ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Viral Video: ಬಂಗೀ ಜಂಪ್ ಮಾಡಲು ಹೋದ ಯುವತಿಯ ಅವಸ್ಥೆಯನ್ನೊಮ್ಮೆ ನೋಡಿ; ವಿಡಿಯೊ ಫುಲ್‌ ವೈರಲ್

ಋಷಿಕೇಶದಲ್ಲಿ ಬಂಗೀ ಜಂಪ್‌ನ ವೇಳೆ ಜಿಗಿಯಲು ಸಿದ್ಧವಾಗಿದ್ದ ಯುವತಿಯೊಬ್ಬಳು ಭಯದಿಂದ ನಡುಗುತ್ತಿದ್ದಾಗ ಸಿಬ್ಬಂದಿಯೊಬ್ಬ ಅವಳಿಗೆ ಧೈರ್ಯ ತುಂಬಿದ್ದಾನೆ. ಇದರಿಂದಾಗಿ ಆಕೆ ಧೈರ್ಯದಿಂದ ಜಿಗಿದಿದ್ದಾಳೆ. ಈ ಹೃದಯಸ್ಪರ್ಶಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೆಟ್ಟಿಗರ ಮನಸ್ಸನ್ನು ಗೆದ್ದಿದೆ.

ಬಂಗೀ ಜಂಪಿಂಗ್‌ಗೆ ಹೋದ ಈಕೆ ಮಾಡಿದ್ದೇನು ಗೊತ್ತಾ? ವಿಡಿಯೊ ನೋಡಿ

Profile pavithra Jun 7, 2025 12:23 PM

ಡೆಹ್ರಡೂನ್‌: ಬಂಗೀ(bungee jump) ಜಂಪಿಂಗ್ ಮಾಡುವುದು ಕೆಲವರಿಗೆ ಕ್ರೇಜ್‌! ಆದರೆ ಅದನ್ನು ಮಾಡುವುದು ಅಷ್ಟು ಸುಲಭವಲ್ಲ! ಆರಂಭದಲ್ಲಿ ಉಮೇದಿನಿಂದ ಹೋದವರು ಕೊನೆಗೆ ಭಯದಲ್ಲಿ ನಡುಗುತ್ತಾರೆ. ಆದರೆ ಈ ಸಮಯದಲ್ಲಿ ಸರಿಯಾದ ಮಾರ್ಗದರ್ಶನ ಸಿಕ್ಕರೆ ಖುಷಿಯಿಂದ ಬಂಗೀ ಜಂಪ್‌ ಅನ್ನು ಎಂಜಾಯ್‌ ಮಾಡಬಹುದು. ಇದಕ್ಕೆ ಸಾಕ್ಷಿಯೆಂಬಂತೆ ಇಲ್ಲೊಂದು ಘಟನೆ ನಡೆದಿದೆ. ಋಷಿಕೇಶ(Rishikesh)ದಲ್ಲಿ ಯುವತಿಯೊಬ್ಬಳ ಬಂಗೀ ಜಂಪ್‌ನ ವಿಡಿಯೊವೊಂದು ವೈರಲ್(Viral Video) ಆಗಿದ್ದು, ಇದರಲ್ಲಿ ಭಯದಿಂದ ನಡುಗುತ್ತಿದ್ದ ಯುವತಿಗೆ ಸಿಬ್ಬಂದಿಯೊಬ್ಬ ಧೈರ್ಯ ತುಂಬಿದ ಹೃದಯಸ್ಪರ್ಶಿ ಕ್ಷಣವನ್ನು ಸೆರೆಹಿಡಿಯಲಾಗಿದೆ. ಸಿಬ್ಬಂದಿಯ ಮಾತುಗಳಿಂದ ಆಕೆ ಹೆದರದೆ ಬಂಗೀ ಜಂಪ್‌ ಮಾಡಲು ಸಹಾಯ ಮಾಡಿತಂತೆ.

ವೈರಲ್ ಆದ ವಿಡಿಯೊದಲ್ಲಿ ಜಿಗಿಯಲು ತಯಾರಾಗುತ್ತಿರುವ ಯುವತಿಯು ಹೆದರಿಕೆಯಿಂದ ಹಿಂಜರಿಯುತ್ತಿರುವುದು ಸೆರೆಯಾಗಿದೆ. ಅಲ್ಲಿದ್ದ ಸಿಬ್ಬಂದಿಯು ಆಕೆಗೆ ಕೆಳಗೆ ನೋಡದೆ ಮುಂದೆ ನಡೆಯಲು ಹೇಳಿದ್ದಾನೆ. ಹಾಗೇ ಆಕೆಗೆ ಸುರಕ್ಷತೆಯೆ ಬಗ್ಗೆ ಭರವಸೆ ನೀಡಿದ್ದಾನೆ. ಇನ್ನು ಆಕೆ ಉಸಿರಾಡಲು ಕಷ್ಟವಾಗುತ್ತಿದೆ ಎಂದಾಗ ಮೆದುಳಿನ ಮಾತು ಕೇಳದೇ, ಹೃದಯದ ಮಾತು ಕೇಳಿ ಎಂದು ಆಕೆಯ ಭಯವನ್ನು ನಿವಾರಿಸಿ ಆಕೆ ಧೈರ್ಯದಿಂದ ಬಂಗೀ ಜಂಪ್‌ ಮಾಡುವುದಕ್ಕೆ ಸಹಾಯ ಮಾಡಿದ್ದಾನೆ.

ವಿಡಿಯೊ ಇಲ್ಲಿದೆ ನೋಡಿ...

ಈ ಸುದ್ದಿಯನ್ನೂ ಓದಿ:Viral Video: ಚಲಿಸುವ ರೈಲಿನಲ್ಲಿ ಸರ್ಕಸ್‌ ಮಾಡೋ ಮುನ್ನ ಈ ವಿಡಿಯೊವನ್ನೊಮ್ಮೆ ನೋಡಿ! ಎದೆ ನಡುಗಿಸೋ ಘಟನೆ ಇದು

ಈ ಸ್ಪೂರ್ತಿದಾಯಕ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ 38 ಮಿಲಿಯನ್ ವ್ಯೂವ್ಸ್‌ ಗಳಿಸಿದೆ. ಸೋಶಿಯಲ್ ಮೀಡಿಯಾ ನೆಟ್ಟಿಗರು ಈ ವಿಡಿಯೊಗೆ ಪ್ರತಿಕ್ರಿಯಿಸಿದ್ದಾರೆ. ಅನೇಕರು ಸಿಬ್ಬಂದಿಯ ಬೆಂಬಲವನ್ನು ಹೊಗಳಿ, ಅವನನ್ನು ಉತ್ತಮ ತರಬೇತುದಾರ, ಸಲಹೆಗಾರ ಮತ್ತು ಸ್ನೇಹಿತ ಎಂದು ಬಣ್ಣಿಸಿದ್ದಾರೆ. "ಆ ವ್ಯಕ್ತಿ ಪ್ರಶಸ್ತಿಗೆ ಅರ್ಹ. ನಾಟಕೀಯತೆ ಇಲ್ಲ" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, "ಸಾಹಸ ಕ್ರೀಡಾ ಸಿಬ್ಬಂದಿಯ ಬಗ್ಗೆ ನನ್ನ ಗೌರವ ಹೆಚ್ಚಾಗಿದೆ" ಎಂದು ಹೇಳಿದ್ದಾರೆ.