ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮಾನವೀಯತೆ ಇನ್ನೂ ಮರೆಯಾಗಿಲ್ಲ; ಹಸಿವಿನಿಂದ ಕಣ್ಣೀರಿಟ್ಟ ಡೆಲಿವರಿ ಬಾಯ್‌ಗೆ ಆಹಾರ ನೀಡಿದ ಗ್ರಾಹಕರು

Viral Video: ಸಂಕಷ್ಟ ಎದುರಿಸುತ್ತಿರುವ ಡೆಲಿವರಿ ಬಾಯ್‌ಗೆ ಯುವಕರು ಉಪಚರಿಸುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆಹಾರವನ್ನು ತಲುಪಿಸಲು ಹೋದ ಡೆಲಿವರಿ ಬಾಯ್‌ಗೆ ಗ್ರಾಹಕರು ತಮ್ಮ ಜತೆ ಊಟಕ್ಕೆ ಕರೆದಿದ್ದು, ಈ ಸಂದರ್ಭದಲ್ಲಿ ಅವರು ಭಾವುಕರಾಗಿದ್ದಾರೆ. ಊಟ ಮಾಡುತ್ತ ಕಣ್ಣೀರು ಸುರಿಸಿದ ಆ ಡೆಲಿವರಿ ರೈಡರ್, ತಮ್ಮ ಕಷ್ಟವನ್ನು ಹಂಚಿಕೊಂಡಿದ್ದಾರೆ.

ಡೆಲಿವರಿ ಬಾಯ್‌ಗೆ ಆಹಾರ ನೀಡಿ ಉಪಚರಿಸಿದ ಗ್ರಾಹಕರು

ದೆಹಲಿ, ಮಾ. 11: ಯಾವುದೇ ಅಗತ್ಯ ವಸ್ತು, ಆಹಾರ ಬೇಕೆಂದಾಗ ನಾವು ಆನ್‌ಲೈನ್ ಮೂಲಕ ಆರ್ಡರ್ ಮಾಡುತ್ತೇವೆ. ಈ ವಸ್ತುಗಳು ಕ್ಷಣಾರ್ಧದಲ್ಲಿ ನಮ್ಮ ಕೈಗೆ ಬಂದು ಸೇರುತ್ತವೆ. ಆದರೆ ಇದನ್ನು ತಲುಪಿಸುವ ಡೆಲಿವರಿ ಬಾಯ್‌ಗಳ ಹಿಂದಿನ ಕಷ್ಟ ನಮಗೆ ತಿಳಿದಿರುವುದಿಲ್ಲ. ಇದೀಗ ಡೆಲಿವರಿ ಬಾಯ್ ಎದುರಿಸುತ್ತಿರುವ ಸಂಕಷ್ಟವೊಂದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಆಹಾರವನ್ನು ತಲುಪಿಸಲು ಹೋದ ಡೆಲಿವರಿ ಬಾಯ್‌ಗೆ ಅಲ್ಲಿನ ಗ್ರಾಹಕರು ತಮ್ಮ ಜತೆ ಊಟ ಮಾಡುವಂತೆ ಕರೆದಿದ್ದಾರೆ. ಈ ಸಂದರ್ಭದಲ್ಲಿ ಅವರು ಭಾವುಕರಾಗಿದ್ದಾರೆ. ಊಟ ಮಾಡುತ್ತ ಕಣ್ಣೀರು ಸುರಿಸಿದ ಆ ಡೆಲಿವರಿ ರೈಡರ್, ತಮ್ಮ ಕಷ್ಟವನ್ನು ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಆಹಾರ ತಲುಪಿಸುವ ಡೆಲಿವರಿ ಬಾಯ್‌ಗಳ ಸಂಕಷ್ಟಗಳು ಹೆಚ್ಚಾಗುತ್ತಿವೆ. ತೀವ್ರ ಸಂಚಾರ ದಟ್ಟಣೆ, ಕಡಿಮೆ ಸಂಬಳ, ಅಪಘಾತದ ಭೀತಿ ಹೀಗೆ ನಾನಾ ಕಾರಣದಿಂದ ತೊಂದರೆ ಅನುಭವಿಸುತ್ತಿದ್ದಾರೆ. ಇದೀಗ ದೆಹಲಿಯಲ್ಲಿ ಆಹಾರ ತಲುಪಿಸಲು ಹೋದ ಡೆಲಿವರಿ ಬಾಯ್‌ಗೆ ಅಲ್ಲಿನ ಗ್ರಾಹಕರು ಊಟಕ್ಕೆ ಕರೆದಿದ್ದಾರೆ. ಸ್ವಿಗ್ಗಿ ಸಮವಸ್ತ್ರದಲ್ಲಿದ್ದ ಆ ವ್ಯಕ್ತಿ, ತಟ್ಟೆಯಲ್ಲಿ ಬಡಿಸಿದ ಊಟವನ್ನು ನೋಡಿ ಕಣ್ಣೀರು ಹಾಕಿದ್ದಾರೆ.

ವಿಡಿಯೊ ನೋಡಿ:



ತನ್ನ ಕಣ್ಣೀರನ್ನು ಒರೆಸುತ್ತ ಕೆಲಸದ ಒತ್ತಡದಲ್ಲಿ ನನಗೆ ಹಸಿವಾಗಿದೆ ಎಂದು ತಿಳಿದೇ ಇರಲಿಲ್ಲ. “ಸರ್ ನಾನು ಮನೆಯಿಂದ ಹೊರಟಾಗ ಒಂದು ಕಪ್ ಚಹಾ ಕುಡಿದಿದ್ದೆ ಅಷ್ಟೇ'' ಎಂದಿದ್ದಾರೆ. ಮನೆಯಲ್ಲಿ ತನ್ನ ಜವಾಬ್ದಾರಿಗಳ ಬಗ್ಗೆ ಮಾತನಾಡುತ್ತಾ "ನನಗೆ ಒಬ್ಬ ಮಗ ಮತ್ತು ಒಬ್ಬ ಮಗಳು ಇದ್ದಾರೆ. ಅವರಿಗಾಗಿ ದುಡಿಯಲೇಬೇಕುʼʼ ಎಂದು ಕಣ್ಣೀರು ಹಾಕಿದ್ದಾರೆ.

ಅವಹೇಳನ ಮೆಟ್ಟಿ ನಿಂತು ಯಶಸ್ಸು ಕಂಡ ಸಿಲೇಂದ್ರನ್ ಅರುಣಗಿರಿ: ಜೀವನದ ಗುಟ್ಟು ಹೇಳಿದ ಐಐಎಂ ಪದವೀಧರ

ವಿಡಿಯೊದಲ್ಲಿರುವ ಗ್ರಾಹಕರು ಅವನನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ಮೊದಲು ಅವರು ತಿನ್ನುವತ್ತ ಗಮನಹರಿಸಲು ಹೇಳಿದ್ದಾರೆ. ಇದು ತನ್ನ ಮಕ್ಕಳ ಹೊಟ್ಟೆ ತುಂಬಿಸಲು ತನ್ನ ಸ್ವಂತ ಹಸಿವನ್ನು ಮರೆತುಬಿಡುವ ಮಧ್ಯಮ ವರ್ಗದ ತಂದೆಯ ಸತ್ಯ ಎಂದು ಬರೆದು ವಿಡಿಯೊ ಶೇರ್ ಮಾಡಲಾಗಿದೆ.

ಈ ವಿಡಿಯೊ ಭಾರಿ ವೈರಲ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಅನೇಕ ನೆಟ್ಟಿಗರು ಆಹಾರವನ್ನು ನೀಡಿದ ಗ್ರಾಹಕರ ಗುಣವನ್ನು ಮೆಚ್ಚಿದ್ದಾರೆ. ಇತರರು ಈ ದುರ್ಬಲ ಕ್ಷಣವನ್ನು ರೆಕಾರ್ಡ್ ಮಾಡುವುದು ತಪ್ಪು ಎಂದಿದ್ದಾರೆ. ಈ ಕ್ಲಿಪ್ ಮನೆ ಬಾಗಿಲಿಗೆ ತಲುಪಿಸುವ ಆಹಾರವನ್ನು ನಾವು ಆನಂದಿಸುತ್ತಿದ್ದರೂ, ಅಲ್ಲಿನ ಕೆಲವು ಕಾರ್ಮಿಕರು, ಆರ್ಥಿಕ ಒತ್ತಡ ಮತ್ತು ವೈಯಕ್ತಿಕ ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ ಎಂಬುದನ್ನು ನೆನಪಿಸುವಂತೆ ಮಾಡಿದೆ.