ಅಹಮದಾಬಾದ್, ಜೂ.22: ಪ್ರಾಣಿಗಳು ಆಹಾರ ಹುಡುಕುತ್ತಾ ರಸ್ತೆ ಬದಿ, ಬೀದಿಯ ಪಕ್ಕ ಸಾಗು ವುದು ಸಾಮಾನ್ಯ. ಆದರೆ ಇಲ್ಲೊಂದು ಹಸು ಆಹಾರ ಅರಸುತ್ತಾ ಸಾಗುವಾಗ ಅದರ ತಲೆಯೂ ಪ್ಲಾಸ್ಟಿಕ್ ಡ್ರಮ್ ಒಳಗೆ ಸಿಲುಕಿದ ಘಟನೆಯೊಂದು ನಡೆದಿದೆ. ಅನಾಥ ಹಸುವು ತಲೆ ಸಿಲುಕಿ ಕೊಂಡು ಉಸಿರಾಟ ನಡೆಸಲು ಸಾಧ್ಯವಾಗದೇ ಒದ್ದಾಡುತ್ತಿತ್ತು. ಈ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ಸಾರ್ವಜನಿಕರು ಯಶಸ್ವಿಯಾಗಿ ರಕ್ಷಣೆ ಮಾಡಿದ್ದಾರೆ. ಈ ರಕ್ಷಣಾ ಕಾರ್ಯಾಚರಣೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗುತ್ತಿದೆ.
ಉತ್ತರ ಗುಜರಾತ್‌ನಲ್ಲಿ ಈ ಘಟನೆಯೂ ನಡೆದಿದೆ. ಬೀದಿ ಹಸುವೊಂದು ಪ್ಲಾಸ್ಟಿಕ್ ಡ್ರಮ್‌ನಲ್ಲಿ ತಲೆ ಸಿಲುಕಿಕೊಂಡು ಒದ್ದಾಡುತ್ತಿದೆ. ಈ ಘಟನೆ ಜನನಿಬಿಡ ರಸ್ತೆಯಲ್ಲಿ ನಡೆದಿದೆ. ಪ್ಲಾಸ್ಟಿಕ್ ಪಾತ್ರೆಯೂ ಹಸುವಿನ ತಲೆಯ ಸುತ್ತಲೂ ಬಿಗಿಯಾಗಿದ್ದು ದನವು ತೊಂದರೆಯಲ್ಲಿ ಸಿಲುಕಿರುವುದು ಕಾಣಬಹುದು. ಅದಕ್ಕೆ ಸರಿಯಾಗಿ ನೋಡಲು ಸಾಧ್ಯವಾಗದೆ ಭಯಭೀತವಾಗಿ ತನ್ನನ್ನು ಬಿಡಿಸಿಕೊಳ್ಳಲು ಪ್ರಯತ್ನ ಮಾಡುತ್ತಿದೆ.
ವಿಡಿಯೋ ನೋಡಿ:
ಪಾತ್ರೆ ತಲೆಯೊಳಗೆ ಸಿಲುಕಿಕೊಂಡ ಪರಿಣಾಮ ಕಣ್ಣು ಕಾಣಿಸದೆ ಉಸಿರಾಡಲು ಕಷ್ಟಪಡುತ್ತಾ ಆತಂಕದಿಂದ ರಸ್ತೆಯಲ್ಲೆಲ್ಲಾ ಓಡಾಡುತ್ತಿದೆ. ಹಸುವಿನ ಈ ವರ್ತನೆಯಿಂದಾಗಿ ವಾಹನ ಸವಾರರಿಗೂ ಹಾಗೂ ಹಸುವಿಗೂ ಅಪಾಯ ಉಂಟಾಗುವ ಸಾಧ್ಯತೆ ಇತ್ತು. ತಪ್ಪಿಸಿಕೊಳ್ಳಲು ಪ್ರಯತ್ನಿಸುವಾಗ ಅದು ಸಂಚಾರಕ್ಕೆ ಸಿಲುಕಬಹುದು ಅಥವಾ ಗಾಯಗೊಳ್ಳಬಹುದು ಎಂದು ಅಲ್ಲಿದ್ದ ಸಾರ್ವಜನಿಕರು ರಕ್ಷಣೆಗೆ ಮುಂದಾಗಿದ್ದಾರೆ.
ಹಸು ಪರದಾಡುತ್ತಿದ್ದಂತೆ ಅಪಾಯಗಳ ಹೊರತಾಗಿಯೂ ಹಲವಾರು ಪಕ್ಕದಲ್ಲಿದ್ದವರು ಸಹಾಯ ಮಾಡಲು ಮುಂದಾದರು. ಹಸು ಒದ್ದಾಡುತ್ತಿರೂ ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದರೂ, ಅದಕ್ಕೆ ಹೆದರದೆ ಹಸುವನ್ನು ಸಮಾಧಾನಪಡಿಸಲು ಯತ್ನಿಸಿದ್ದಾರೆ. ಬಳಿಕ ಎಲ್ಲರೂ ಒಟ್ಟಾಗಿ ಸೇರಿ ಹಸುವನ್ನು ಹಿಡಿದುಕೊಂಡು, ಅದರ ತಲೆಗೆ ಸಿಲುಕಿದ್ದ ಪ್ಲಾಸ್ಟಿಕ್ ಡ್ರಮ್ ಅನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಯಾವುದೇ ಗಾಯಗಳಿಲ್ಲದೆ ಹಸುವನ್ನು ರಕ್ಷಣೆ ಮಾಡಿ ಬಿಡುಗಡೆ ಮಾಡಲಾಯಿತು.
ಈ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಅನೇಕ ಬಳಕೆದಾರರು ನೆರವು ನೀಡಿದ ಸ್ಥಳೀಯರನ್ನು ಹೊಗಳಿದ್ದಾರೆ. ಬಳಕೆದಾರರೊಬ್ಬರು ತ್ವರಿತ ಚಿಂತನೆ ಶುದ್ಧ ಮಾನವೀಯತೆ. ಅತ್ಯುತ್ತಮ ಭಾರತೀಯ ಮನೋಭಾವ ಎಂದು ಬರೆದಿದ್ದಾರೆ. ಮತ್ತೊಬ್ಬರು ಆ ಪ್ಲಾಸ್ಟಿಕ್ ಪಾತ್ರೆಯನ್ನು ಸುರಕ್ಷಿತವಾಗಿ ತೆಗೆದು ದನವನ್ನು ರಕ್ಷಣೆ ಮಾಡಿದ ಸ್ಥಳೀಯರಿಗೆ ದೊಡ್ಡ ಸಲಾಂ ಎಂದು ಪ್ರತಿಕ್ರಿಯೆ ನೀಡಿದ್ದಾರೆ.