"ವೆಲ್‌ಕಮ್ ಟು ರೋಮ್, ಮೈ ಫ್ರೆಂಡ್"; ಇಟಲಿಗೆ ಬಂದಿಳಿದ ಪ್ರಧಾನಿ ಮೋದಿಯೊಂದಿಗೆ ಸೆಲ್ಫಿ ಹಂಚಿಕೊಂಡ ಮೆಲೋನಿ
ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ರೋಮ್‌ಗೆ ತೆರಳಿದ್ದಾರೆ. ಅವರ ಈ ಭೇಟಿ ಭಾರತ ಮತ್ತು ಇಟಲಿ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳಲ್ಲಿ ಹೊಸ ಇತಿಹಾಸ ಬರೆಯುವ ನಿರೀಕ್ಷೆಯಿದೆ. ರೋಮ್‌ನ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿ ಅವರನ್ನು ಅದ್ಧೂರಿಯಾಗಿ ಸ್ವಾಗತ ಮಾಡಲಾಗಿದೆ.
ಸಂಗ್ರಹ ಚಿತ್ರ -
ರೋಮ್: ಪ್ರಧಾನಿ ನರೇಂದ್ರ ಮೋದಿ (Narendra Modi) ಮಂಗಳವಾರ ರೋಮ್‌ಗೆ ತೆರಳಿದ್ದಾರೆ. ಅವರ ಈ ಭೇಟಿ ಭಾರತ ಮತ್ತು ಇಟಲಿ (Italy) ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳಲ್ಲಿ ಹೊಸ ಇತಿಹಾಸ ಬರೆಯುವ ನಿರೀಕ್ಷೆಯಿದೆ. ರೋಮ್‌ನ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿ ಅವರನ್ನು ಇಟಲಿಯ ಉಪ ಪ್ರಧಾನಿ ಆಂಟೋನಿಯೊ ತಜಾನಿ ಅವರು ಅತ್ಯಂತ ಗೌರವಪೂರ್ವಕವಾಗಿ ಸ್ವಾಗತಿಸಿದರು. ಬಳಿಕ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ( Giorgia Meloni) ಅವರಿಂದ ಪ್ರಧಾನಿ ಮೋದಿಗೆ ಆತ್ಮೀಯ ಸ್ವಾಗತ ದೊರತಿದೆ.
ಭೇಟಿ ಬಳಿಕ ಮೋದಿಯೊಂದಿಗೆ ಸೆಲ್ಫಿ ಹಂಚಿಕೊಂಡಿರುವ ಮೆಲೋನಿ "ವೆಲ್‌ಕಮ್ ಟು ರೋಮ್ ಮೈ ಫ್ರೆಂಡ್" ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ಇಂಟರ್ನೆಟ್‌ನಲ್ಲಿ ಭಾರೀ ವೈರಲ್ ಆಗುತ್ತಿದೆ. ವೈರಲ್ ಆಗಿರುವ ಈ ಫೋಟೋ ಒಂದು ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳು, ಸುಮಾರು 60,000 ಲೈಕ್‌ಗಳು ಮತ್ತು 2,000 ಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಗಳಿಸಿದೆ. ಇನ್ನು ಮೋದಿ ಇಟಲಿಗೆ ಆಗಮಿಸುತ್ತಿದ್ದಂತೆ ಅನಿವಾಸಿ ಭಾರತೀಯರಿಂದ ಅದ್ಧೂರಿ ಸ್ವಾಗತ ದೊರೆತಿದೆ.
Welcome to Rome, my friend! 🇮🇹🇮🇳 pic.twitter.com/mUjFL4HIqY
— Giorgia Meloni (@GiorgiaMeloni) May 19, 2026
ಭಾರತ ಮತ್ತು ಇಟಲಿ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯಲ್ಲಿ ಇದೀಗ ಹೊಸ ಅಧ್ಯಾಯ ಬರೆಯಲಾಗುತ್ತಿದ್ದು, ಈ ಭೇಟಿಯ ಅವಧಿಯಲ್ಲಿ ರಕ್ಷಣೆ, ವ್ಯಾಪಾರ ಮತ್ತು ತಂತ್ರಜ್ಞಾನ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಐತಹಾಸಿಕ ಒಪ್ಪಂದಗಳಿಗೆ ಉಭಯ ದೇಶಗಳು ಸಹಿ ಹಾಕುವ ನಿರೀಕ್ಷೆ ಇದೆ. ಪ್ರಧಾನಿ ಅವರ ಭೇಟಿಯ ಹಿನ್ನೆಲೆಯಲ್ಲಿ ಇಟಾಲಿಯನ್ ಆಡಳಿತವು ಇಡೀ ರೋಮ್ ನಗರದಲ್ಲಿ ಸಮಗ್ರ ಮತ್ತು ಕಟ್ಟುನಿಟ್ಟಿನ ಭದ್ರತಾ ಯೋಜನೆಯನ್ನು ಜಾರಿಗೆ ತಂದಿದೆ. ಪ್ರಧಾನಿ ಮೋದಿ ಅವರು ರೋಮ್‌ನ ಪಿಯಾಝಾ ಡೆಲ್ಲಾ ರಿಪಬ್ಲಿಕಾದಲ್ಲಿರುವ ಪ್ರಸಿದ್ಧ ಅನಂತರಾ ಹೋಟೆಲ್‌ನಲ್ಲಿ ಉಳಿದುಕೊಳ್ಳಲಿದ್ದಾರೆ.
ಇಟಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಾರಣಾಸಿಯ ಐತಿಹಾಸಿಕ ಘಾಟ್‌ಗಳನ್ನು ಪ್ರದರ್ಶಿಸುವ ವರ್ಣಚಿತ್ರವನ್ನು ನೀಡಲಾಯಿತು.
ವಾರಣಾಸಿಯ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸಾರವನ್ನು ಪ್ರತಿಬಿಂಬಿಸುವ ಈ ಕಲಾಕೃತಿಯನ್ನು ಸ್ವಾಗತ ಸಮಾರಂಭದ ಭಾಗವಾಗಿ ಪ್ರಧಾನಿಗೆ ಉಡುಗೊರೆಯಾಗಿ ನೀಡಲಾದೆ. ಯುಎಇ ಭೇಟಿಯ ನಂತರ ನೆದರ್ಲ್ಯಾಂಡ್ಸ್, ಸ್ವೀಡನ್ ಮತ್ತು ನಾರ್ವೆ ದೇಶದ ಪ್ರವಾಸದ ಬಳಿಕ ಇದೀಗ ಇಟಲಿಗೆ ಬಂದಿದ್ದಾರೆ. ಈ ಮುನ್ನ ಜೂನ್ 2024 ರಲ್ಲಿ ಜಿ-7 (G-7) ಶೃಂಗಸಭೆಯಲ್ಲಿ ಭಾಗವಹಿಸಲು ಅವರು ಕೊನೆಯ ಬಾರಿಗೆ ಇಟಲಿಗೆ ಭೇಟಿ ನೀಡಿದ್ದರು.