ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಯೋಧನ ಮೇಲೆ ಕನ್ವಾರ್‌ ಯಾತ್ರಿಕರಿಂದ ಹಲ್ಲೆ- ಶಾಕಿಂಗ್‌ ವಿಡಿಯೊ ಇಲ್ಲಿದೆ

ಕೇಂದ್ರ ಮೀಸಲು ಪೊಲೀಸ್ ಪಡೆ (Central Reserve Police Force) ಜವಾನನ ಮೇಲೆ ಕನ್ವಾರಿಯರು (Kanwariyas) ಭೀಕರವಾಗಿ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ (Uttarpradesh) ಮಿರ್ಜಾಪುರದ ರೈಲು ನಿಲ್ದಾಣದಲ್ಲಿ (Mirzapur railway station) ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಏಳು ಮಂದಿ ಕನ್ವಾರಿಯರನ್ನು ರೈಲ್ವೆ ರಕ್ಷಣಾ ಪಡೆ (Railway Protection Force) ಸಿಬ್ಬಂದಿ ಬಂಧಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಲಾಗಿದೆ.

ಮಿರ್ಜಾಪುರ: ಕೇಂದ್ರ ಮೀಸಲು ಪೊಲೀಸ್ ಪಡೆ ( Central Reserve Police Force) ಜವಾನನ ಮೇಲೆ ಕನ್ವಾರಿಯರು ( Kanwariyas) ಭೀಕರವಾಗಿ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ (uttarpradesh) ಮಿರ್ಜಾಪುರದ ರೈಲು ನಿಲ್ದಾಣದಲ್ಲಿ ( Mirzapur railway station) ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಏಳು ಮಂದಿ ಕನ್ವಾರಿಯರನ್ನು ರೈಲ್ವೆ ರಕ್ಷಣಾ ಪಡೆ ( Railway Protection Force ) ಸಿಬ್ಬಂದಿ ಬಂಧಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಲಾಗಿದೆ. ಟಿಕೆಟ್ ಖರೀದಿಸುವ ವಿಚಾರದಲ್ಲಿ ಕನ್ವಾರಿಯರು ಮತ್ತು ಸಿಆರ್‌ಪಿಎಫ್ ಸಿಬ್ಬಂದಿ ನಡುವೆ ವಾಗ್ವಾದ ಉಂಟಾಗಿದ್ದು, ಈ ವೇಳೆ ಕನ್ವಾರಿಯರು ಸಿಆರ್‌ಪಿಎಫ್ ಜವಾನನನ್ನು ಕ್ರೂರವಾಗಿ ಥಳಿಸಿದ್ದಾರೆ. ಇದರ ದೃಶ್ಯವಾಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮಿರ್ಜಾಪುರದ ರೈಲು ನಿಲ್ದಾಣದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ ಜವಾನನನ್ನು ಕ್ರೂರವಾಗಿ ಥಳಿಸಿದ್ದಕ್ಕಾಗಿ ಏಳು ಮಂದಿ ಕನ್ವಾರಿಯರನ್ನು ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ ಬಂಧಿಸಿದ್ದಾರೆ. ಟಿಕೆಟ್ ಖರೀದಿಸುವ ವಿಚಾರದಲ್ಲಿ ಕನ್ವಾರಿಯರು ಮತ್ತು ಸಿಆರ್‌ಪಿಎಫ್ ಸಿಬ್ಬಂದಿ ನಡುವೆ ವಾಗ್ವಾದ ಉಂಟಾಗಿದ್ದು, ಇದು ಉಲ್ಬಣಗೊಂಡು ಕನ್ವಾರಿಯರು ಜವಾನನನ್ನು ಹೊಡೆಯಲು ಪ್ರಾರಂಭಿಸಿದರು. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೈರಲ್ ಆಗಿರುವ ವಿಡಿಯೊದಲ್ಲಿ ಕನ್ವಾರಿಯರು ರೈಲ್ವೆ ನಿಲ್ದಾಣದಲ್ಲಿ ಸಿಆರ್‌ಪಿಎಫ್ ಸಿಬ್ಬಂದಿಗೆ ಹೊಡೆಯುವುದು, ಥಳಿಸುವುದು ಮತ್ತು ಒದೆಯುವುದನ್ನು ಕಾಣಬಹುದು. ಘಟನೆಯ ಸಮಯದಲ್ಲಿ ಸುತ್ತಮುತ್ತ ಹಲವಾರು ಮಂದಿ ಇದ್ದರು. ಕೂಡಲೇ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಸ್ಥಳಕ್ಕೆ ತಲುಪಿ ಕನ್ವಾರಿಯರನ್ನು ಬಂಧಿಸಿದ್ದು, ಅವರ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ.



ಈ ಕುರಿತು ಪ್ರತಿಕ್ರಿಯಿಸಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಾಧ್ಯಮ ವಿಚಾರಣೆಗೆ ಒಳಪಟ್ಟು ಭಯೋತ್ಪಾದಕರು ಮತ್ತು ಗಲಭೆಕೋರರು ಎಂದು ಹಣೆಪಟ್ಟಿ ಕಟ್ಟಲಾಗುವ ಕನ್ವರ್ ಯಾತ್ರಿಕರ ಮಾನಹಾನಿ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಇದು ಭಾರತದ ಪರಂಪರೆಯನ್ನು ಅವಮಾನಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Murder Case: ಲಿವ್‌ ಇನ್‌ ದುರಂತ; ಪೊಲೀಸ್‌ ಅಧಿಕಾರಿಯಾಗಿದ್ದ ಪ್ರೇಯಸಿಯನ್ನು ಕೊಂದ ಯೋಧ

ಬುಡಕಟ್ಟು ಐಕಾನ್ ಬಿರ್ಸಾ ಮುಂಡಾ ಅವರ ಕುರಿತಾದ ವಿಚಾರ ಸಂಕಿರಣದಲ್ಲಿ ಶಿವ ಭಕ್ತರನ್ನು ಬೆಂಬಲಿಸಿ ಮಾತನಾಡಿದ ಯೋಗಿ, ಕನ್ವರ್ ಯಾತ್ರಿಗಳ' ಮಾನಹಾನಿ ಮಾಡುವವರು ಬುಡಕಟ್ಟು ಸಮುದಾಯವನ್ನು ಭಾರತದಿಂದ ಬೇರ್ಪಡಿಸಲು ಪ್ರಯತ್ನಿಸಿದ ವ್ಯಕ್ತಿಗಳು ಎಂದು ಹೇಳಿದರು. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನಕಲಿ ಖಾತೆಗಳನ್ನು ರಚಿಸುವ ಮೂಲಕ ಜಾತಿ ಸಂಘರ್ಷದ ಪರಿಸ್ಥಿತಿಯನ್ನು ಸೃಷ್ಟಿಸಲು ಬಯಸುವ ಜನರು ಹೀಗೆ ಮಾಡುತ್ತಿದ್ದಾರೆ ಎಂದು ಆದಿತ್ಯನಾಥ್ ಹೇಳಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author