Self Harming: ಪ್ರೀತಿಸಿ ಮದುವೆಯಾಗಿ 22 ದಿನಕ್ಕೆ ಆತ್ಮಹತ್ಯೆಗೆ ಶರಣಾದ ಜೋಡಿ; ಕಾರಣ ಕೇಳಿದ್ರೆ ಶಾಕ್ ಆಗ್ತೀರಿ!
ಪ್ರೇಮಿಗಳಿಬ್ಬರು ಮನೆ ಬಿಟ್ಟು ಓಡಿಬಂದು ಮದುವೆಯಾದ 22 ದಿನದಲ್ಲೇ ಆತ್ಮಹತ್ಯೆ(Self Harming) ಮಾಡಿಕೊಂಡ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ದಂಪತಿ ಶವ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅವರಿದ್ದ ಬಾಡಿಗೆ ಮನೆಯೊಳಗೆ ಪತ್ತೆಯಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.


ಲಖನೌ: ಪ್ರೀತಿಸಿದ ಜೀವಗಳೆರಡು ಮದುವೆಯಾಗಲು ಮನೆಯವರು ಒಪ್ಪದಿದ್ದಾಗ ಅವರನ್ನು ಬಿಟ್ಟು ಬಂದು ಬೇರೊಂದು ಕಡೆ ಮದುವೆಯಾಗುವುದು ಸಹಜ. ಅಂತವರಲ್ಲಿ ಕೆಲವರು ತಮ್ಮ ಮುಂದಿನ ಜೀವನವನ್ನು ಸವಾಲಾಗಿ ತೆಗೆದುಕೊಂಡು ಬದುಕಿ ತೋರಿಸುತ್ತಾರೆ. ಇನ್ನು ಕೆಲವರು ಸ್ವಲ್ಪ ಸಮಯ ಲೈಫ್ ಎಂಜಾಯ್ ಮಾಡಿ ಆಮೇಲೆ ಸಣ್ಣ-ಪುಟ್ಟ ಕಾರಣಕ್ಕೂ ಕಿತ್ತಾಟ ನಡೆಸಿ ಬೇರ್ಪಡುವುದೂ ಇದೆ. ಇದೀಗ ಇದೀಗ ಪ್ರೇಮಿಗಳಿಬ್ಬರು ಮನೆಯವರನ್ನು ಬಿಟ್ಟು ಓಡಿಬಂದು ಮದುವೆಯಾಗಿ 22 ದಿನಗಳ ನಂತರ ಆತ್ಮಹತ್ಯೆ(Self Harming) ಮಾಡಿಕೊಂಡ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಮನೆಯವರು ತಮ್ಮನ್ನು ದೂರ ಮಾಡುತ್ತಾರೆ ಎಂದು ಹೆದರಿ ಅವರಿಬ್ಬರು ಪತ್ರ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಇಬ್ಬರು ಪ್ರೇಮಿಗಳು ಒಬ್ಬರನ್ನೊಬ್ಬರು ಬಹಳ ಪ್ರೀತಿಸುತ್ತಿದ್ದರು. ಆದರೆ ಅವರ ಪ್ರೀತಿಗೆ ಮನೆಯವರು ವಿರೋಧ ವ್ಯಕ್ತಪಡಿಸಿದ ಕಾರಣ ಇವರಿಬ್ಬರು ಓಡಿ ಹೋಗಿ ಮದುವೆಯಾಗಿದ್ದಾರೆ. ಹಾಗೇ ತಮ್ಮ ಮುಂದಿನ ಜೀವನ ಒಟ್ಟಿಗೆ ನಡೆಸಲು ಗಾಜಿಯಾಬಾದ್‍ನ ಕವಿ ನಗರದಲ್ಲಿ ಬಾಡಿಗೆ ಮನೆ ಮಾಡಿ ಅಲ್ಲಿ ವಾಸವಾಗಿದ್ದರು. ಪ್ರೀತಿಸಿ ಓಡಿ ಬರುವಾಗ ಇದ್ದ ಧೈರ್ಯ ಮದುವೆಯಾದ ಮೇಲೆ ಅವರಿಗೆ ಇರಲಿಲ್ಲ. ಹೀಗಾಗಿ ಮನೆಯವರು ತಮ್ಮನ್ನು ದೂರ ಮಾಡುತ್ತಾರೆ ಎಂದು ಹೆದರಿ ಮದುವೆಯಾದ 22 ದಿನಗಳಲ್ಲೇ ಅವರಿಬ್ಬರು ಪತ್ರ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅಕ್ಕಪಕ್ಕದ ಮನೆಯವರಿಗೆ ಈ ವಿಚಾರ ತಿಳಿದ ಕೂಡಲೇ ಕವಿ ನಗರದ ಪೊಲಿಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಪೊಲೀಸರು ಮನೆ ಒಳಗಿನಿಂದ ಲಾಕ್ ಆಗಿದ್ದ ಕಾರಣ ಎಫ್‍ಎಸ್‍ಎಲ್ ತಂಡವನ್ನು ಸ್ಥಳಕ್ಕೆ ಕರೆಸಿ ಮನೆಯ ಬಾಗಿಲನ್ನು ಒಡೆದು ತೆಗೆದಿದ್ದಾರೆ. ಆದರೆ ಒಳಗೆ ಬಂದು ನೋಡಿದಾಗ ದಂಪತಿ ಇಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನೇತಾಡುತ್ತಿದ್ದ ಅವರ ಶವವನ್ನು ಕೆಳಗಿಳಿಸಿದ ಪೊಲೀಸರು ಅದನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಹಾಗೇ ಘಟನಾ ಸ್ಥಳವನ್ನು ಪರಿಶೀಲಿಸಿದ ಪೊಲೀಸರಿಗೆ ದಂಪತಿ ಬರೆದ ಆತ್ಮಹತ್ಯೆ ಪತ್ರ ಸಿಕ್ಕಿದೆ. ಅದರಲ್ಲಿ ಅವರು, ಮನೆಯಿಂದ ಏನನ್ನು ಕದ್ದು ಓಡಿಹೋಗಿಲ್ಲ, ಪ್ರೀತಿಸಿದವರ ಜೊತೆ ಹೋಗಿದ್ದು. ನಮ್ಮ ಕುಟುಂಬದ ಯಾರಿಗಾದರೂ ನಾವು ಇಲ್ಲಿ ಇರುವುದು ಗೊತ್ತಾದರೆ ಅವರು ನಮ್ಮನ್ನು ದೂರ ಮಾಡುತ್ತಾರೆ. ಈ ಭಯದಿಂದ ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರದಲ್ಲಿ ಬರೆದಿದ್ದಾರೆ.ಈ ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Heart Failure: ಪ್ರೀತಿಸಿ ಮದುವೆಯಾದ ಮೂರೇ ದಿನದಲ್ಲಿ ವರ ಹೃದಯಾಘಾತಕ್ಕೆ ಬಲಿ
ಕೆಲವು ದಿನಗಳ ಹಿಂದೆಯಷ್ಟೇ ನವದಂಪತಿ ಮದುವೆಯ ಮರುದಿನ ಶವವಾಗಿ ಪತ್ತೆಯಾದ ಘಟನೆ ಉತ್ತರಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ನಡೆದಿತ್ತು. ನವವಿವಾಹಿತ ದಂಪತಿ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ. ಪ್ರತಾಪ್ ಯಾದವ್ (24) ಮತ್ತು ಪುಷ್ಪಾ ಯಾದವ್ (22) ಮೇ 30 2023ರಂದು ವಿವಾಹವಾಗಿದ್ದರು. ಹೊಸದಾಗಿ ಮದುವೆಯಾದ ದಂಪತಿ ತಮ್ಮ ಕೋಣೆಯಲ್ಲಿ ಮಲಗಲು ಹೋಗಿದ್ದರು. ಆದರೆ ಮರುದಿನ ಶವವಾಗಿ ಪತ್ತೆಯಾಗಿದ್ದಾರೆ.