ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ರಮಾಣ ವಚನ ಸಮಾರಂಭದಲ್ಲಿ ವಂದೇ ಮಾತರಂ ಪಠಣ: ಕೇರಳದಲ್ಲಿ ವಿವಾದ

ಕೇರಳದ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪೂರ್ಣವಾಗಿ ವಂದೇ ಮಾತರಂ ಹಾಡಿರುವುದು ಈಗ ವಿವಾದವನ್ನು ಎಬ್ಬಿಸಿದೆ. ಇದು ಎಡಪಂಥೀಯರು ಮತ್ತು ಬಿಜೆಪಿ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ಪೂರ್ಣವಾಗಿ ವಂದೇ ಮಾತರಂ ಹಾಡಿರುವುದು ಎಡಪಂಥೀಯರು ಟೀಕಿಸಿದ್ದರೆ, ಬಿಜೆಪಿ ಇದು ತಪ್ಪು ಎಂದು ಹೇಳಿದೆ.

ಸಂಗ್ರಹ ಚಿತ್ರ

ಕೇರಳ: ಮುಖ್ಯಮಂತ್ರಿ ವಿ.ಡಿ. ಸತೀಶನ್ ( kerala cm V. D. Satheesan) ಅವರ ಪ್ರಮಾಣ ವಚನ (kerala oath taking ceremony) ಸ್ವೀಕಾರ ಸಮಾರಂಭದಲ್ಲಿ ಸೋಮವಾರ ಪೂರ್ಣವಾಗಿ ವಂದೇ ಮಾತರಂ ಗೀತೆಯನ್ನು (Vande Mataram Controversy) ಹಾಡಿರುವುದು ಈಗ ಕೇರಳದಲ್ಲಿ (kerala) ವಿವಾದಕ್ಕೆ ಕಾರಣವಾಗಿದೆ. ಪೂರ್ಣವಾಗಿ ವಂದೇ ಮಾತರಂ ಹಾಡಿರುವುದು ಎಡಪಂಥೀಯರು ಟೀಕಿಸಿದ್ದರೆ, ಬಿಜೆಪಿ ಇದನ್ನು ತಪ್ಪು ಹೆಜ್ಜೆ ಎಂದು ಹೇಳಿದೆ. ಇದು ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಆದರೆ ಈ ವಿವಾದದಿಂದ ಹೊಸ ಸರ್ಕಾರ ದೂರವೇ ಉಳಿದಿದ್ದು,ಈ ಕಾರ್ಯಕ್ರಮವನ್ನು ಲೋಕ ಭವನ ಆಯೋಜಿಸಿದ್ದು, ಇದರಲ್ಲಿ ತಮ್ಮ ಪಾತ್ರವಿಲ್ಲ ಎಂದು ಹೇಳಿದೆ.

ಕೇರಳದಲ್ಲಿ ಸೋಮವಾರ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸಚಿವ ಸಂಪುಟದ ಪ್ರಮಾಣ ವಚನ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಗೀತೆಯಾದ "ವಂದೇ ಮಾತರಂ" ಅನ್ನು ಪೂರ್ಣವಾಗಿ ಹಾಡಲಾಗಿದೆ. ಇದು ದಕ್ಷಿಣ ಭಾರತದ ರಾಜ್ಯದಲ್ಲಿ ವಿವಾದವನ್ನು ಉಂಟು ಮಾಡಿದೆ.

ಪ್ರಧಾನಿ ಮೋದಿಯನ್ನು ಹಾವಾಡಿಗನಂತೆ ಬಿಂಬಿಸಿದ ನಾರ್ವೆ ಪತ್ರಿಕೆ: ಜನಾಂಗೀಯ ನಿಂದನೆಗೆ ತೀವ್ರ ಆಕ್ರೋಶ

ಪ್ರಮಾಣ ವಚನ ಸಮಾರಂಭದಲ್ಲಿ ಪೂರ್ಣವಾಗಿ ವಂದೇ ಮಾತರಂ ಹಾಡಿರುವುದನ್ನು ಎಡಪಂಥೀಯರು ಟೀಕಿಸಿದ್ದು, ಇದು ತಪ್ಪು, ಬಹು ಸಂಖ್ಯಾತ ಸಮಾಜದಲ್ಲಿ ಅನುಚಿತ ನಡೆಯಾಗಿದೆ ಎಂದು ಹೇಳಿದೆ. ಇನ್ನೊಂದೆಡೆ ಬಿಜೆಪಿಯು ಜಮಾತೆ-ಇ-ಇಸ್ಲಾಮಿ ಮತ್ತು ಎಸ್‌ಡಿಪಿಐನಂತಹ ಮೂಲಭೂತವಾದಿ ಮತಬ್ಯಾಂಕ್ ಶಕ್ತಿಗಳನ್ನು ಸಮಾಧಾನಪಡಿಸಲು ಕಮ್ಯುನಿಸ್ಟರು ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದೆ.

ಇದಕ್ಕೂ ಮೊದಲು ಮಂಗಳವಾರ ಸಿಪಿಐಎಂ ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರಮಾಣ ವಚನ ಸಮಾರಂಭದಲ್ಲಿ ಪೂರ್ಣವಾಗಿ ವಂದೇ ಮಾತರಂ ಹಾಡುವುದನ್ನು ಪ್ರಶ್ನಿಸಿತ್ತು. ಈ ಕುರಿತು ಮಾತನಾಡಿರುವ ಸಿಪಿಐನ ಬಿನೋಯ್ ವಿಶ್ವಂ, ಇತಿಹಾಸವನ್ನು ಒಮ್ಮೆ ನೋಡಿ. ವಂದೇ ಮಾತರಂನ ಕೆಲವು ಸಾಲುಗಳನ್ನು ತೆಗೆದುಹಾಕಲು ಮುಖ್ಯ ಕಾರಣ ಅದರ ಒಂದು ನಿರ್ದಿಷ್ಟ ರೀತಿಯ ಚಿಂತನೆಯಾಗಿದೆ. ಅದು ಜವಾಹರಲಾಲ್ ನೆಹರು ಮತ್ತು ಮಹಾತ್ಮ ಗಾಂಧಿಯವರ ಜಾತ್ಯತೀತ ರಾಷ್ಟ್ರದ ದೃಷ್ಟಿಕೋನಕ್ಕೆ ಹೊಂದಿಕೆಯಾಗುವುದಿಲ್ಲ. ಕಾಂಗ್ರೆಸ್ ಪಕ್ಷ ಇದನ್ನು ಮರೆಯಬಾರದಿತ್ತು ಎಂದು ಹೇಳಿದ್ದಾರೆ.

ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು 1937ರ ಆರಂಭದಲ್ಲಿಯೇ ವಂದೇ ಮಾತರಂ ನ ಕೆಲವು ಭಾಗಗಳು ಬಹುತ್ವ ಸಮಾಜಕ್ಕೆ ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದ್ದು, ಅದನ್ನು ತೆಗೆದು ಹಾಕಿತ್ತು. ಹೀಗಾಗಿ 1950ರಲ್ಲಿ ಸಂವಿಧಾನ ಸಭೆಯು ಅನುಮೋದಿತ ಆವೃತ್ತಿಯ ಮೊದಲ ಎಂಟು ಸಾಲುಗಳನ್ನು ಮಾತ್ರ ರಾಷ್ಟ್ರೀಯ ಗೀತೆಯಾಗಿ ಪರಿಗಣಿಸಬೇಕು ಎಂದು ಸ್ಪಷ್ಟಪಡಿಸಿತು ಎಂದು ತಿಳಿಸಿದರು.

ಗೀತೆಯ ಕೆಲವು ಭಾಗಗಳು ಧಾರ್ಮಿಕ ನಂಬಿಕೆಗಳನ್ನು ಪ್ರತಿನಿಧಿಸುತ್ತವೆ. ಹೀಗಾಗಿ ಸರ್ಕಾರದ ಅಧಿಕೃತ ಸಮಾರಂಭಗಳಲ್ಲಿಅದನ್ನು ಪೂರ್ಣವಾಗಿ ಹಾಡುವುದು ಭಾರತದ ಬಹುತ್ವ ಸಂಪ್ರದಾಯಗಳಿಗೆ ವಿರುದ್ಧವಾಗಿದೆ. ಬಿಜೆಪಿ ಆಡಳಿತವಿರುವ ಪಶ್ಚಿಮ ಬಂಗಾಳದ ಪ್ರಮಾಣವಚನ ಸ್ವೀಕಾರ ಸಂದರ್ಭದಲ್ಲಿ ಈ ರೀತಿ ಪೂರ್ಣವಾಗಿ ಹಾಡಲಾಗಿಲ್ಲ. ಕೇರಳದಲ್ಲಿ ಪೂರ್ಣವಾಗಿ ವಂದೇ ಮಾತರಂ ಹಾಡಿರುವುದು ಜಾತ್ಯತೀತತೆಯನ್ನು ದುರ್ಬಲಗೊಳಿಸುವ ಕ್ರಮವಾಗಿದೆ ಎಂದು ಹೇಳಿದರು.

"ವೆಲ್​ಕಮ್ ಟು ರೋಮ್, ಮೈ ಫ್ರೆಂಡ್"; ಇಟಲಿಗೆ ಬಂದಿಳಿದ ಪ್ರಧಾನಿ ಮೋದಿಯೊಂದಿಗೆ ಸೆಲ್ಫಿ ಹಂಚಿಕೊಂಡ ಮೆಲೋನಿ

ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಕೇರಳ ಅಧ್ಯಕ್ಷ ಮತ್ತು ನೆಮೊಮ್‌ನಿಂದ ಆಯ್ಕೆಯಾದ ಶಾಸಕ ರಾಜೀವ್ ಚಂದ್ರಶೇಖರ್, ಎಡಪಂಥೀಯರು ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯಗಳಿಂದ ದೂರವಾಗಿದ್ದಾರೆ. ಮಾರ್ಕ್ಸ್‌ವಾದವು ಭಾರತೀಯ ಮೌಲ್ಯಗಳೊಂದಿಗೆ ಹೊಂದಿಕೊಳ್ಳಲು ಸಾಧ್ಯವಾಗದ ಆಮದು ಮಾಡಲಾದ ಸಿದ್ಧಾಂತ. ರಾಜಕೀಯ ಉಳಿವಿಗಾಗಿ ಭಾರತವನ್ನು ಅಗೌರವಿಸುವುದು ಜಾತ್ಯತೀತತೆಯಲ್ಲ. ಇದು ಅಪಾಯಕಾರಿ ಓಲೈಕೆ ರಾಜಕೀಯ ಎಂದು ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ಅವರು ಬರೆದಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author