ನವದೆಹಲಿ: ಬೊಜ್ಜಿನ ಸಮಸ್ಯೆ ಇರುವವರಿಗೆ ಸಣ್ಣ ಆಗಬೇಕು ಎಂಬ ಆಸೆ ಹಂಬಲ ಇದ್ದೇ ಇರುತ್ತದೆ. ಇಂತಹ ಬೊಜ್ಜನ್ನು ಕರಗಿಸಲು ಬಹುತೇಕರು ನೈಸರ್ಗಿಕ ಕ್ರಮದಲ್ಲಿ ಡಯೆಟ್ ವರ್ಕೌಟ್ ಎಂದು ಮಾಡುತ್ತಾರೆ. ಆದರೆ ಇನ್ನು ಕೆಲವರು ಆಪರೇಶನ್, ಸರ್ಜರಿ, ಇತರ ಔಷಧಗಳ ಸೇವನೆಗೆ ಮುಂದಾಗುತ್ತಾರೆ. ಅಂತೆಯೇ ವ್ಯಕ್ತಿಯೊಬ್ಬರು ತನ್ನ ಗರ್ಲ್ ಫ್ರೆಂಡ್ ನ ಪೋಷಕರನ್ನು (girlfriend’s parents) ಮೆಚ್ಚಿಸಲೆಂದು ತೂಕ ಇಳಿಸಲು ಹೋಗಿ ಸಾವನಪ್ಪಿದ್ದ ಘಟನೆ ಚೀನಾದಲ್ಲಿ ನಡೆದಿದೆ. ಚೀನಾ ದೇಶದ ಹೆನಾನ್ ಪ್ರಾಂತ್ಯದ ಕ್ಸಿನ್ಕ್ಸಿಯಾಂಗ್ ನಗರದ ನಿವಾಸಿ 36 ವರ್ಷದ ಲೀ ಜಿಯಾಂಗ್ (Li Jiang) ಎನ್ನುವವರು ಅತಿಯಾದ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ತಾನು ದೇಹದ ತೂಕವನ್ನು ಇಳಿಸಿಕೊಂಡು, ತನ್ನ ಗೆಳತಿಯ ಪೋಷಕರನ್ನು ಮೆಚ್ಚಿಸಬೇಕು ಉದ್ದೇಶಕ್ಕೆ ಆತ ಗ್ಯಾಸ್ಟ್ರಿಕ್ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಆದರೆ ಶಸ್ತ್ರ ಚಿಕಿತ್ಸೆ ಬಳಿಕ ಆರೋಗ್ಯ ಸಮಸ್ಯೆಯಿಂದ ಆತ ಸಾವನ್ನಪ್ಪಿದ್ದು ಸದ್ಯ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದೆ.
ಲೀ ಜಿಯಾಂಗ್ ಅವರು ದೀರ್ಘಕಾಲದಿಂದಲೂ ಬೊಜ್ಜುತನದ ಸಮಸ್ಯೆಯಿಂದ ಬಳಲುತ್ತಿದ್ದರು. ಅವರು 134 ಕೆಜಿ ದೇಹದ ತೂಕ ಹೊಂದಿದ್ದು ದೇಹದ ತೂಕ ಇಳಿಸಲು ಆಹಾರ ಪದ್ಧತಿಯನ್ನು ನಿಯಂತ್ರಿಸಲು ಮುಂದಾಗುತ್ತಾರೆ. ಇದರಿಂದ ಅವರಿಗೆ ಆರೋಗ್ಯ ಸಮಸ್ಯೆ ಕೂಡ ಉಂಟಾಗಿದೆ. ಇನ್ನೊಂದು ಕಡೆ ಆತನ ಗರ್ಲ್ ಫ್ರೆಂಡ್ ಮನೆಯಲ್ಲಿ ಭೇಟಿಯಾಗಲು ಕರೆಯುತ್ತಿದ್ದು ಮದುವೆ ಮಾತು ಕತೆ ಕೂಡ ನಡೆದಿತ್ತು. ಹೇಗಾದರೂ ಮಾಡಿ ತನ್ನ ಗರ್ಲ್ ಫ್ರೆಂಡ್ ಪೋಷಕರು ಈ ಮದುವೆಗೆ ಒಪ್ಪುವಂತೆ ಮಾಡಬೇಕು, ಅಷ್ಟರ ಒಳಗೆ ದೇಹ ಸಣ್ಣದಾಗಬೇಕೆಂದು ಶಸ್ತ್ರಚಿಕಿತ್ಸೆಯ ವಿಧಾನವನ್ನು ಅನುಸರಿಸಲು ಆತ ಮುಂದಾಗಿದ್ದಾರೆ.
ಶಸ್ತ್ರಚಿಕಿತ್ಸೆಗಾಗಿ ಲೀ ಅವರನ್ನು ಸೆಪ್ಟೆಂಬರ್ 30 ರಂದು ಝೆಂಗ್‌ಝೌನಲ್ಲಿರುವ ಪೀಪಲ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಅಕ್ಟೋಬರ್ 2 ರಂದು ಶಸ್ತ್ರಚಿಕಿತ್ಸೆ ನಡೆಸಿ ಈ ಆಪರೇಷನ್ ಸಕ್ಸಸ್ ಆಗಿತ್ತು. ಅನಂತರ, ಅವರನ್ನು ಐಸಿಯು ಗೆ ಕಳಿಸಲಾಯಿತು. ಆದರೆ ಆತನ ದೇಹದಲ್ಲಿ ಚೇತರಿಕೆಯ ಲಕ್ಷಣಗಳು ಕಂಡುಬಂದಿದ್ದು ಜನರಲ್ ವಾರ್ಡ್‌ಗೆ ಆತನನ್ನು ಸ್ಥಳಾಂತರಿಸಲಾಯಿತು.
ಇದನ್ನೂ ಓದಿ:Viral News: ಧಾರ್ಮಿಕ ಸಾಮರಸ್ಯ ಎಂದರೆ ಇದೇನೆ; ಮುಸ್ಲಿಂ ಕುಟುಂಬದಿಂದ ಹಿಂದೂ ದೇವಸ್ಥಾನಕ್ಕೆ ಭೂಮಿ ದಾನ
ಅಕ್ಟೋಬರ್ 4 ರ ಬೆಳಿಗ್ಗೆ 6.40 ರ ಸುಮಾರಿಗೆ ಲೀ ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದಾರೆ. ಲೀ ಅವರಿಗೆ ಉಸಿರಾಟದ ಸಮಸ್ಯೆ ಎದುರಾಗಿದ್ದಕ್ಕೆ ಆಸ್ಪತ್ರೆಯ ಸಿಬ್ಬಂದಿ ಅವರನ್ನು ಐಸಿಯುಗೆ ಶಿಫ್ಟ್ ಮಾಡಿದ್ದಾರೆ. ಆದರೆ ವೈದ್ಯರ ಅನೇಕ ಪ್ರಯತ್ನಗಳ ಹೊರತಾಗಿಯೂ ಲೀ ಅವರು ಅಕ್ಟೋಬರ್ 5 ರಂದು ನಿಧನರಾದರು. ಸಾವಿಗೆ ಕಾರಣ ಉಸಿರಾಟದ ಸಮಸ್ಯೆ ಕಾರಣ ಎಂದು ಆಸ್ಪತ್ರೆಯ ರಿಪೋರ್ಟ್ ನಲ್ಲಿ ದಾಖಲಿಸಲಾಗಿದೆ.
ಆದರೆ ಲೀ ಅವರ ವೈದ್ಯಕೀಯ ದಾಖಲೆಗಳು ಅವರಿಗೆ ಈ ಹಿಂದಿನಿಂದಲೂ ಆರೋಗ್ಯ ಸಮಸ್ಯೆ ಇತ್ತು ಎಂಬುದನ್ನು ತಿಳಿಸಿದೆ. ಅವರು ಜೋರಾಗಿ ಗೊರಕೆ ಹೊಡೆಯುವುದು, ಮೆಟಾಬಾಲಿಕ್ ಸಿಂಡ್ರೋಮ್, ಅಧಿಕ ರಕ್ತದೊತ್ತಡ ಮತ್ತು ಕೊಬ್ಬಿನ ಪಿತ್ತಜನ ಕಾಂಗದ ಕಾಯಿಲೆಯಿಂದ ಬಳಲು ತ್ತಿದ್ದರು. ಇಷ್ಟೆಲ್ಲ ಆರೋಗ್ಯ ಹದಗೆಟ್ಟಿದ್ದಾಗಲೇ ತೂಕ ಇಳಿಸಲು ಶಸ್ತ್ರಚಿಕಿತ್ಸೆ ಮಾಡಿಸಿದ್ದು ಅವರ ಸಾವಿಗೆ ಕಾರಣವಾಗಿದೆ
ಲೀ ಅವರ ಅಣ್ಣ ಈ ಬಗ್ಗೆ ಮಾಧ್ಯಮದ ಮುಂದೆ ಪ್ರತಿಕ್ರಿಯೆ ನೀಡಿ ಮಾತನಾಡಿ, ತನ್ನ ಗೆಳತಿಯ ಪೋಷಕರನ್ನು ಭೇಟಿಯಾಗುವ ಮೊದಲು ಸ್ಲಿಮ್ ಆಗಬೇಕೆಂದು ಆತ ಬಯಸಿದ್ದಾಗಿ ಹೇಳಿ ರುವುದಾಗಿ ಅವರು ತಿಳಿಸಿದ್ದಾರೆ. ಲೀ ಸಾವಿಗೆ ಕಾರಣ ತಿಳಿಯಲು ಪೋಸ್ಟ್ ಮಾಟಂ ರಿಪೋರ್ಟ್ ಮಾಡಲು ತಿಳಸಿದ್ದೇವೆ. ಶವಪರೀಕ್ಷೆಯಲ್ಲಿ ಆಸ್ಪತ್ರೆಯಿಂದ, ಸಿಬಂದಿಗಳಿಂದ ಯಾವುದಾದರೂ ತಪ್ಪುಗಳು ಅಥವಾ ನಿರ್ಲಕ್ಷ್ಯ ಕಂಡುಬಂದರೆ ಕಾನೂನಿನ ಪ್ರಕಾರ ಆಸ್ಪತ್ರೆಯೇ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತದೆ ಎಂದು ಚಿಕಿತ್ಸೆ ನೀಡಿದ್ದ ಆಸ್ಪತ್ರೆ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಒಟ್ಟಾರೆ ಸಣ್ಣದಾಗಬೇಕು ಎಂಬ ಕಾರಣಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಿ ವ್ಯಕ್ತಿ ಸಾವನಪ್ಪಿದ್ದ ಈ ಸುದ್ದಿ ಸೋಶಿಯಲ್ ಮಿಡಿಯಾದಲ್ಲಿ ಸಂಚಲನ ಉಂಟುಮಾಡಿದೆ.