ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಅಯ್ಯಯ್ಯೋ! ಅಂತ್ಯಕ್ರಿಯೆ ವೇಳೆ ಶವಪೆಟ್ಟಿಗೆಯಿಂದ ಜೀವಂತವಾಗಿ ಎದ್ದು ಬಂದ ಮಹಿಳೆ: ವಿಡಿಯೋ ನೋಡಿ

ಮೃತ ಹೊಂದಿದ್ದ ಮಹಿಳೆಯೊಬ್ಬರು ಅಂತ್ಯಕ್ರಿಯೆ ವೇಳೆ ಬದುಕಿಬಂದ ಘಟನೆ ಬ್ಯಾಂಕಾಕ್‌ನ ಹೊರ ವಲಯದಲ್ಲಿರುವ ಬೌದ್ಧ ದೇವಾಲಯವಾದ ವಾಟ್ ರಾಟ್ ಪ್ರಖೋಂಗ್ ಥಾಮ್‌ನಲ್ಲಿ ನಡೆದಿದೆ. 65 ವರ್ಷದ ಮಹಿಳೆ ಅನೇಕ ಸಮಯದಿಂದಲೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಎರಡು ದಿನಗಳ ಹಿಂದೆ ಅಸುನೀಗಿದ್ದಾರೆ. ಬಳಿಕ ಅವರನ್ನು ಬೌದ್ಧ ದೇವಾಲಯವಾದ ವಾಟ್ ರಾಟ್ ಪ್ರಖೋಂಗ್ ಥಾಮ್‌ಗೆ ಕರೆದೊಯ್ಯಲಾಯಿತು. ಅಲ್ಲಿ ಅಂತಿಮ ವಿಧಿ ವಿಧಾನಗಳ ಪ್ರಕ್ರಿಯೆ ನಡೆಯುತ್ತಿದ್ದಾಗ ಶವ ಪೆಟ್ಟಿಗೆಯೊಳಗೆ ವಿಚಿತ್ರ ತರನಾಗಿ ಶಬ್ಧವಾಗಿದೆ. ಇದನ್ನು ಕಂಡು ಆ ದೇವಾಲಯದ ಸಿಬ್ಬಂದಿಯೇ ದಿಗ್ಭ್ರಮೆಗೊಂಡಿದ್ದು ಸದ್ಯ ಈ ಸುದ್ದಿ ವೈರಲ್ ಆಗುತ್ತಿದೆ.

ಶವಪೆಟ್ಟಿಗೆಯಿಂದ ಜೀವಂತವಾಗಿ ಎದ್ದು ಬಂದ ಮಹಿಳೆ: ವಿಡಿಯೊ ವೈರಲ್

ಶವಪೆಟ್ಟಿಗೆಯಿಂದ ಜೀವಂತವಾಗಿ ಎದ್ದು ಬಂದ ಮಹಿಳೆ -

Profile
Pushpa Kumari Nov 25, 2025 8:03 PM

ಬ್ಯಾಂಕಾಕ್‌: ಆಧುನಿಕ ಜಗತ್ತಿನಲ್ಲಿ ಕೆಲವೊಂದು ವಿಚಿತ್ರ ಸಂಗತಿಗಳು ಆಗಾಗ ನಡೆಯುತ್ತಲೇ ಇರುತ್ತವೆ. ಅಪಘಾತದಲ್ಲಿ ಪಾರಾಗುವುದು, ಪ್ರಕೃತಿಯ ವಿಸ್ಮಯಗಳು ಇಂತಹ ಹಲವು ಘಟನೆ ಯನ್ನು ಕಾಣಬಹುದು. ಅಂತೆಯೇ ಮೃತ ಹೊಂದಿದ್ದ ಮಹಿಳೆಯೊಬ್ಬರು ಅಂತ್ಯಕ್ರಿಯೆ ವೇಳೆ ಬದುಕಿಬಂದ ಘಟನೆ ಬ್ಯಾಂಕಾಕ್‌ನ ಹೊರವಲಯದಲ್ಲಿರುವ ಬೌದ್ಧ ದೇವಾಲಯವಾದ ವಾಟ್ ರಾಟ್ ಪ್ರಖೋಂಗ್ ಥಾಮ್‌ನಲ್ಲಿ ನಡೆದಿದೆ. 65 ವರ್ಷದ ಮಹಿಳೆ ಅನೇಕ ಸಮಯದಿಂದಲೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಎರಡು ದಿನಗಳ ಹಿಂದೆ ಅಸುನೀಗಿದ್ದರು. ಬಳಿಕ ಅವರನ್ನು ಬೌದ್ಧ ದೇವಾಲಯವಾದ ವಾಟ್ ರಾಟ್ ಪ್ರಖೋಂಗ್ ಥಾಮ್‌ಗೆ (Viral News) ಕರೆದೊಯ್ಯಲಾಯಿತು. ಅಲ್ಲಿ ಅಂತಿಮ ವಿಧಿ ವಿಧಾನಗಳ ಪ್ರಕ್ರಿಯೆ ನಡೆಯುತ್ತಿದ್ದಾಗ ಶವಪೆಟ್ಟಿಗೆಯೊಳಗೆ ವಿಚಿತ್ರ ತರನಾಗಿ ಶಬ್ಧವಾಗಿದೆ. ಇದನ್ನು ಕಂಡು ಆ ದೇವಾಲಯದ ಸಿಬ್ಬಂದಿಯೇ ದಿಗ್ಭ್ರಮೆಗೊಂಡಿದ್ದಿರು. ಮುಂದೆ ನಡೆದಿದ್ದೆಲ್ಲವೂ ಪವಾಡವೇ ಸದ್ಯ ಈ ಸುದ್ದಿ ವೈರಲ್ ಆಗುತ್ತಿದೆ.

ವರದಿಯ ಪ್ರಕಾರ, ಮಹಿಳೆಯನ್ನು ಚೊಂತಿರತ್ ಸಕುಲ್ಕೂ ಎಂದು ಗುರುತಿಸಲಾಗಿದೆ. ಮಹಿಳೆ ಸುಮಾರು ಎರಡು ವರ್ಷಗಳಿಂದ ಹಾಸಿಗೆ ಹಿಡಿದಿದ್ದರು. ಅವರ ಆರೋಗ್ಯ ತುಂಬಾ ಹದಗೆಟ್ಟಿದ್ದು ಎರಡು ದಿನಗಳ ಹಿಂದೆ ಅವರು ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರು. ಬಳಿಕ ಅವರನ್ನು ಪರಿಶೀಲಿಸಿದಾಗ ನಿಧನರಾಗಿದ್ದು ತಿಳಿದುಬಂದಿದೆ. ಆಕೆಯ ಸಹೋದರ ಮೊಂಗ್ಕೋಲ್ ಸಕುಲ್ಕೂ ಆಕೆಯನ್ನು ಶವಪೆಟ್ಟಿಗೆಯಲ್ಲಿ ಇರಿಸಿ ಸುಮಾರು ಐದು ನೂರು ಕಿಲೋಮೀಟರ್ ದೂರ ಬ್ಯಾಂಕಾಕ್‌ಗೆ ಕರೆದೊಯ್ದರು.

ವಿಡಿಯೊ ಇಲ್ಲಿದೆ:



ಆಕೆ ಮರಣಹೊಂದುವ ಮೊದಲೇ ಅಲ್ಲಿನ ಆಸ್ಪತ್ರೆಗೆ ತಮ್ಮ ಅಂಗಾಂಗಗಳನ್ನು ದಾನ ಮಾಡಲು ಸಹಿ ಹಾಕಿದ್ದರಂತೆ. ಹೀಗಾಗಿ ಮಹಿಳೆಯ ಸಹೋದರ ಸಂಬಂಧ‌ ಆಸ್ಪತ್ರೆಗೆ ಅಂಗಾಗ ದಾನ ಮಾಡಿಸಲು ತಿಳಿಸಿದ್ದಾನೆ. ಆದರೆ ಸಹೋದರನ ಬಳಿ ಅಧಿಕೃತ ಮರಣ ಪ್ರಮಾಣಪತ್ರವಿಲ್ಲದ ಕಾರಣ ಆಸ್ಪತ್ರೆ ಆಕೆಯ ದೇಹವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಪರಿಣಾಮವಾಗಿ ಅತ್ತ ಅಂಗಾಗ ದಾನವು ಇಲ್ಲದೆ ಇತ್ತ ಅಂತ್ಯಕ್ರಿಯೆಯೂ ಮಾಡಲಾಗಲಿಲ್ಲ.

ಇದನ್ನು ಓದಿ:Viral Video: ಕಾಳಿ ಮಾತೆಯ ವಿಗ್ರಹಕ್ಕೆ ಮದರ್‌ ಮೇರಿಯ ಅಲಂಕಾರ....ಕನಸಲ್ಲಿ ಬಂದು ದೇವಿಯೇ ಹೇಳಿದ್ಳಂತೆ!

ಬೇರೆ ದಾರಿ ಕಾಣದೆ ಮಹಿಳೆಯ ಸಹೋದರನು ದೇವಾಲಯವು ನೀಡುವ ಉಚಿತ ಅಂತ್ಯಕ್ರಿಯೆ ಸೇವೆಗಾಗಿ ದೇವಾಲಯವನ್ನು ಸಂಪರ್ಕಿಸಿದ್ದಾರೆ. ಅಗತ್ಯ ದಾಖಲೆಗಳಿಲ್ಲದೆ ಮುಂದುವರಿಯಲು ಅಲ್ಲಿ ಕೂಡ ನಿರಾಕರಿಸಿದರು. ಹೀಗಾಗಿ ಅಂತಿಮ ಕ್ರಿಯೆಗೂ ಮೊದಲು ಮರಣ ಪ್ರಮಾಣಪತ್ರ ಪಡೆಯುವ ವಿಧಾನವನ್ನು ವ್ಯಕ್ತಿಯೊಬ್ಬ ವಿವರಿಸುತ್ತಿದ್ದಾಗ ಶವಪೆಟ್ಟಿಗೆಯಿಂದ ಶಬ್ದ ಕೇಳಿಸಿತು ಎಂದು ವರದಿಯೊಂದರಲ್ಲಿ ತಿಳಿದು ಬಂದಿದೆ.

ಪಿಕಪ್ ಟ್ರಕ್‌ನ ಹಿಂಭಾಗದಲ್ಲಿ ಬಿಳಿ ಶವಪೆಟ್ಟಿಗೆಯಲ್ಲಿ ಮಹಿಳೆ ಮಲಗಿರುವ ವೀಡಿಯೊವನ್ನು ದೇವಾಲಯವು ತನ್ನ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದೆ. ವೈರಲ್ ಆದ ವಿಡಿಯೋ ದಲ್ಲಿ ಆಕೆಯ ತೋಳುಗಳು ಮತ್ತು ತಲೆ ಸ್ವಲ್ಪ ಚಲಿಸುತ್ತಿರುವುದನ್ನು ಕಾಣಬಹುದು, ಇದನ್ನು ಕಂಡು ಸಿಬ್ಬಂದಿಯು ಆಶ್ಚರ್ಯಚಕಿತರಾಗಿದ್ದಾರೆ. ಬಳಿಕ ಆಕೆಯನ್ನು ಅಲ್ಲಿನ ಸಿಬ್ಬಂದಿಯವರು ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.. ಆಕೆಯ ವೈದ್ಯಕೀಯ ವೆಚ್ಚವನ್ನು ದೇವಾಲಯವು ಭರಿಸುವುದಾಗಿ ದೇವಾಲಯದ ಮಠಾಧೀಶರು ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.