ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

2026ರ ಬೆಂಗಳೂರು ಓಪನ್ ಸೆಪ್ಟೆಂಬರ್ 22ರಂದು ಕೆಜಿಎನಲ್ಲಿ ಆರಂಭ, ಒಂದು ಕೋಟಿ ಬಹುಮಾನ!

ಬೆಂಗಳೂರು ಓಪನ್ ರ2026 ಗಾಲ್ಫ್ ಟೂರ್ನಿಯು ಸೆಪ್ಟೆಂಬರ್ 22ರಿಂದ 25ರವರೆಗೆ ಬೆಂಗಳೂರಿನ ಕರ್ನಾಟಕ ಗಾಲ್ಫ್ ಅಸೋಸಿಯೇಷನ್ (KGA) ಮೈದಾನದಲ್ಲಿ ನಡೆಯಲಿದೆ. ಟೂರ್ನಿಯ ಒಟ್ಟು ಬಹುಮಾನ ಮೊತ್ತ ಒಂದು ಕೋಟಿ ರು ಆಗಿದೆ. ಈ ಟೂರ್ನಿಯಲ್ಲಿ ಒಟ್ಟು 132 ಗಾಲ್ಫ್ ಆಟಗಾರರು ಭಾಗವಹಿಸಲಿದ್ದು, ಇವರಲ್ಲಿ 131 ಮಂದಿ ವೃತ್ತಿಪರರು ಹಾಗೂ ಒಬ್ಬರು ಅಮೆಚೂರ್ ಆಟಗಾರರಾಗಿದ್ದಾರೆ.

2026ರ ಬೆಂಗಳೂರು ಓಪನ್ ಸೆಪ್ಟೆಂಬರ್ 22ರಂದು ಕೆಜಿಎನಲ್ಲಿ ಆರಂಭ!

ಬೆಂಗಳೂರು ಓಪನ್ ರ2026 ಗಾಲ್ಫ್ ಟೂರ್ನಿಯು ಸೆಪ್ಟೆಂಬರ್ 22ರಿಂದ 25ರವರೆಗೆ ನಡೆಯಲಿದೆ. -

Profile
Ramesh Kote Sep 21, 2026 9:39 PM

ಬೆಂಗಳೂರು: ಬೆಂಗಳೂರು ಓಪನ್ 2026ರ (Bangalore Open 2026) ಟೂರ್ನಿಯು ಇಂಡಿಯನ್ಆಯಿಲ್‌ನ ಸಹಯೋಗದೊಂದಿಗೆ ಸೆಪ್ಟೆಂಬರ್ 22ರಿಂದ 25ರವರೆಗೆ ಕರ್ನಾಟಕ ಗಾಲ್ಫ್ ಅಸೋಸಿಯೇಷನ್ (KGA)) ಮೈದಾನದಲ್ಲಿ ನಡೆಯಲಿದೆ. ಟೂರ್ನಿಯ ಒಟ್ಟು ಬಹುಮಾನ ಮೊತ್ತ ಒಂದು ಕೋಟಿ ರು ಆಗಿದೆ. ಐದನೇ ಆವೃತ್ತಿಗೆ ಮರಳಿರುವ ಬೆಂಗಳೂರು ಓಪನ್‌ಗೆ ಇಂಡಿಯನ್ಆಯಿಲ್ ಪ್ರಮುಖ ಸಹಯೋಗಿಯಾಗಿದ್ದು, ಹಿಲ್ಟನ್ ಬೆಂಗಳೂರು ಎಂಬಸಿ ಗಾಲ್ಫ್ ಲಿಂಕ್ಸ್ ಮತ್ತು ಹಿಮಾಲಯನ್ ಈವೆಂಟ್ ಪಾಲುದಾರರಾಗಿವೆ. ಡಿಪಿ ವರ್ಲ್ಡ್ ಪಿಜಿಟಿಐನ ಅಂಬ್ರೆಲ್ಲಾ ಪಾಲುದಾರ ಡಿಪಿ ವರ್ಲ್ಡ್ ಹಾಗೂ ಆಕ್ಸಿಸ್ ಬ್ಯಾಂಕ್, ಅಮೂಲ್, ಎಚ್ಸಿಎಲ್, ಅಮೃತಾಂಜನ್ ಎನರ್ಲೈಟ್, ಏರ್ ಇಂಡಿಯಾ ಮಹಾರಾಜಾ ಕ್ಲಬ್, ಕಲ್ಯಾಣಿ, ಗಾಲ್ಫ್ ಪ್ಲಸ್ ಮಾಸಿಕ ಮತ್ತು ಗಾಲ್ಫ್ ಡಿಸೈನ್ ಇಂಡಿಯಾ ಟೂರ್ ಪಾಲುದಾರರಾಗಿವೆ.

ಈ ಬಾರಿ ಟೂರ್ನಿಯಲ್ಲಿ 132 ಗಾಲ್ಫ್ ಆಟಗಾರರು ಪಾಲ್ಗೊಳ್ಳಲಿದ್ದು, ಇವರಲ್ಲಿ 131 ವೃತ್ತಿಪರರು ಹಾಗೂ ಒಬ್ಬ ಹವ್ಯಾಸಿ ಆಟಗಾರರಿದ್ದಾರೆ. ಡಿಪಿ ವರ್ಲ್ಡ್ ಪಿಜಿಟಿಐ ಆರ್ಡರ್ ಆಫ್ ಮೆರಿಟ್ನ ಅಗ್ರಸ್ಥಾನಿ ಸಪ್ತಕ್ ತಲ್ವಾರ್, ಹನಿ ಬೈಸೋಯಾ, ವೀರ್ ಅಹ್ಲಾವತ್, ಅಕ್ಷಯ್ ಶರ್ಮಾ, ರಶೀದ್ ಖಾನ್ ಮತ್ತು ಖಲೀನ್ ಜೋಶಿ ಸೇರಿದಂತೆ ಭಾರತದ ಪ್ರಮುಖ ವೃತ್ತಿಪರ ಗಾಲ್ಫ್ ಆಟಗಾರರು ಸ್ಪರ್ಧಿಸಲಿದ್ದಾರೆ.

ಏಷ್ಯನ್ ಗೇಮ್ಸ್: ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡ

ಬೆಂಗಳೂರು ಓಪನ್ನಲ್ಲಿ ಭಾಗವಹಿಸುತ್ತಿರುವ ಸಪ್ತಕ್ ತಲ್ವಾರ್ ಮತ್ತು ವೀರ್ ಅಹ್ಲಾವತ್ ಮುಂದಿನ ವಾರ ಜಪಾನ್ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಕಳೆದ ವರ್ಷದ ಡಿಪಿ ವರ್ಲ್ಡ್ ಪಿಜಿಟಿಐ ಆರ್ಡರ್ ಆಫ್ ಮೆರಿಟ್ ಚಾಂಪಿಯನ್ ಯುವರಾಜ್ ಸಂಧು ಕೂಡ ಭಾರತ ತಂಡದ ಭಾಗವಾಗಿದ್ದಾರೆ.

ಸ್ಥಳೀಯ ಆಟಗಾರ ಖಲೀನ್ ಜೋಶಿ ಸೇರಿದಂತೆ ಬೆಂಗಳೂರಿನ ಪ್ರಮುಖ ವೃತ್ತಿಪರ ಗಾಲ್ಫ್ ಆಟಗಾರರಾದ ಚಿಕ್ಕರಂಗಪ್ಪ ಎಸ್., ಅಕ್ಷಯ್ ನೆರಂಜನ್, ಮನೋಜ್ ಎಸ್., ಮಾರಿ ಮುತ್ತು ಆರ್. ಮತ್ತು ವರುಣ್ ಮುತ್ತಪ್ಪ ಸ್ಪರ್ಧಿಸಲಿದ್ದಾರೆ. ಸ್ಥಳೀಯ ಹವ್ಯಾಸಿ ಆಟಗಾರರಾಗಿ ತನಿಶ್ ಆರ್. ಗೌಡ ಕಣಕ್ಕಿಳಿಯಲಿದ್ದಾರೆ.

ವಿದೇಶಿ ಆಟಗಾರರ ಪೈಕಿ ಶ್ರೀಲಂಕಾದ ಎನ್. ಥಂಗರಾಜಾ ಮತ್ತು ಮಿಥುನ್ ಪೆರೇರಾ, ಥಾಯ್ಲೆಂಡ್ನ ತನಪತ್ ಪಿಚೈಕುಲ್, ಜೆಕ್ ಗಣರಾಜ್ಯದ ಸ್ಟೆಪನ್ ಡ್ಯಾನೆಕ್, ನೇಪಾಳದ ಸುಭಾಷ್ ತಮಾಂಗ್, ಬಾಂಗ್ಲಾದೇಶದ ಎಂ.ಡಿ. ಅಕ್ಬರ್ ಹೊಸೈನ್, ಉಗಾಂಡಾದ ಜೋಶುವಾ ಸೀಲ್, ಜಪಾನ್ನ ಕೊಯಿಚಿರೊ ಇಶಿಕಾ ಮತ್ತು ತೈಗಾ ತನಕಾ, ಅಮೆರಿಕದ ಕೊಯಿಚಿರೊ ಸಾಟೊ ಮತ್ತು ಡೊಮಿನಿಕ್ ಪಿಕ್ಕಿರಿಲ್ಲೊ, ದಕ್ಷಿಣ ಆಫ್ರಿಕಾದ ಗೆರ್ಹಾರ್ಡಸ್ ಜಾಕೋಬಸ್ ಪೆಪ್ಲರ್, ಐರ್ಲೆಂಡ್ನ ಡೆಕ್ಲನ್ ಕೆನ್ನಿ ಹಾಗೂ ಕೆನಡಾದ ಸುಖರಾಜ್ ಸಿಂಗ್ ಗಿಲ್ ಪ್ರಮುಖರಾಗಿದ್ದಾರೆ.

2026ರ ಏಷ್ಯನ್ ಗೇಮ್ಸ್ ಕಬಡ್ಡಿ; ಆತಿಥೇಯ ಜಪಾನ್ ವಿರುದ್ಧ ಭಾರತಕ್ಕೆ 49-24 ಅಂತರದ ಜಯ

ಡಿಪಿ ವರ್ಲ್ಡ್ ಪಿಜಿಟಿಐ ಸಿಇಒ ಅಮನ್ದೀಪ್ ಜೋಹಲ್ ಮಾತನಾಡಿ, “ಬೆಂಗಳೂರು ಓಪನ್ ಡಿಪಿ ವರ್ಲ್ಡ್ ಪಿಜಿಟಿಐ ಕ್ಯಾಲೆಂಡರ್ನ ಪ್ರಮುಖ ಟೂರ್ನಿಯಾಗಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದೆ. ದೇಶದ ಅತ್ಯುತ್ತಮ ಗಾಲ್ಫ್ ಮೈದಾನಗಳಲ್ಲಿ ಒಂದಾದ ಕೆಜಿಎನಲ್ಲಿ ನಮ್ಮ ಆಟಗಾರರಿಗೆ ಸ್ಪರ್ಧಿಸಲು ಉತ್ತಮ ವೇದಿಕೆ ದೊರೆಯುತ್ತಿದೆ. ಬೆಂಗಳೂರಿಗೆ ಮರಳಲು ಸಂತೋಷವಾಗಿದ್ದು, ಟೂರ್ನಿಗೆ ನಿರಂತರ ಬೆಂಬಲ ನೀಡುತ್ತಿರುವ ಇಂಡಿಯನ್ಆಯಿಲ್ಗೆ ಹಾಗೂ ಭಾರತದಲ್ಲಿ ವೃತ್ತಿಪರ ಗಾಲ್ಫ್ ಬೆಳವಣಿಗೆಗೆ ನೀಡುತ್ತಿರುವ ದೀರ್ಘಕಾಲದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ. ಬೆಂಗಳೂರಿನಲ್ಲಿ ಗಾಲ್ಫ್ಗೆ ಅಪಾರ ಅಭಿಮಾನಿಗಳಿದ್ದು, ಬಲಿಷ್ಠ ಆಟಗಾರರ ತಂಡದೊಂದಿಗೆ ಮತ್ತೊಂದು ರೋಚಕ ವಾರವನ್ನು ಎದುರು ನೋಡುತ್ತಿದ್ದೇವೆ. ಬೆಂಗಳೂರು ಓಪನ್ 2026 ಮತ್ತೊಮ್ಮೆ ಡಿಪಿ ವರ್ಲ್ಡ್ ಪಿಜಿಟಿಐನಲ್ಲಿರುವ ಪ್ರತಿಭೆಯ ಆಳವನ್ನು ಪ್ರದರ್ಶಿಸಿ, ಆಟಗಾರರು ಮತ್ತು ಅಭಿಮಾನಿಗಳಿಗೆ ಸ್ಮರಣೀಯ ಕ್ಷಣಗಳನ್ನು ನೀಡಲಿದೆ ಎಂಬ ವಿಶ್ವಾಸವಿದೆ” ಎಂದರು.

125 ಎಕರೆ ಪ್ರದೇಶದಲ್ಲಿ ಹರಡಿರುವ ಕರ್ನಾಟಕ ಗಾಲ್ಫ್ ಅಸೋಸಿಯೇಷನ್ (ಕೆಜಿಎ) ವಿಶ್ವಮಟ್ಟದ ಫೇರ್ವೇಗಳು ಮತ್ತು ಗ್ರೀನ್ಗಳೊಂದಿಗೆ ಅನೇಕ ಜಲತೊಡಕುಗಳನ್ನು ಹೊಂದಿದೆ. ಇಲ್ಲಿನ ಬದಲಾಗುವ ಗಾಳಿಯ ಪರಿಸ್ಥಿತಿಯು ಕೆಜಿಎ ಅನ್ನು ಭಾರತದ ಅತ್ಯಂತ ಸವಾಲಿನ ಗಾಲ್ಫ್ ಮೈದಾನಗಳಲ್ಲಿ ಒಂದನ್ನಾಗಿ ಮಾಡಿದೆ.