Viral Video: ರೈಲಿನಲ್ಲೇ ಮಿನಿ ಕನ್ಸರ್ಟ್: ಅಹಮದಾಬಾದ್-ಲಖನೌ ಪ್ರಯಾಣಿಕರಿಂದ ಫುಲ್ ಮಸ್ತಿ
ಅಹಮದಾಬಾದ್‌ನಿಂದ ಲಖನೌಗೆ ಹೋಗುವ ರೈಲಿನಲ್ಲಿ ಪ್ರಯಾಣಿಕರಿಗೆ ಒಂದು ವಿಶೇಷ ಅನುಭವ ಸಿಕ್ಕಿದೆ. ಭಾರತೀಯ ಸಂಗೀತ ಬ್ಯಾಂಡ್ 'ಸ್ಟೋನ್ ಕೀಸ್' ಸದಸ್ಯರು ಇಡೀ ರೈಲು ಬೋಗಿಯನ್ನೇ ಲೈವ್ ಮ್ಯೂಸಿಕ್ ಆಗಿ ಪರಿವರ್ತಿಸಿದ್ದು ಅದರಲ್ಲಿದ್ದ ಪ್ರಯಾಣಿಕರು ಕುಣಿದು ಕುಪ್ಪಳಿಸಿದ್ದಾರೆ. ಸದ್ಯ ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ರೈಲು ಪ್ರಯಾಣದಲ್ಲಿ ಮಿನಿ ಕನ್ಸರ್ಟ್ -
ನವದೆಹಲಿ, ಫೆ. 2: ರೈಲು ಪ್ರಯಾಣ ಎಂದರೆ ಹೆಚ್ಚಿನವರು ಇಷ್ಟಪಡುತ್ತಾರೆ. ಸುರಕ್ಷೆಯ ಜತೆಗೆ ಅಗ್ಗದ ದರದಲ್ಲೂ ಪ್ರಯಾಣ ಮಾಡಬಹುದು ಎನ್ನುವುದು ಇದರ ವೈಶಿಷ್ಟ್ಯ. ಅದರಲ್ಲೂ ಕಿಟಕಿ ಆಚೆಗಿನ ನೋಟ, ಪ್ರಕೃತಿ ದೃಶ್ಯ ಪ್ರಯಾಣಕ್ಕೆ ಇನ್ನಷ್ಟು ಖುಷಿಯ ಸ್ಪರ್ಶ ನೀಡುತ್ತದೆ. ಗುಜರಾತ್‌ನ ಅಹಮದಾಬಾದ್‌ನಿಂದ ಉತ್ತರ ಪ್ರದೇಶದ ಲಖನೌಗೆ ತೆರಳುವ ರೈಲಿನಲ್ಲಿ ಪ್ರಯಾಣಿಕರಿಗೆ ಒಂದು ವಿಶೇಷ ಅನುಭವ ಸಿಕ್ಕಿದೆ. ಭಾರತೀಯ ಸಂಗೀತ ಬ್ಯಾಂಡ್ 'ಸ್ಟೋನ್ ಕೀಸ್' ಸದಸ್ಯರು ಇಡೀ ರೈಲು ಬೋಗಿಯನ್ನು ಲೈವ್ ಮ್ಯೂಸಿಕ್ ಆಗಿ ಪರಿವರ್ತಿಸಿದ್ದು ಅದರಲ್ಲಿದ್ದ ಪ್ರಯಾಣಿಕರು ಕುಣಿದು ಕುಪ್ಪಳಿಸಿದ್ದಾರೆ. ಸದ್ಯ ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಲಾದ ವಿಡಿಯೊದಲ್ಲಿ ಸಾಮಾನ್ಯ ಕೋಚ್ ಮಿನಿ ಕನ್ಸರ್ಟ್ ವೇದಿಕೆಯಾಗಿ ರೂಪಾಂತರಗೊಂಡಿರುವುದು ಕಂಡು ಬಂದಿದೆ. ರೈಲಿನಲ್ಲಿ ಸ್ಟೋನ್ ಕೀಸ್ ಬ್ಯಾಂಡ್ ಸದಸ್ಯರು ಗಿಟಾರ್ ಹಿಡಿದು ಬಾಲಿವುಡ್‌ನ ಎವರ್‌ಗ್ರೀನ್ ಹಿಟ್ ಹಾಡುವ ಮೂಲಕ ಪ್ರಯಾಣಿಕರನ್ನು ಖುಷಿ ಪಡಿಸಿದ್ದಾರೆ. ಸ್ಟೋನ್ ಕೀಸ್ ಶೇರ್ ಮಾಡಿದ ಈ ವಿಡಿಯೊವು ಪ್ರಯಾಣದ ಸಮಯದಲ್ಲಿ ರೈಲು ಕೋಚ್ ಹೇಗೆ ಉತ್ಸಾಹಭರಿತ, ಪೂರ್ವಸಿದ್ಧತೆಯಿಲ್ಲದ ಸಂಗೀತ ಕಛೇರಿಯಾಗಿ ಬದಲಾಯಿತು ಎಂಬುದನ್ನು ತೋರಿಸಿದೆ
ವಿಡಿಯೊ ನೋಡಿ:
ಕ್ಲಿಪ್‌ನಲ್ಲಿ ಹಾಡು ಕೇಳುತ್ತಿದ್ದಂತೆ ಪ್ರಯಾಣಿಕರು ಹಾಡಿನ ಧ್ವನಿ ಕೇಳಿ ಕಂಪಿಸುತ್ತಿರುವುದನ್ನು ತೋರಿಸುತ್ತದೆ. ಕೆಲವು ಪ್ರಯಾಣಿಕರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರೆ, ಹಾಡಿನ ಗುಂಗಿಗೆ ಮಾರು ಹೋದ ಹಿರಿಯ ನಾಗರಿಕರು ತಮ್ಮ ಸೀಟ್‌ನಿಂದ ಎದ್ದು ನೃತ್ಯ ಮಾಡಿದ್ದಾರೆ. ಅಪರಿಚಿತ ಪ್ರಯಾಣಿಕರೆಲ್ಲರೂ ಒಂದಾಗಿ, ಹಾಡಿಗೆ ಹೆಜ್ಜೆ ಹಾಕುವ ಮೂಲಕ ರೈಲು ಬೋಗಿಯನ್ನು ಥಿಯೇಟರ್‌ನಂತೆ ಮಾಡಿದ್ದಾರೆ.
ಓವರ್ ಟೇಕ್ ಮಾಡಲು ಹೋಗಿ ಲಾರಿಯ ಚಕ್ರದಡಿಗೆ ಸಿಲುಕಿ ಸ್ಕೂಟರ್ ಸವಾರ ಅಪ್ಪಚ್ಚಿ
ಸದ್ಯ ಈ ವಿಡಿಯೊ ಭಾರಿ ವೈರಲ್ ಆಗಿದ್ದು ನೆಟ್ಟಿಗರು ಫಿದಾ ಆಗಿದ್ದಾರೆ. ಒಬ್ಬರು, ʼʼನಾನು ರೈಲಿನಲ್ಲಿ ಪ್ರಯಾಣ ಮಾಡುವಾಗ ಇಂತಹ ಮಸ್ತಿ ಯಾಕೆ ನಡೆಯುವುದಿಲ್ಲ?ʼʼ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು, ʼʼರೈಲಿನಲ್ಲಿ ಇಂತಹ ಅನುಭವ ನಿಜಕ್ಕೂ ಸ್ವರ್ಗʼʼ ಎಂದು ಬರೆದು ಕೊಂಡಿದ್ದಾರೆ. ಹಲವರು ಈ ವಿಡಿಯೊಗೆ ಲೈಕ್ ಕಮೆಂಟ್‌ಗಳ ಸುರಿಮಳೆಗೈದಿದ್ದಾರೆ.