ಗೊಂಬೆಯ ಅಂತ್ಯ ಸಂಸ್ಕಾರ ನಡೆಸಿದ ಮಕ್ಕಳು; ಯುದ್ಧ ಪೀಡಿತ ಗಾಜಾದಲ್ಲಿನ ಈ ವಿಡಿಯೊ ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿದ್ದೇಕೆ?
Gaza War: ಗಾಜಾದಲ್ಲಿನ ಪುಟ್ಟ ಮಕ್ಕಳು ತಮ್ಮ ಆಟದ ಗೊಂಬೆಯ ಅಣಕು ಶವ ಸಂಸ್ಕಾರ ನಡೆಸಿದ್ದಾರೆ. ಚಿಂತೆಯಿಲ್ಲದೆ ಆತವಾಡಬೇಕಾದ ಅವರ ಮನಸ್ಸಿನ ಮೇಲೆ ಯುದ್ಧ ಬೀರಿದ ಪರಿಣಾಮ ಇದು ಎನ್ನುವುದು ತಜ್ಞರ ಅಭಿಪ್ರಾಯ. ಇದೇ ಕಾರಣಕ್ಕೆ ಇಡೀ ಜಗತ್ತೇ ಈ ವಿಡಿಯೊವನ್ನು ಆತಂಕದಿಂದ ನೋಡುತ್ತಿದೆ.
ಗೊಂಬೆಯೊಂದಿಗೆ ಆಟವಾಟಿದ ಮಕ್ಕಳು -
ಜೆರುಸಲೇಂ, ಏ. 3: ಚಿಕ್ಕ ಮಕ್ಕಳು ಮುಗ್ಧತೆಯ ಪ್ರತಿರೂಪ. ಅದರಲ್ಲೂ 5 ವರ್ಷದೊಳಗಿನ ಮಕ್ಕಳ ಮನಸ್ಸು ಹಸಿ ಮಣ್ಣಿನ ಗೋಡೆ ಇದ್ದಂತೆ ಎನ್ನುವ ಮಾತಿದೆ. ಈ ಸಮಯದಲ್ಲಿ ಅವರು ತಮ್ಮ ಸುತ್ತ-ಮುತ್ತ ಏನನ್ನು ಗಮನಿಸುತ್ತಾರೋ ಅದನ್ನೇ ಅನುಕರಿಸಲು ಯತ್ನಿಸುತ್ತಾರೆ. ಹೀಗಾಗಿ ನಾವು ಅವರ ಮನಸ್ಸಿನಲ್ಲಿ ಉತ್ತಮ ವಿಚಾರ ಬಿತ್ತಬೇಕು ಎನ್ನುತ್ತಾರೆ ತಜ್ಞರು. ಜತೆಗೆ ಅವರು ವಾಸಿಸುವ ಪರಿಸರವೂ ಸಕಾರಾತ್ಮಕತೆಯಿಂದ ಕೂಡಿದ್ದು, ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವಂತಿರಬೇಕು ಎಂದು ಅಭಿಪ್ರಾಯಪಡುತ್ತಾರೆ. ಇಷ್ಟೆಲ್ಲ ಪೀಠಿಕೆ ಹಾಕಲೂ ಕಾರಣವಿದೆ. ಮಕ್ಕಳು ತಾವು ಬೆಳೆಯುವ ಪರಿಸರದ ಮೇಲೆ ಎಷ್ಟು ಪ್ರಭಾವಿತರಾಗಿರುತ್ತಾರೆ ಎನ್ನುವುದಕ್ಕೆ ಇಲ್ಲಿದೆ ಸ್ಪಷ್ಟ ಉದಾಹರಣೆ. ಯುದ್ಧ ಪೀಡಿತ ಗಾಜಾದಲ್ಲಿನ ಪುಟ್ಟ ಪುಟ್ಟ ಮಕ್ಕಳು ಇದೀಗ ಗೊಂಬೆಗಳ ಶವ ಸಂಸ್ಕಾರ ನಡೆಸುವ ಆಟವಾಡುತ್ತಿದ್ದು, ಸದ್ಯ ಈ ವಿಡಿಯೊ ವೈರಲ್ (Viral Video) ಆಗಿದೆ. ಯುದ್ಧ ಯುವ ತಲೆಮಾರುಗಳ ಮೇಲೆ ಬೀರುವ ಪರಿಣಾಮವನ್ನು ಇದೀಗ ಜಗತ್ತೇ ಆತಂಕದಿಂದ ಗಮನಿಸುತ್ತಿದೆ.
ಹಿಂದೆಲ್ಲ ಮಕ್ಕಳು ಗೊಂಬೆಯ ಮದುವೆಯಂತಹ ಆಟದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಅಂದರೆ ಅವರ ಕಣ್ಣಿಗೆ ಅಂತಹದ್ದೇ ದೃಶ್ಯ ಬೀಳುತ್ತಿತ್ತು. ಆದರೆ ಈಗ ಗಾಜಾದ ಪರಿಸ್ಥಿತಿ ಬದಲಾಗಿದೆ. ಕೆಲವು ವರ್ಷಗಳಿಂದ ನಿರಂತರವಾಗಿ ಗಾಜಾದಲ್ಲಿ ನಡೆಯುತ್ತಿರುವ ಯುದ್ಧ ಮುಗ್ಧ ಮಕ್ಕಳ ಮನಸ್ಸಿನ ಮೇಲೂ ಪರಿಣಾಮ ಬೀರಿದೆ. ಪ್ರತಿದಿನ ಕಣ್ಣಿಗೆ ಬೀಳುವ ಸಾವು, ಶವ ಸಂಸ್ಕಾರದಂತಹ ದೃಶ್ಯಗಳನ್ನೇ ಅವರೂ ತಮ್ಮ ಆಟದಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ. ಮಕ್ಕಳ ಮನಸ್ಸಿನ ಮೇಲೆ ಯುದ್ಧ ಆಳವಾಗಿ ಉಂಟು ಮಾಡುತ್ತಿರುವ ಗಾಯದ ಬಗ್ಗೆ ಜಾಗತಿಕವಾಗಿ ಆತಂಕ ಎದುರಾಗಿದೆ.
ವೈರಲ್ ವಿಡಿಯೊ ಇಲ್ಲಿದೆ:
Gaza children hold funerals for dolls reflecting a generation shaped by war.
— Ika Ferrer Gotić (@IkaFerrerGotic) March 30, 2026
| #GazaGenocide pic.twitter.com/Dcdrd19WJe
ಆತಂಕ ಮೂಡಿಸಿದ ವಿಡಿಯೊ
ಪ್ಯಾಲೆಸ್ತೀನ್‌ನ ಕಂಟೆಂಟ್ ಕ್ರಿಯೇಟರ್ ಶೇರ್ ಮಾಡಿರುವ ಈ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಹುಟ್ಟು ಹಾಕಿದೆ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 5 ಮಕ್ಕಳು ಗೊಂಬೆಯನ್ನು ಮೃತದೇಹದಂತೆ ಹೊತ್ತುಕೊಂಡು ಹೋಗಿ ಅದರ ಅಂತಿಮ ವಿಧಿ ವಿಧಾನ ನರವೇರಿಸುವಂತೆ ಆಡವಾಡುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ.
ಇರಾಕ್‌ನಲ್ಲಿ ಇರಾನ್‌ನ ಶಹೀದ್ ಡ್ರೋನ್ ಹಿಂಬಾಲಿಸಿದ ಅಮೆರಿಕದ ಎಫ್ -15 ಜೆಟ್ ವಿಡಿಯೊ ವೈರಲ್
ಮಕ್ಕಳು ನಿಧಾನವಾಗಿ ನಡೆಯುತ್ತ ಸ್ಟ್ರಚರ್‌ನಂತಹ ವಸ್ತುವನ್ನು ಕೈಗೆತ್ತಿಕೊಳ್ಳುತ್ತಾರೆ. ಅದರಲ್ಲಿ ಗೊಂಬೆಯನ್ನು ಮಲಗಿಸಿ ಸ್ವಲ್ಪ ದೂರ ತೆಗೆದುಕೊಂಡು ಹೋಗಿ ಮಣ್ಣಲ್ಲಿ ಹೂಳುವಂತೆ ಮಾಡಿದ್ದಾರೆ. ತಾವು ದಿನ ಬೆಳಗೆದ್ದು ನೋಡುವ ದೃಶ್ಯವನ್ನೇ ಅವರು ಪುನರಾವರ್ತಿಸಿದ್ದು ನೋಡುಗರ ಕಣ್ಣಂಚು ಒದ್ದೆ ಮಾಡುವಂತಿದೆ. ಖುಷಿ ಖುಷಿಯಿಂದ ಯಾವುದೇ ಚಿಂತೆಯಿಲ್ಲದೆ ಅಡಬೇಕಾದ ಮಕ್ಕಳ ಮನಸ್ಸಿನಲ್ಲಿ ವಿಷಾದವೇ ತುಂಬಿದೆ. ಇದು ಅವರ ಭವಿಷ್ಯದ ಮೇಲೆ ಗಾಢ ಪರಿಣಾಮ ಬೀರಲಿದೆ ಎಂದು ಮನೋ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
ಕಣ್ಣ ಮುಚ್ಚಾಲೆ ಆಡಬೇಕಾದ ಮಕ್ಕಳು ತಮ್ಮ ಗೊಂಬೆಯ ಅಣಕು ಅಂತ್ಯ ಸಂಸ್ಕಾರ ನಡೆಸುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಅವರು ಅನುಭವಿಸುವ ಆಳವಾದ ನೋವಿನ ಪ್ರತಿಬಿಂಬ ಈ ವರ್ತನೆ ಎಂದು ಹಲವರು ವಿಶ್ಲೇಷಿಸಿದ್ದಾರೆ.
ನೆಟ್ಟಿಗರು ಹೇಳಿದ್ದೇನು?
"ನಮಗೆ ನಾಚಿಕೆಯಾಗಬೇಕು. ಶುಭ ಶುಕ್ರವಾರದ ಮುನ್ನಾದಿನ ಈ ಪೋಸ್ಟ್ ನೋಡಿದೆ. ಶಿಲುಬೆಗೇರಿಸುವಿಕೆ ಮುಂದುವರಿದಿದೆ. ಬಾಲ್ಯದ ಕನಸುಗಳು ಮತ್ತು ಮುಗ್ಧತೆ ಶಿಲುಬೆಗೇರಿಸುವಿಕೆಯಾಗಿ ಬದಲಾಗಿದೆ" ಎಂದು ಒಬ್ಬರು ಬರೆದುಕೊಂಡಿದ್ದಾರೆ. ʼʼಈ ಪೀಳಿಗೆ ತಮ್ಮ ಬಾಲ್ಯ, ಮುಗ್ಧತೆ ಕಳೆದುಕೊಂಡಿದೆ. ಜೀವಮಾನದುದ್ದಕ್ಕೂ ಈ ನೋವು ಅವರ ಮನಸ್ಸಿಗೆ ಕಾಡಲಿದೆʼʼ ಎಂದು ಮತ್ತೊಬ್ಬರು ಹೇಳಿದ್ದಾರೆ.
ಪ್ರಿಯಕರನಿಗಾಗಿ ಕಾಲೇಜಿನಲ್ಲಿಯೇ ಜುಟ್ಟು ಹಿಡಿದು ಕಿತ್ತಾಡಿದ ವಿದ್ಯಾರ್ಥಿನಿಯರು
ಮುಂದುವರಿದ ಯುದ್ಧ
ಗಾಜಾದಲ್ಲಿ 2 ವರ್ಷಗಳಿಂದ ನಡೆಯುತ್ತಿರುವ ಯುದ್ಧದಲ್ಲಿ ಇದುವರೆಗೆ ಸುಮಾರು 75,000 ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. 2023ರ ಅಕ್ಟೋಬರ್ 7ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸಿದ ಬಳಿಕ ಯುದ್ಧ ಆರಂಭವಾಯ್ತು. ಸದ್ಯ ಇಲ್ಲಿ ಕದನ ವಿರಾಮ ಒಪ್ಪಂದ ಏರ್ಪಟ್ಟಿದೆ.
ವೈರಲ್ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.