ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬ್ರಷ್ ಹಿಡಿದು ಮೈ ಕೆರೆದುಕೊಳ್ಳುವ ಬುದ್ದಿವಂತ ಹಸು: ವಿಜ್ಞಾನಿಗಳನ್ನೇ ಬೆರಗುಗೊಳಿಸಿದೆ ಈ ದೃಶ್ಯ!

Viral Video: ಆಸ್ಟ್ರಿಯಾದ ಹಸುವೊಂದು ಬ್ರಷ್ ಎತ್ತಿಕೊಂಡು ತನ್ನನ್ನು ತಾನೇ ಕೆರೆದುಕೊಳ್ಳುವ ಮೂಲಕ ವೈದ್ಯಲೋಕವನ್ನು ಕೂಡ ಅಚ್ಚರಿಗೊಳಿಸಿದೆ.ಇಂತಹ ಉಪಕರಣಗಳನ್ನು ಬಳಸಿದ ಮೊದಲ ಹಸು ಇದು ಎಂದು ಸಂಶೋಧಕರು ಕೂಡ ಹೇಳಿದ್ದಾರೆ. ಪ್ರಾಣಿಗಳು ಬುದ್ಧಿವಂತಿಕೆಯಲ್ಲಿ ಮನುಷ್ಯ ರಿಗಿಂತ ಕಡಿಮೆ ಇಲ್ಲ ಎಂಬುದಕ್ಕೆ ಈಗ ಆಸ್ಟ್ರಿಯಾದ 'ವೇರೋನಿಕಾ' ಎಂಬ ಹಸು ಸಾಕ್ಷಿಯಾಗಿದೆ‌. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಬ್ರಷ್ ಹಿಡಿದು ಮೈ ಕೆರೆದುಕೊಳ್ಳುವ ಬುದ್ದಿವಂತ ಹಸು

ವಿಯೆನ್ನಾ,ಜ.21: ಪ್ರಾಣಿಗಳು ಮತ್ತು ಮನುಷ್ಯರಿಗೆ ಉತ್ತಮ ಒಡನಾಟದ ಬಾಂಧವ್ಯ ಇರುತ್ತದೆ. ಅದರಲ್ಲೂ ಭಾವನೆಗಳು, ಬುದ್ಧಿವಂತಿಕೆಯಲ್ಲಿ ಮನುಷ್ಯನನ್ನು ಕೂಡ ಪ್ರಾಣಿಗಳು ಮೀರಿಸಿವೆ. ಸದ್ಯ ಆಸ್ಟ್ರಿಯಾದ ಹಸುವೊಂದು ಬ್ರಷ್ ಎತ್ತಿಕೊಂಡು ತನ್ನನ್ನು ತಾನೇ ಕೆರೆದುಕೊಳ್ಳುವ ಮೂಲಕ ವೈದ್ಯಲೋಕವನ್ನು ಕೂಡ ಅಚ್ಚರಿಗೊಳಿಸಿದೆ.ಇಂತಹ ಉಪಕರಣಗಳನ್ನು ಬಳಸಿದ ಮೊದಲ ಹಸು ಇದು ಎಂದು ಸಂಶೋಧಕರು ಕೂಡ ಹೇಳಿದ್ದಾರೆ. ಪ್ರಾಣಿಗಳು ಬುದ್ಧಿವಂತಿಕೆಯಲ್ಲಿ ಮನುಷ್ಯ ರಿಗಿಂತ ಕಡಿಮೆ ಇಲ್ಲ ಎಂಬುದಕ್ಕೆ ಈಗ ಆಸ್ಟ್ರಿಯಾದ 'ವೇರೋನಿಕಾ' ಎಂಬ ಹಸು ಸಾಕ್ಷಿಯಾಗಿದೆ‌. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral Video) ಆಗಿದೆ.

ಆಸ್ಟ್ರಿಯಾದ ಕಂದು ಬಣ್ಣದ ವೆರೋನಿಕ ಎಂಬ ಹಸು ಕೋಲುಗಳು, ರೇಕ್‌ಗಳು ಮತ್ತು ಡೆಕ್ ಬ್ರಷ್‌ಗಳನ್ನು ಸಹ ಬಳಸಿ, ತಾನು ಕೆರೆದುಕೊಳ್ಳುವ ಕಲೆಯನ್ನು ಬಹಳಷ್ಟು ನಿಖರವಾಗಿ ಕರಗತ ಮಾಡಿಕೊಂಡಿದೆ. ಇಂತಹ ಉಪಕರಣಗಳನ್ನು ಬಳಸಿ ತನ್ನ ಮೈಯನ್ನು ತಾನೇ ಕೆರೆದುಕೊಳ್ಳುವ ಈಕೆಯ ಬುದ್ದಿವಂತಿಕೆಯನ್ನು ಕಂಡು ವಿಜ್ಞಾನಿಗಳು ಕೂಡ ಬೆರಗಾಗಿದ್ದಾರೆ. ಹಸುಗಳಲ್ಲಿ ಇಂತಹ ಉಪಕರಣ ಬಳಸಿ ಕಂಡುಬಂದಿರುವ ದೃಶ್ಯ ಜಗತ್ತಿನಲ್ಲೇ ಇದೇ ಮೊದಲು ಎಂದು ಹೇಳಲಾಗಿದೆ.

ವಿಡಿಯೋ ನೋಡಿ:



ಆಸ್ಟ್ರಿಯಾದಲ್ಲಿ ನೆಲೆಸಿರುವ 13 ವರ್ಷದ ಈ ಹಸು, ನೆಲದ ಮೇಲೆ ಬಿದ್ದಿರುವ ಯಾವುದೇ ವಸ್ತು ವನ್ನು ಬಾಯಿಯಿಂದ ಎತ್ತಿಕೊಂಡು ತನ್ನ ಬಾಯಿಯಲ್ಲಿ ದೃಢವಾಗಿ ಹಿಡಿದು ಮೈಯನ್ನು ಕೆರೆದುಕೊಳ್ಳುತ್ತಾಳೆ. ತನ್ನ ಕಾಲುಗಳಿಗೆ ಎಟುಕದ ಬೆನ್ನಿನ ಭಾಗವನ್ನು ಕೂಡ ಬಹಳ ಜಾಣ್ಮೆಯಿಂದ ತೊಳೆದುಕೊಳ್ಳುತ್ತದೆ.

Viral Video: ಅಯ್ಯೊಯ್ಯೋ ಹಸಿಯಾಗಿ ಇದೆಲ್ಲಾ ತಿಂತಾರಾ? ರೈಲಿನಲ್ಲಿ ವಿಚಿತ್ರ ಆಹಾರ ಸೇವನೆ ಮಾಡಿದ ವ್ಯಕ್ತಿ! ವಿಡಿಯೋ ನೋಡಿ

ಬಯಾಲಜಿ ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನವೊಂದರಲ್ಲಿ, ವಿಯೆನ್ನಾದ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ವಿಜ್ಞಾನಿಗಳು ವೆರೋನಿಕಾಳ ಆಶ್ಚರ್ಯಕರ ಸಂಗತಿಯ ಬಗ್ಗೆ ಬರೆದಿದ್ದಾರೆ. ಸುಮಾರು 10,000 ವರ್ಷಗಳ ಕಾಲ ಮಾನವರು ಜಾನುವಾರುಗಳ ಜೊತೆಗೆ ವಾಸಿ ಸುತ್ತಿದ್ದರೂ, ಹಸುವಿನಲ್ಲಿ ಇಂತಹ ನಡವಳಿಕೆಯನ್ನು ವೈಜ್ಞಾನಿಕವಾಗಿ ದಾಖಲಿಸಲಾಗಿದ್ದು ಇದೇ ಮೊದಲು ಎಂದಿದ್ದಾರೆ.

ಮಾನವನು ಕೆಲವು ವರ್ಷಗಳಿಂದ ಹಸುಗಳನ್ನು ಸಾಕುತ್ತಿದ್ದರೂ, ಉಪಕರಣವನ್ನು ಬಳಸಿದ ಉದಾ ಹರಣೆಗಳು ಎಲ್ಲೂ ಇರಲಿಲ್ಲ. "ವೇರೋನಿಕಾ ತನ್ನ ಬಾಯಿಯನ್ನು ಮನುಷ್ಯರ ಬೆರಳಿನಂತೆ ಉಪಯೋಗಿಸಿಕೊಂಡಿದ್ದಾಖೆ ಎಂದು ಸಂಶೋಧಕಿ ಆಲಿಸ್ ಔರ್ಸ್‌ಪರ್ಗ್ ಹೇಳಿದ್ದಾರೆ. ಹಸುಗಳಿಗೆ ಸೂಕ್ತವಾದ ಅವಕಾಶ ನೀಡಿದರೆ ಅವು ಕೂಡ ಮನುಷ್ಯನಂತೆ ಕೆಲಸಗಳನ್ನು ಮಾಡಬಲ್ಲವು ಎಂಬುದು ಇದರಿಂದ ದೃಡಪಟ್ಟಿದೆ.