ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಊಬರ್ ಚಾಲಕನಿಗೆ ಗನ್ ತೋರಿಸಿ ಬೆದರಿಕೆ ಹಾಕಿದ ಪ್ರಯಾಣಿಕ; ಕಿಡಿಕಾರಿದ ನೆಟ್ಟಿಗರು!

ದೆಹಲಿಯ ಲಕ್ಷ್ಮಿ ನಗರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಪ್ರಯಾಣಿಕ ನೊಬ್ಬನು ಊಬರ್ ಚಾಲಕನಿಗೆ ಗನ್ ತೋರಿಸಿ ಬೆದರಿಕೆ ಹಾಕಿರುವ ದೃಶ್ಯ ಭಾರೀ ವೈರಲ್ ಆಗಿದ್ದು ನೆಟ್ಟಿಗರು ಕಿಡಿ ಕಾರಿದ್ದಾರೆ. ಪ್ರಯಾಣಿಕನು ಒಂದೇ ಬಾರಿಗೆ ಎರಡು ಊಬರ್ ಕ್ಯಾಬ್ ಅನ್ನು ಬುಕ್ ಮಾಡಿದ್ದನು. ಇದೇ ಕಾರಣದಿಂದ ಜಗಳ ಉಂಟಾಗಿದೆ ಎಂದು ತಿಳಿದು ಬಂದಿದೆ.

ಊಬರ್ ಚಾಲಕನಿಗೆ ಗನ್ ತೋರಿಸಿ ಬೆದರಿಕೆ ಹಾಕಿದ ಪ್ರಯಾಣಿಕ(ಸಾಂದರ್ಭಿಕ)

ನವದೆಹಲಿ: ದೆಹಲಿಯ ಲಕ್ಷ್ಮಿ ನಗರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಪ್ರಯಾಣಿಕ ನೊಬ್ಬನು ಊಬರ್ ಚಾಲಕನಿಗೆ ಗನ್ ತೋರಿಸಿ ಬೆದರಿಕೆ ಹಾಕಿರುವ ದೃಶ್ಯ ಭಾರೀ ವೈರಲ್ (Viral Video) ಆಗಿದ್ದು ನೆಟ್ಟಿಗರು ಕಿಡಿಕಾರಿದ್ದಾರೆ. ದೆಹಲಿಯ ಲಕ್ಷ್ಮಿ ನಗರದ ಮಾರುಕಟ್ಟೆವೊಂದರಲ್ಲಿ ಈ ಘಟನೆ ನಡೆ ದಿದ್ದು ರಾಜಧಾನಿಯಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಚಾಲಕರ ಸುರಕ್ಷತೆ ಬಗ್ಗೆ ತೀವ್ರ ಕಳವಳ ಮೂಡಿಸಿದೆ. ವಿಡಿಯೊ ನೋಡಿದ ಜನರು ಚಾಲಕನ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ವರದಿ ಪ್ರಕಾರ, ಪ್ರಯಾಣಿಕನು ಒಂದೇ ಬಾರಿಗೆ ಎರಡು ಊಬರ್ ಕ್ಯಾಬ್ ಅನ್ನು ಬುಕ್ ಮಾಡಿದ್ದನು. ಇದೇ ಕಾರಣದಿಂದ ಜಗಳ ಉಂಟಾಗಿದೆ ಎಂದು ತಿಳಿದು ಬಂದಿದೆ.

ಪ್ರಯಾಣಿಕನು ಎರಡು ಕ್ಯಾಬ್ ಅನ್ನು ಬುಕ್ ಮಾಡಿದ್ದನು. ಈ ಸಂದರ್ಭದಲ್ಲಿ ಇಬ್ಬರೂ ಚಾಲ ಕರು ಪಿಕಪ್ ಸ್ಥಳಕ್ಕೆ ಬಂದಾಗ, ಗೊಂದಲ ಉಂಟಾಗಿದೆ, ಇದು ಪ್ರಯಾಣಿಕ ಮತ್ತು ಚಾಲಕರಲ್ಲಿ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಮಾತಿನ ಚಕಮಕಿ ತಾರಕಕ್ಕೇರಿದಾಗ, ಪ್ರಯಾಣಿಕ ತನ್ನ ಕೋಪವನ್ನು ನಿಯಂತ್ರಿಸಲಾಗದೆ, ತನ್ನ ಬಳಿಯಿದ್ದ ಪಿಸ್ತೂಲ್ ತೆಗೆದು ಚಾಲಕನಿಗೆ ಜೀವ ಬೆದರಿಕೆ ಹಾಕಿದ್ದಾನೆ. ವೈರಲ್ ಆದ ವಿಡಿಯೋದಲ್ಲಿ, ಕುರ್ತಾ ಮತ್ತು ಜೀನ್ಸ್ ಧರಿಸಿದ ವ್ಯಕ್ತಿಯೊಬ್ಬ, ಉಬರ್ ಚಾಲಕನಿಗೆ ಬಂದೂಕಿನಿಂದ ಬೆದರಿಕೆ ಹಾಕಿರುವ ದೃಶ್ಯ ಕಾಣಬಹುದು.

ಊಬರ್ ಚಾಲಕನಿಗೆ ಗನ್ ತೋರಿಸಿ ಬೆದರಿಕೆ ಹಾಕಿದ ಪ್ರಯಾಣಿಕ



ಪ್ರಯಾಣಿಕನು ಗನ್ ತೋರಿಸಿದರೂ ಸಹ, ಚಾಲಕ ಭಯಪಡದೇ ಕ್ಯಾಮೆರಾದಲ್ಲಿ ಇಡೀ ಘಟನೆ ಯನ್ನು ರೆಕಾರ್ಡ್ ಮಾಡಿದ್ದಾರೆ. ಪ್ರಯಾಣಿಕ ಗನ್ ತೋರಿಸುವಾಗ ಚಾಲಕನು ಆರೋಪಿಯನ್ನು ದಿಟ್ಟಿಸಿ, ಪಿಸ್ತೂಲ್ ತೋರಿಸುತ್ತಿದ್ದೀರಾ? ಚೆನ್ನಾಗಿ ತೋರಿಸಿ. ಏಕೆ ಈಗ ಅಡಗಿಸುತ್ತಿದ್ದೀರಿ? ನನ್ನನ್ನು ಗುಂಡು ಹಾರಿಸಿ ಕೊಲ್ಲುತ್ತೀರಾ?ಎಂದು ಸವಾಲು ಕೂಡ ಹಾಕಿರುವುದು ಕಾಣಬಹುದು. ಈ ಘನೆಯ ವಿಡಿಯೋ ವೈರಲ್ ಆದ ಕೂಡಲೇ, ಬಳಕೆದಾರರು ದೆಹಲಿ ಪೊಲೀಸರಿಗೆ ಟ್ಯಾಗ್ ಮಾಡಿ ತಕ್ಷಣವೇ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ:Viral News: ಧಾರ್ಮಿಕ ಸಾಮರಸ್ಯ ಎಂದರೆ ಇದೇನೆ; ಮುಸ್ಲಿಂ ಕುಟುಂಬದಿಂದ ಹಿಂದೂ ದೇವಸ್ಥಾನಕ್ಕೆ ಭೂಮಿ ದಾನ

ಈ ಬಗ್ಗೆ ನೆಟ್ಟಿಗರು ಕೂಡ ಕಿಡಿಕಾರಿದ್ದು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬ ಬಳಕೆದಾರರು ಇಲ್ಲಿ ತಪ್ಪು ಸಂಪೂರ್ಣವಾಗಿ ಪ್ರಯಾಣಿಕರದ್ದೇ. ಒಂದೇ ಬಾರಿಗೆ ಎರಡು ಕ್ಯಾಬ್ ಏಕೆ ಬುಕ್ ಮಾಡುವುದು? ಇದು ಅನಗತ್ಯ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ''ಸಾರ್ವಜನಿಕ ಸ್ಥಳದಲ್ಲಿ ಹೀಗೆ ಪಿಸ್ತೂಲ್ ತೆಗೆಯುವುದು ಗಂಭೀರ ಅಪರಾಧ. ಪೊಲೀಸರು ಕಠಿಣ ಕ್ರಮ ಕೈಗೊಳ್ಳ ಬೇಕು" ಎಂದು ಬರೆದುಕೊಂಡಿದ್ದಾರೆ. ಪೊಲೀಸರು ಈ ಸಂಬಂಧ ಎಫ್‌ಐಆರ್ (FIR) ದಾಖಲಿಸಿದ್ದಾರೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ.ಆದರೆ ಪ್ರಯಾಣಿಕನ ವಿರುದ್ಧ ಕಠಿಣ ದಂಡ ವಿಧಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.