ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಅರೇ... ಇದೆಂಥಾ ವೆಡ್ಡಿಂಗ್‌ ಫೋಟೋಶೂಟ್‌! ನೋಡಿದ್ರೆ ನೀವೂ ಅಚ್ಚರಿ ಪಡ್ತೀರಾ

Viral Video: ನವ ವಧು ವರರು ಮುಖಕ್ಕೆ ಆಕ್ಸಿಜನ್ ಮಾಸ್ಕ್ ಅನ್ನು ಧರಿಸಿ ಫೋಟೊ ಶೂಟ್ ಮಾಡಿಸಿ ಕೊಂಡ ದೃಶ್ಯ ದೆಹಲಿಯಲ್ಲಿ ನಡೆದಿದೆ. ಸದ್ಯ ಈ ಜೋಡಿಗಳ ಫೋಟೋಶೂಟ್‌ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ‌ ವೈರಲ್ ಆಗುತ್ತಿದ್ದು ನೆಟ್ಟಿಗರ ಗಮನ ಸೆಳೆಯುತ್ತಿದೆ...

ಆಕ್ಸಿಜನ್ ಮಾಸ್ಕ್ ಹಾಕಿ ಫೋಟೊಶೂಟ್ ಮಾಡಿಸಿಕೊಂಡ ವಧು-ವರರು

ನವದೆಹಲಿ: ಇತ್ತೀಚಿನ ದಿನದಲ್ಲಿ ಮದುವೆಗೆ ಫೋಟೋ ಶೂಟ್ ಮಾಡಿಸಿಕೊಳ್ಳುವ ಪ್ರಮಾಣ ಹೆಚ್ಚಾಗಿದೆ. ಅದರಲ್ಲೂ ಡಿಫರೆಂಟ್ ಆಗಿ ಫೋಟೋ ಶೂಟ್ ಮಾಡಿಸಿಕೊಳ್ಳುವುದನ್ನು ಬಹು ತೇಕರು ಇಷ್ಟಪಡುತ್ತಾರೆ. ಕುದುರೆ ಏರಿ ಮದುವೆ ಮನೆಗೆ ಬರುವುದು, ಪಲ್ಲಕ್ಕಿಯಲ್ಲಿ ಮದುವೆ ಹಾಲ್ ಗೆ ಎಂಟ್ರಿ ಕೊಡುವುದು, ಅಂಡರ್ ವಾಟರ್ ಫೋಟೊ ಶೂಟ್ ಹೀಗೆ ನಾನಾ ತರನಾಗಿ ವಿಭಿನ್ನವಾಗಿ ಫೋಟೊ ಶೂಟ್ ಮಾಡಿಸಿಕೊಂಡಿದ್ದು ಇದೆ‌. ಅಂತೆಯೇ ಇದೀಗ ನವ ವಧು ವರರು ಮುಖಕ್ಕೆ ಆಕ್ಸಿಜನ್ ಮಾಸ್ಕ್ (oxygen filtered mask) ಅನ್ನು ಧರಿಸಿ ಫೋಟೊ ಶೂಟ್ ಮಾಡಿಸಿಕೊಂಡ ದೃಶ್ಯ ದೆಹಲಿಯಲ್ಲಿ ನಡೆದಿದೆ. ಸದ್ಯ ಈ ಜೋಡಿಗಳ ಫೋಟೋಶೂಟ್‌ ವಿಡಿಯೋ ಸಾಮಾಜಿಕ ಜಾಲತಾಣ ದಲ್ಲಿ‌ ವೈರಲ್ (Viral Video) ಆಗುತ್ತಿದ್ದು ನೆಟ್ಟಿಗರ ಗಮನ ಸೆಳೆಯುತ್ತಿದೆ.

ಇನ್ ಸ್ಟಾ ಗ್ರಾಂ ನಲ್ಲಿ ಹಂಚಿಕೊಂಡ ಈ ವಿಡಿಯೋ ನಿಜವಾಗಿ ಮದುವೆಯಾಗಿದ್ದಲ್ಲ ಬದಲಾಗಿ ಕಂಟೆಂಟ್ ಕ್ರಿಯೆಟ್ ವಿಡಿಯೋ ಎಂದು ತಿಳಿದು ಬಂದಿದೆ. ಇದನ್ನು 'ದೆಹಲಿ ಜೋಡಿಗಳ ಫೋಟೋ ಶೂಟ್' ಎಂದು ಬರೆಸಿಕೊಂಡು ವಿಡಿಯೋ ಪೋಸ್ಟ್ ಮಾಡಲಾಗಿದೆ. ಕಾಮಿಡಿ ರೀಲ್ಸ್ ಮಾಡಿ ಫೇಮಸ್ ಆದಂತಹ ಸೋಶಿಯಲ್ ಮಿಡಿಯಾ ಇನ್ ಫ್ಲುಯೆನ್ಸರ್ ರಿಷಭ್ ಶುಕ್ಲಾ (Rishabh Shukla) ಅವರು ಈ ವಿಡಿಯೋದಲ್ಲಿ ಮದು‌ ಮಗನಂತೆ ಹಾಗೂ ಸೋಶಿಯಲ್ ಮಿಡಿಯಾ ಇನ್ ಫ್ಲುಯೆನ್ಸರ್ ಮುಸ್ಕಾನ್ ನಾಥ್‌ಪಾಲ್ (Muskan Nathpal) ವಧುವಿನಂತೆ ಕಾಣಿಸಿಕೊಂಡಿದ್ದಾರೆ‌.

ಆಕ್ಸಿಜನ್ ಮಾಸ್ಕ್ ನಲ್ಲಿ ನವ ದಂಪತಿಗಳ ಫೋಟೋ ಶೂಟ್:



ವೈರಲ್ ಆದ ವಿಡಿಯೋದಲ್ಲಿ ದೆಹಲಿಯ ವಾಯು ಮಾಲಿನ್ಯದ ವಿಚಾರದ ಬಗ್ಗೆ ಜಾಗೃತಿ ಮೂಡಿಸ ಲಾಗಿದ್ದನ್ನು ಕಾಣಬಹುದು. ಸದ್ಯದ ಸ್ಥಿತಿಯಲ್ಲಿ ದೆಹಲಿಯಲ್ಲಿ ನವ ದಂಪತಿಗಳು ಮಾಲಿನ್ಯ ನಿಯಂತ್ರಣದ ನಡುವೆ ಈ ರೀತಿ ಫೋಟೊ ಶೂಟ್ ಮಾಡಿಸ ಬಹುದು ಎಂಬರ್ಥದಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿದೆ. ಇಬ್ಬರು ಆಕ್ಸಿಜನ್ ಮಾಸ್ಕ್ ಧರಿಸಿ ಕೊಂಡಿರುವುದನ್ನು ಕಾಣಬಹುದು.‌ ಮದುವೆ ಫೋಟೊ ಶೂಟ್ ಮಾಡಿಸುವಾಗ ಗುಲಾಬಿ, ಸಂಪಿಗೆ ಹೂವಿನ ಮಾಲೆ ಮಾಡುವುದು ನೋಡಿದ್ದೇವೆ ಆದರೆ ಇಲ್ಲಿ ಹೂವುಗಳ ಬದಲಿಗೆ ಔಷಧಿಗಳ ರಾಪ್ ಬಳಸಿ ವಧುವಿನ ಮೇಲೆ ಅದನ್ನು ಸುರಿಯಲಾಗಿದೆ‌.

ಇದನ್ನು ಓದಿ:Viral Video: ತ್ಯಾಜ್ಯ ವಸ್ತುವಿನಿಂದ ಕಡಿಮೆ ಖರ್ಚಿನಲ್ಲಿ ಕಾಂತಾರ ಚಿತ್ರದ ಹುಲಿಯ ರೀ ಕ್ರಿಯೇಶನ್‌!ಕಲಾವಿದ ಕೈಚಳಕದ ವಿಡಿಯೊ ಇಲ್ಲಿದೆ

ಬಳಿಕ ಕೈ ಗೆ ರಿಂಗ್ ಹಾಕುವ ಬದಲು ಹೆಲ್ತ್ ಚೆಕಪ್ ಮಾಡುವ ಮಿಶನ್ ಅನ್ನು ಕೈ ಬೆರಳಿಗೆ ಹಾಕಲಾಗಿದೆ. ವೆಂಟಿ ಲೇಟರ್ ನಲ್ಲಿ ಜೋಡಿ ಒಟ್ಟಿಗೆ ಸೆಲ್ಫಿ ತೆಗೆಯುವುದು ಹೀಗೆ ವಿಭಿನ್ನವಾಗಿ ಈ ಫೋಟೊ ಶೋಟ್ ಮಾಡಿಸಲಾಗಿದೆ. ಮೇಲ್ನೋಟಕ್ಕೆ ಈ ವಿಡಿಯೋ ಬಹಳ ಫನ್ನಿಯಾಗಿ ಕಂಡಿ ದ್ದರೂ ದೆಹಲಿಯಲ್ಲಿ ಕಂಡುಬರುವ ವಾಯುಮಾಲಿನ್ಯ, ಅದರಿಂದ ಉಂಟಾಗುವ ಆರೋಗ್ಯ ಸಮಸ್ಯೆ ಇತ್ಯಾದಿಗಳ ಮೇಲೆ ಗಮನ‌ಹರಿಸಿದ್ದು ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗಿದೆ.

ಈ ವಿಡಿಯೋ ಬಗ್ಗೆ ನೆಟ್ಟಿಗರು ನಾನಾತರನಾಗಿ ಕಾಮೆಂಟ್‌ ಹಾಕಿ ಪ್ರತಿಕ್ರಿಯೆ ನೀಡಿದ್ದಾರೆ. ಇದು ನಮ್ಮ ಭವಿಷ್ಯವನ್ನು ವ್ಯಂಗ್ಯದಿಂದ ತಿಳಿಸಿದಂತಿದೆ. ಬಹುಷಃ ಮುಂದಿನ‌ಎಲ್ಲಾ ಮದುವೆಗಳು ಹೀಗೇ ಇರುವುದರಲ್ಲಿ ಆಶ್ಚರ್ಯವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ಇನ್ನಾದರು ಈ ಬಗ್ಗೆ ಜನರಿಗೆ ಮನದಟ್ಟಾಗಲಿ, ವಾಯುಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಜರುಗಿಸಲಿ ಎಂದು ಬರೆದು ಕೊಂಡಿದ್ದಾರೆ