವನ್ನು ಕ್ಯಾಚ್ ಹಿಡಿದಿದ್ದಾನೆ. ಸದ್ಯ ಈ ರೋಮಾಂಚನಕಾರಿ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಲಂಡನ್‌ನ ಕಟ್ಟಡದಿಂದ ಬಿದ್ದ ಮಗುವಿನ ಜೀವ ಉಳಿಸಿದ ಭಾರತೀಯ ವ್ಯಕ್ತಿ -
ಲಂಡನ್, ಜೂ. 13: ನಮ್ಮಲ್ಲಿ ಬಹಳಷ್ಟು ಮಂದಿ ಕ್ರಿಕೆಟ್ ಪ್ರಿಯರು ಇದ್ದಾರೆ. ಕೆಲವೊಮ್ಮೆ ಯುವಜನತೆ ತಾವು ಅದ್ಭುತ ಆಟಗಾರರಂತೆ ಬ್ಯಾಟಿಂಗ್, ಬೌಲಿಂಗ್ ಕೌಶಲ್ಯವನ್ನು ಪ್ರದರ್ಶಿಸುತ್ತಲೇ ಇರುತ್ತಾರೆ. ಇದೀಗ ಭಾರತೀಯ ವ್ಯಕ್ತಿಯೊಬ್ಬ ತನ್ನ ಕ್ರಿಕೆಟ್ ಆಟದ ಸ್ಕಿಲ್ ಬಳಸಿ ಇಂಗ್ಲೆಂಡ್‌ನ ಲಂಡನ್‌ನಲ್ಲಿ ಮಗುವಿನ ಪ್ರಾಣ ಉಳಿಸಿದ ಘಟನೆ ನಡೆದಿದೆ. ಮೂರು ವರ್ಷದ ಹೆಣ್ಣು ಮಗುವೊಂದು ಕಟ್ಟಡದ ಕಿಟಕಿಯಿಂದ ಕೆಳಗೆ ಬೀಳುತ್ತಿದ್ದಂತೆ ವ್ಯಕ್ತಿ ಕ್ರಿಕೆಟ್ ಕೌಶಲ್ಯ ಬಳಸಿ ಮಗುವನ್ನು ಕ್ಯಾಚ್ ಹಿಡಿದಿದ್ದಾರೆ. ಸದ್ಯ ಈ ದೃಶ್ಯ (Viral News) ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಈ ಹೃದಯ ವಿದ್ರಾವಕ ಘಟನೆಯು ನೆರೆದಿದ್ದ ಜನರನ್ನೇ ಅಚ್ಚರಿಗೆ ದೂರಿದೆ. ಲಂಡನ್‌ನ ಅಂಗಡಿಯೊಂದರ ಮೇಲಿನ ಕಿಟಕಿಯ ಅಂಚಿನಲ್ಲಿ ಮೂರು ವರ್ಷದ ಮಗುವೊಂದು ನೇತಾಡುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಮಗು ಅಪಾಯದಲ್ಲಿ ಇರುವುದನ್ನು ಗಮನಿಸಿದ ಭಾರತೀಯ ವ್ಯಕ್ತಿ ಕೂಡಲೇ ಮಗುವನ್ನು ಕ್ಯಾಚ್ ಹಿಡಿದು ಪ್ರಾಣವನ್ನು ಕಾಪಾಡಿದ್ದಾರೆ.
ವೈರಲ್ ವಿಡಿಯೊ ಇಲ್ಲಿದೆ:
A London restaurant manager caught a young girl after she fell from a balcony, saying “pure instinct” and his cricket skills helped him make the life-saving rescue. pic.twitter.com/yRmd1NgzuZ
— Breaking911 (@Breaking911) June 12, 2026
ಸದ್ಯ ಭಾರತೀಯ ವ್ಯಕ್ತಿಯ ಸಮಯಪ್ರಜ್ಞೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಮಗುವು ಮಹಡಿ ಮೇಲೆ ನೇತಾಡುತ್ತಿರುವುದನ್ನು ಗಮನಿಸಿ ಅಲ್ಲಿದ್ದ ಜನರು ಜೋರಾಗಿ ಕೂಗಿದ್ದಾರೆ. ಅಷ್ಟರಲ್ಲಿ ಅಲ್ಲೇ ಇದ್ದ ಭಾರತೀಯ ವ್ಯಕ್ತಿ ಸಹಾಯಕ್ಕೆ ಧಾವಿಸಿದ್ದಾರೆ. ಹಿಡಿತ ತಪ್ಪಿ ಬಿದ್ದ ಮಗುವನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ. ಇದರಿಂದಾಗಿ ಮಗು ಸಿಮೆಂಟ್ ರಸ್ತೆಗೆ ಬೀಳುವುದು ತಪ್ಪಿದೆ. ಜತೆಗೆ ಅದರ ಜೀವ ಉಳಿದಿದೆ.
ಪ್ಲಂಬರ್ ಕೆಲಸ ಮಾಡುವ ವ್ಯಕ್ತಿಯ ವಾರ್ಷಿಕ ಆದಾಯ ಗೊತ್ತಾ? ಐಟಿ ಉದ್ಯೋಗಕ್ಕಿಂತ ಇದೆ ಬೆಸ್ಟ್
ಮಗು ಯಾವುದೇ ಪ್ರಮುಖ ದೈಹಿಕ ಗಾಯಗಳಿಲ್ಲದೆ ಪಾರಾಗಿದೆ ಎಂದು ವೈದ್ಯರು ದೃಢ ಪಡಿಸಿದ್ದಾರೆ. ಭಾರತೀಯ ವ್ಯಕ್ತಿಯ ಸಮಯ ಪ್ರಜ್ಞೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ʼʼಭಾರತದಲ್ಲಿ ನಾನು ಆಡುತ್ತಿದ್ದ ವೃತ್ತಿಪರ ಕ್ರಿಕೆಟ್ ಪಂದ್ಯಗಳ ಅನುಭವವೇ ನನ್ನ ನೆರವಿಗೆ ಬಂತುʼʼ ಎಂದು ಅವರು ಹೇಳಿದ್ದಾರೆ. ತಕ್ಷಣವೇ ಮಗುವನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ವ್ಯಕ್ತಿ ಅತ್ಯಂತ ಮೃದುವಾಗಿ ಮಗುವನ್ನು ಹಿಡಿದುಕೊಂಡಿದ್ದರಿಂದ ಯಾವುದೇ ಗಾಯಗಳಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.