ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಗರ್ಭಿಣಿಯರಿಗೆ ನೀಡುವ ಪೌಷ್ಟಿಕಾಂಶದ ಕಿಟ್‌ನಲ್ಲಿ ಸತ್ತ ಹಾವಿನ ಮರಿ!

ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿಯರಿಗೆ ವಿತರಿಸಲಾದ ಪೌಷ್ಠಿಕ ಆಹಾರದ ಪ್ಯಾಕೆಟ್‌ನಲ್ಲಿ ಸತ್ತ ಹಾವಿನ ಮರಿ ಪತ್ತೆಯಾದ ಘಟನೆ ಮಧ್ಯಪ್ರದೇಶದ ಪಂಧುರ್ನಾ ಜಿಲ್ಲೆಯಲ್ಲಿ ನಡೆದಿದೆ. ಪೂರಕ ಪೌಷ್ಟಿಕಾಂಶದ ಉದ್ದೇಶಕ್ಕಾಗಿ ಲಡ್ಡುಗಳನ್ನು ಹೊಂದಿದ್ದ ಪ್ಯಾಕೆಟ್ ಅನ್ನು ಕಾರ್ಘಾಟ್ ಕಾಮ್ತಿ ಗ್ರಾಮದ ಗರ್ಭಿಣಿ ಮಹಿಳೆ ವಾಚಲಾ ಬಾಯಿ ಧುರ್ವೆ ಅವರಿಗೆ ನೀಡಲಾಗಿತ್ತು.

ಸಂಗ್ರಹ ಚಿತ್ರ

ಭೋಪಾಲ್‌: ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿಯರಿಗೆ ವಿತರಿಸಲಾದ ಪೌಷ್ಠಿಕ ಆಹಾರದ ಪ್ಯಾಕೆಟ್‌ನಲ್ಲಿ ಸತ್ತ ಹಾವಿನ ಮರಿ ಪತ್ತೆಯಾದ ಘಟನೆ ಮಧ್ಯಪ್ರದೇಶದ ಪಂಧುರ್ನಾ ಜಿಲ್ಲೆಯಲ್ಲಿ ನಡೆದಿದೆ. ಪೂರಕ ಪೌಷ್ಟಿಕಾಂಶದ ಉದ್ದೇಶಕ್ಕಾಗಿ ಲಡ್ಡುಗಳನ್ನು ಹೊಂದಿದ್ದ ಪ್ಯಾಕೆಟ್ ಅನ್ನು ಕಾರ್ಘಾಟ್ ಕಾಮ್ತಿ ಗ್ರಾಮದ ಗರ್ಭಿಣಿ ಮಹಿಳೆ ವಾಚಲಾ ಬಾಯಿ ಧುರ್ವೆ (Viral News) ಅವರಿಗೆ ನೀಡಲಾಗಿತ್ತು. ಅದೃಷ್ಟವಶಾತ್, ಅವರು ಆಹಾರವನ್ನು ಸೇವಿಸಿರಲಿಲ್ಲ. ಅವರ ಕುಟುಂಬದವರು ಮನೆಯಲ್ಲಿ ಪ್ಯಾಕೆಟ್ ಅನ್ನು ತೆರೆದಾಗ, ಒಳಗೆ ಸತ್ತ ಹಾವು ಮರಿ ಇರುವುದನ್ನು ನೋಡಿ ಶಾಕ್‌ಗೆ ಒಳಗಾಗಿದ್ದಾರೆ.

ಕುಟುಂಬವು ತಕ್ಷಣ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಿತು. ಕೂಡಲೇ, ಯೋಜನಾಧಿಕಾರಿ ಉಷಾ ಪಾಂಡ್ರೆ ಸೇರಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ನಂದನವಾಡಿ ಪೊಲೀಸರು ಮತ್ತು ನಯೀಬ್ ತಹಶೀಲ್ದಾರ್ ಅವರೊಂದಿಗೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳು ಪ್ಯಾಕೆಟ್ ಅನ್ನು ವಶಪಡಿಸಿಕೊಂಡಿದ್ದು, ಅಧಿಕೃತ ಪರಿಶೀಲನಾ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ.

ವಿಷಯದ ಬಗ್ಗೆ ತನಿಖೆ ನಡೆಸಲು ಹಂಗಾಮಿ ಜಿಲ್ಲಾಧಿಕಾರಿ ಅಗ್ರಿಮ್ ಕುಮಾರ್ ಐದು ಸದಸ್ಯರ ತನಿಖಾ ಸಮಿತಿಯನ್ನು ರಚಿಸಿದ್ದಾರೆ. ಪ್ಯಾಕೆಟ್‌ನಿಂದ ಆಹಾರದ ಮಾದರಿಯನ್ನು ಆಹಾರ ಅಧಿಕಾರಿ ವಶಪಡಿಸಿಕೊಂಡು ಭೋಪಾಲ್‌ನಲ್ಲಿರುವ ರಾಜ್ಯ ಆಹಾರ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು. ಪ್ರಯೋಗಾಲಯದ ವರದಿ ಮತ್ತು ತನಿಖಾ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ರಸ್ತೆ ಬದಿ ಕಸ ಎಸೆದ ವಿಡಿಯೊ ವೈರಲ್‌; ಟ್ರೋಲ್‌ಗೆ ಅಂಜಿ 23 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ

ಬಿಹಾರದ ಬಲುವಾಹದಲ್ಲಿರುವ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಮಕ್ಕಳಿಗೆ ನೀಡಿದ ಮಧ್ಯಾಹ್ನದ ಬಿಸಿಯೂಟದಲ್ಲಿ ಮರಿ ಹಾವು ಕಂಡು ಬಂದಿದೆ. ತಿಳಿಯದೇ, ಈ ಆಹಾರ ಸೇವಿಸಿದ ನಂತರ 250 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿದ್ದಾರೆ. ಮಕ್ಕಳು ಹೊಟ್ಟೆ ನೋವು, ವಾಂತಿ, ತಲೆಸುತ್ತು ಮತ್ತು ವಾಕರಿಕೆಯಿಂದ ಬಳಲಿದ್ದಾರೆ. ಘಟನೆಯ ನಂತರ ಎಲ್ಲ ಅಸ್ವಸ್ಥ ಮಕ್ಕಳನ್ನು ತಕ್ಷಣವೇ ವೈದ್ಯಕೀಯ ಆರೈಕೆಗಾಗಿ ಸ್ಥಳೀಯ ಮಹಿಷಿ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಅಲ್ಲಿ ಎಲ್ಲ ಮಕ್ಕಳಿಗೆ ಪ್ರಸ್ತುತ ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕ್ಕ ಆರೋಗ್ಯ ಕೇಂದ್ರದಲ್ಲಿ ಇಷ್ಟೊಂದು ಸಂಖ್ಯೆಯ ಮಕ್ಕಳನ್ನು ಒಂದೇ ಬಾರಿಗೆ ದಾಖಲಿಸಿದ್ದರಿಂದ ಜನಸಂದಣಿಗೆ ಹೆಚ್ಚಿತು. ಇರುವ ಕನಿಷ್ಠ ವೈದ್ಯರ ತಂಡವು ನಿರಂತರವಾಗಿ ಅವರ ಪರೀಕ್ಷೆ ಮತ್ತು ಚಿಕಿತ್ಸೆಯಲ್ಲಿ ತೊಡಗಿಸಿಕೊಂಡಿದೆ.

Vishakha Bhat Heggar

View all posts by this author