ಬೀಜಿಂಗ್, ಡಿ. 27: ಇಂದು ಜಗತ್ತಿನಾದ್ಯಂತ ತಂತ್ರಜ್ಞಾನ ಎಂಬುದು ಅಭಿವೃದ್ಧಿಯಾಗಿದೆ. ಇದರಿಂದಾಗಿ ಜೈವಿಕ ತಂತ್ರಜ್ಞಾನ, ವಿಜ್ಞಾನ, ಕೃಷಿ ಮತ್ತು ವೈದ್ಯಕೀಯ ಹೀಗೆ ಎಲ್ಲ ಕ್ಷೇತ್ರದಲ್ಲೂ ಅಭಿವೃದ್ಧಿ ಹೊಂದುತ್ತಿದ್ದೇವೆ. ಅಂತೆಯೇ ಸಾರಿಗೆ ಕ್ಷೇತ್ರದಲ್ಲಿ ಚೀನಾವು ಇದೀಗ ಎಲ್ಲರೂ ಶಹಬಾಸ್ ಎನ್ನುವಂತಹ ಪಟ್ಟವೊಂದನ್ನು ಪಡೆದಿದೆ. ಚೀನಾ ಅತೀ ವೇಗವಾಗಿ ಚಲಿಸುವ ರೈಲು ವೊಂದನ್ನು ನಿರ್ಮಿಸಿ ವಿಶ್ವ ದಾಖಲೆಯನ್ನು ಮಾಡಿದೆ. ಚೀನಾದ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿರುವ ಹೊಸ ಮ್ಯಾಗ್ಲೆವ್ (Maglev)ರೈಲು ಕೇವಲ ಎರಡೇ ಸೆಕೆಂಡ್ ನಲ್ಲಿ ಗಂಟೆಗೆ 700 ಕಿಲೋಮೀಟರ್ ವೇಗದಲ್ಲಿ ಪ್ರಯಾಣಿಸುವ ಮೂಲಕ ಮಹತ್ತರ ಸಾಧನೆ ಮಾಡಿದೆ. ಸದ್ಯ ಈ ವಿಡಿಯೊ ಭಾರೀ ವೈರಲ್ (Viral Video) ಆಗಿದೆ.
ಚೀನಾದ ರಾಷ್ಟ್ರೀಯ ರಕ್ಷಣಾ ತಂತ್ರಜ್ಞಾನ ವಿಶ್ವವಿದ್ಯಾಲಯದ ಸಂಶೋಧಕರು ಮ್ಯಾಗ್ನೆಟಿಕ್ ಲೆವಿಟೇಶನ್ ರೈಲಿನಲ್ಲಿ ಈ ಪರೀಕ್ಷೆಯನ್ನು ನಡೆಸಿದ್ದಾರೆ. ಕೇವಲ 400 ಮೀಟರ್ ಉದ್ದದ ಟ್ರ್ಯಾಕ್ ನಲ್ಲಿ ಈ ವೇಗವನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ರೈಲನ್ನು ನಿಲ್ಲಿಸಲಾಗಿದೆ. ಸುಮಾರು 1,000 ಕೆಜಿ ತೂಕದ ಈ ರೈಲು ಕೇವಲ ಎರಡೇ ಸೆಕೆಂಡ್‌ನಲ್ಲಿ 700 ಕಿ.ಮೀ ವೇಗದಲ್ಲಿ ಚಲಿಸುವ ಮೂಲಕ ಎಲ್ಲರನ್ನು ಬೆರಗುಗೊಳಿಸುವಂತೆ ಮಾಡಿದೆ.
ವಿಡಿಯೋ ನೋಡಿ:
ಇದು 'ಸೂಪರ್ ಕಂಡಕ್ಟಿಂಗ್ ಎಲೆಕ್ಟ್ರಿಕ್ ಮ್ಯಾಗ್ಲೆವ್' ತಂತ್ರಜ್ಞಾನವನ್ನು ಬಳಸಿಕೊಂಡಿದೆ. ಇದು ಇದುವರೆಗಿನ ಅತ್ಯಂತ ವೇಗದ ಸೂಪರ್ ಕಂಡಕ್ಟಿಂಗ್ ಎಲೆಕ್ಟ್ರಿಕ್ ಮ್ಯಾಗ್ಲೆವ್ ರೈಲು ಎಂದು ಪರಿಗಣಿಸಲಾಗಿದೆ. ಇದರ ವೇಗವರ್ಧನೆ ಎಷ್ಟು ಹೆಚ್ಚಾಗಿದೆ ಅಂದ್ರೆ ಅದು ರಾಕೆಟ್ ಅನ್ನು ಉಡಾವಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ರೈಲು ಮಿಂಚಿನಂತೆ ಹಾದು ಹೋಗಿದ್ದು, ನೋಡುಗರಿಗೆ ಇದು ಸಿನಿಮಾಯ ದೃಶ್ಯದಂತೆ ಕಂಡಿದೆ.
Viral Video: ಸಂಸತ್ತಿನಲ್ಲಿಯೇ ಸಿಗರೇಟ್ ಸೇದಿದ ಟಿಎಂಸಿ ಸಂಸದ; ವಿಡಿಯೋ ವೈರಲ್
ಇದೇ ಎಲೆಕ್ಟ್ರೋಮ್ಯಾಗ್ನೆಟಿಕ್ ತಂತ್ರಜ್ಞಾನವನ್ನು ರಾಕೆಟ್‌ಗಳನ್ನು ಉಡಾವಣೆ ಮಾಡಲು ಬಳಸ ಬಹುದು ಎಂದು ಹೆಚ್ಚಿನವರು ಈ ಬಗ್ಗೆ ಸಲಹೆ ನೀಡಿದ್ದಾರೆ. ಈ ಯೋಜನೆಯ ಬಗ್ಗೆ ಹಿಂದೆ ಚೀನಾದ ವಿಜ್ಞಾನಿಗಳು ಕಳೆದ 10 ವರ್ಷಗಳಿಂದ ಶ್ರಮ ಪಟ್ಟಿದ್ದರು. ಇದೇ ವರ್ಷದ ಜನವರಿಯಲ್ಲಿ ಈ ರೈಲು 648 ಕಿ.ಮೀ ವೇಗ ಪ್ರಯಾಣ ಮಾಡಿತ್ತು. ಇದೀಗ 700 ಕಿ.ಮೀ ವೇಗ ತಲುಪುವ ಮೂಲಕ ಸಾರಿಗೆ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿ ಹೆಸರು ಮಾಡಿದೆ.