ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Viral Video: ರೆಸ್ಟೋರೆಂಟ್‌ಗೆ ನುಗ್ಗಿ ದುಷ್ಕರ್ಮಿಗಳ ಅಟ್ಟಹಾಸ; ಊಟ ಬಿಟ್ಟು ಓಡಿದ ಜನ!

ಆಹಾರ ನೀಡಲು ತಡವಾಗಿದ್ದಕ್ಕೆ ದುಷ್ಕರ್ಮಿಗಳು ರಾಜನಗರ ಎಕ್ಸ್‌ಟೆನ್ಶನ್‌ನಲ್ಲಿರುವ ಅಪ್ನಿ ರಸೋಯಿ ರೆಸ್ಟೋರೆಂಟ್ ಮೇಲೆ ದಾಳಿ ಮಾಡಿದ್ದಾರೆ. ಇದರಿಂದ ಭಯಗೊಂಡ ಇತರ ಗ್ರಾಹಕರು ಊಟ ಬಿಟ್ಟು ಹೊರಗೆ ಓಡಿದ್ದಾರೆ. ಇಡೀ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಲಖನೌ: ಗಾಜಿಯಾಬಾದ್‌(Ghaziabad)ನಲ್ಲಿ ರೆಸ್ಟೋರೆಂಟ್‍ವೊಂದರ ಮೇಲೆ ಪುರುಷರ ಗುಂಪೊಂದು ಕೋಲು ಹಾಗೂ ಕಬ್ಬಿಣದ ರಾಡ್‌ಗಳಿಂದ ದಾಳಿ ಮಾಡಿದ ಪ್ರಕರಣವೊಂದು ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಸುದ್ದಿಯಾಗಿದೆ. ದುಷ್ಕರ್ಮಿಗಳು ಇತ್ತೀಚೆಗೆ ರಾಜನಗರ ಎಕ್ಸ್‌ಟೆನ್ಶನ್‌ನಲ್ಲಿರುವ ಅಪ್ನಿ ರಸೋಯಿ ರೆಸ್ಟೋರೆಂಟ್(Restaurant)ಮೇಲೆ ದಾಳಿ ಮಾಡಿದ್ದರು. ಈ ವೇಳೆ ರೆಸ್ಟೋರೆಂಟ್‌ನಲ್ಲಿದ್ದ ಇತರೆ ಗ್ರಾಹಕರು ಬೆಚ್ಚಿಬಿದ್ದು ಊಟ ಬಿಟ್ಟು ಹೊರಗೆ ಓಡಿದ್ದಾರೆ. ಇಡೀ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ.

ವೈರಲ್ ಆದ ವಿಡಿಯೊದಲ್ಲಿ ದುಷ್ಕರ್ಮಿಗಳು ರೆಸ್ಟೋರೆಂಟ್‍ನ ಮೇಲೆ ದಾಳಿ ಮಾಡಿದ ದೃಶ್ಯ ಸೆರೆಯಾಗಿದೆ. ಈ ಕಿಡಿಗೇಡಿಗಳು ರೆಸ್ಟೋರೆಂಟ್‍ನ ಬಾಗಿಲನ್ನು ಒಡೆದು ಒಳಗೆ ಬಂದಿದ್ದಾರೆ. ಅದು ಅಲ್ಲದೇ, ಸ್ವಲ್ಪವೂ ಮಾನವೀಯತೆ ಇಲ್ಲದಂತೆ ಇತರೇ ಗ್ರಾಹಕರು ಕುಳಿತು ಊಟ ಮಾಡುತ್ತಿದ್ದ ಟೇಬಲ್, ಕುರ್ಚಿ ಹಾಗೂ ಅದರ ಮೇಲಿದ್ದ ಆಹಾರವನ್ನು ಕೆಳಕ್ಕೆ ಚೆಲ್ಲಿದ್ದಾರೆ.ಇದರಿಂದ ಭಯಗೊಂಡ ಅಲ್ಲಿದ್ದ ಜನರು ತಮ್ಮ ಪ್ರಾಣ ಉಳಿಸಿಕೊಳ್ಳಲು ಮತ್ತು ದಾಳಿಯಿಂದ ತಪ್ಪಿಸಿಕೊಳ್ಳಲು ಹೊರಗೆ ಓಡಿಹೋಗಿದ್ದಾರಂತೆ.

ವಿಡಿಯೊ ಇಲ್ಲಿದೆ ನೋಡಿ...



ಈ ದುರ್ಘಟನೆಯ ದೃಶ್ಯ ಸೋಶಿಯಲ್‌ ಮೀಡಿಯಾಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ರೆಸ್ಟೋರೆಂಟ್ ಮಾಲೀಕ ಅಕ್ಷಿತ್ ತ್ಯಾಗಿ ನಂದಗ್ರಾಮ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾನೆ. ದೂರಿನಲ್ಲಿ ತಿಳಿಸಿದಂತೆ, ಆಹಾರ ನೀಡುವುದು ತಡವಾದ ಕಾರಣಕ್ಕೆ ಈ ಗಲಾಟೆ ನಡೆದಿದೆಯಂತೆ. ದಾಳಿಯ ಸಮಯದಲ್ಲಿ, ಎರಡು ಲ್ಯಾಪ್‌ಟಾಪ್‌ಗಳು, ಎಲ್‌ಇಡಿ ಪರದೆ ಮತ್ತು ಬಿಲ್ಲಿಂಗ್ ಯಂತ್ರವನ್ನು ಹಾನಿಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅದು ಅಲ್ಲದೇ ಬಿಲ್ಲಿಂಗ್ ಕೌಂಟರ್‌ನಿಂದ ಹಣವನ್ನು ಸಹ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಈ ಸುದ್ದಿಯನ್ನೂ ಓದಿ:‌Viral Video: ಬಂಗೀ ಜಂಪ್ ಮಾಡಲು ಹೋದ ಯುವತಿಯ ಅವಸ್ಥೆಯನ್ನೊಮ್ಮೆ ನೋಡಿ; ವಿಡಿಯೊ ಫುಲ್‌ ವೈರಲ್

ಈ ಪ್ರಕರಣದಲ್ಲಿ ಮೂವರು ಆರೋಪಿಗಳ ಹೆಸರುಗಳು ಬೆಳಕಿಗೆ ಬಂದಿದ್ದು, ಅವರನ್ನು ಮಿಂಟು ತ್ಯಾಗಿ, ರಾಜ್‌ದೀಪ್ ಮತ್ತು ರವಿ ಶರ್ಮಾ ಎಂದು ಗುರುತಿಸಲಾಗಿದೆ. ದೂರಿನ ಆಧಾರದ ಮೇಲೆ, ಐಪಿಸಿ ಸೆಕ್ಷನ್ 352 (ಆಕ್ರಮಣ ಅಥವಾ ಕ್ರಿಮಿನಲ್ ಬಲದ ಬಳಕೆ), 115(2), 324(4), 351(3), ಮತ್ತು 309(6) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಗಳನ್ನು ಗುರುತಿಸಲು ಮತ್ತು ಬಂಧಿಸಲು ಪೊಲೀಸರು ಈಗ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.