ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ವಾಟರ್ ಇಂಜಿನ್ ಮೂಲಕ‌ ಚಲಿಸುತ್ತದೆ ಈ ವಾಹನ; ವ್ಯಕ್ತಿಯ ಆವಿಷ್ಕಾರಕ್ಕೆ ನೆಟ್ಟಿಗರು ಫಿದಾ

Viral Video: ನೀರನ್ನು ಬಳಸಿಕೊಂಡು ವಾಹನ ಚಲಾಯಿಸಲು ಸಾಧ್ಯತೆ ಇದೆ ಎಂದು ಮಧ್ಯಪ್ರದೇಶದ ಮೆಕ್ಯಾನಿಕ್ ಒಬ್ಬರು ಸಂಶೋಧಿಸಿದ್ದಾರೆ. ಮೆಕ್ಯಾನಿಕ್ ಮೊಹಮ್ಮದ್ ರಯೀಸ್ ಮಾರ್ಕಾನಿ ಅವರು ಈ ಸಂಶೋಧನೆ ಮಾಡಿದ್ದು ಪೆಟ್ರೋಲ್, ಡಿಸೇಲ್ ಬಳಸದೆಯೂ ನೀರಿನಿಂದ ಚಲಿಸುವ ಕಾರನ್ನು ರಚಿಸುವ ಮೂಲಕ ಸುದ್ದಿಯಾಗಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ..

ನೀರನ್ನು ಬಳಸಿ ವಾಹನ ಚಲಾಯಿಸುದನ್ನು ಆವಿಷ್ಕರಿಸಿದ್ದ ವ್ಯಕ್ತಿ!

ವೈರಲ್ ವಿಡಿಯೊ -

Profile
Pushpa Kumari Nov 13, 2025 9:17 PM

ನವದೆಹಲಿ: ಇತ್ತೀಚಿನ ದಿನದಲ್ಲಿ ವಾಹನ ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅಂತೆಯೇ ವಾಹನಗಳ ಪ್ರಮಾಣ ಹೆಚ್ಚಾದಂತೆ ಅವುಗಳ ಮೇಲೆ ಹೊಸ ಹೊಸ ಆವಿಷ್ಕಾರಗಳು ಕೂಡ ನಡೆಯುತ್ತಲೇ ಇವೆ. ವಾಹನದ ಮೈಲೇಜ್ ಹೆಚ್ಚು ಮಾಡಲು, ಹೊಸ ಮಾಡೆಲ್ನಂತೆ ಕಾಣಲು ಇಂತಹ ಆವಿಷ್ಕಾರ ನಡೆದಿವೆ. ಇಂಧನಗಳ ಬದಲಿಗೆ ಇಲೆಕ್ಟ್ರಾನಿಕ್ ವೆಹಿಕಲ್ ಕೂಡ ಆವಿಷ್ಕಾರ ಆಗಿದೆ. ಆದರೆ ಇದೀಗ ನೀರಿನ್ನು ಬಳಸಿಕೊಂಡು ವಾಹನ ಚಲಾಯಿಸಲು ಸಾಧ್ಯತೆ ಇದೆ ಎಂದು ಮಧ್ಯಪ್ರದೇಶದ (Madhya Pradesh) ಮೆಕ್ಯಾನಿಕ್ ಒಬ್ಬರು ಸಂಶೋಧಿಸಿದ್ದಾರೆ. ಮೆಕ್ಯಾನಿಕ್ ಮೊಹಮ್ಮದ್ ರಯೀಸ್ ಮಾರ್ಕಾನಿ (Raees Markani) ಅವರು ಈ ಸಂಶೋಧನೆ ಮಾಡಿದ್ದು ಪೆಟ್ರೋಲ್, ಡಿಸೇಲ್ ಬಳಸದೆಯೂ ನೀರಿನಿಂದ ಚಲಿಸುವ ಕಾರನ್ನು ರಚಿಸುವ ಮೂಲಕ ಸುದ್ದಿಯಾಗಿದ್ದಾರೆ. ಸದ್ಯ ಈ ವಿಡಿಯೊ ವೈರಲ್ (Viral Video) ಆಗಿದೆ.

ಕ್ಯಾಲ್ಸಿಯಂ ಕಾರ್ಬೈಡ್ ನೀರಿನೊಂದಿಗೆ ರಿಯ್ಯಾಕ್ಷನ್ ಆಗಿ ಅಸಿಟಲೀನ್ ಇಂಧನ ಉತ್ಪತ್ತಿ ಯಾಗುತ್ತದೆ. ಇದನ್ನೇ ಬಳಸಿ 800 ಸಿಸಿ ಸುಜುಕಿ ಕಾರಿನ ಇಂಜಿನ್ ಅನ್ನು ಅವರು ಮಾರ್ಪಡಿಸಿದ್ದಾರೆ. ಈ ಸಂಶೋಧನೆ ಮಾಡಲು ಅವರಿಗೆ ಸುಮಾರು 5 ವರ್ಷಗಳು ಬೇಕಾಗಿದೆ. ಈ ಆವಿಷ್ಕಾರಕ್ಕೆ ಪೇಟೆಂಟ್ ಅನ್ನು ಸಹ ಪಡೆದಿದ್ದಾರೆ. ಅವರ ಈ ಹೊಸ ಆವಿಷ್ಕಾರ ಪರಿಸರ ಸ್ನೇಹಿಯಾಗಿದ್ದು ಕಡಿಮೆ ವೆಚ್ಚದಲ್ಲಿ ವಾಹನ ಓಡಿಸಲು ಅನುಕೂಲಕರವಾಗಿದೆ ಎಂದು ಸಂಶೋಧನೆಯಲ್ಲಿ ತಿಳಿಸಿದ್ದರು.

ವೈರಲ್ ವಿಡಿಯೊ ಇಲ್ಲಿದೆ!

ಕೈಗಾರಿಕೆಗಳಲ್ಲಿ ವೆಲ್ಡಿಂಗ್ ಮತ್ತು ಗಣಿ ದೀಪಗಳಿಗೆ ಬಳಸುವ ಅನಿಲವನ್ನು ರಯೀಸ್ ಕಾರ್ ಎಂಜಿನ್‌ಗೆ ಗೆ ಬಳಸಲಾಗಿದೆ. ಈ ಆವಿಷ್ಕಾರ ಸಕ್ಸಸ್ ಆಗಿದೆ. ವಿಶ್ವ ಮಟ್ಟದಲ್ಲಿ ಹೊಸ ಆವಿಷ್ಕಾರಕ್ಕೆ ನೆಟ್ಟಿಗರಿಂದ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಆದರೆ ಈ ನಡುವೆ ಈ ಆವಿಷ್ಕಾರ ಮಾಡಿದ್ದ ಸಂಶೋಧಕ, ಮೆಕ್ಯಾನಿಕ್ ಮೊಹಮ್ಮದ್ ರಯೀಸ್ ಮಾರ್ಕಾನಿ ಈಗ ಎಲ್ಲಿದ್ದಾರೆ? ಅವರಿಗೆ ಏನಾ ಗಿದೆ? ಎಂಬ ಕುರಿತು ಸೋಶಿಯಲ್ ಮಿಡಿಯಾದಲ್ಲಿ ಹೊಸ ಚರ್ಚೆ ಏರ್ಪಟ್ಟಿದೆ.

ಇದನ್ನು ಓದಿ:Viral Video: ಚೀನಾದಲ್ಲಿ ಹೊಸದಾಗಿ ನಿರ್ಮಿಸಿದ ಹಾಂಗ್ಕಿ ಸೇತುವೆ ಕುಸಿತ; ಇಲ್ಲಿದೆ ಎದೆ ನಡುಗಿಸುವ ವಿಡಿಯೊ

ಮಧ್ಯಪ್ರದೇಶದ ಮೊಹಮ್ಮದ್ ರಯೀಸ್ ಮಾರ್ಕಾನಿ ಎಂಜಿನಿ ಯರಿಂಗ್ ಪದವಿ ಪಡೆಯದೇ ಮೆಕ್ಯಾನಿಕ್ ವೃತ್ತಿ ಮಾಡುತ್ತಿದ್ದರು. ಇವರು ತಮ್ಮ ಸಂಶೋಧನೆಯಿಂದ ಮಾರುತಿ 800 ಗಾಡಿ ಯನ್ನು ಮಾರ್ಪಡಿಸಿದ್ದಾರೆ. ಬಳಿಕ ಅವರ ಬಗ್ಗೆ ಅನೇಕ ಟಿವಿ ವಾಹಿನಿ ಯಲ್ಲಿ ವಿಶೇಷ ಸಂದರ್ಶನ ಕಾರ್ಯಕ್ರಮ ಪ್ರಸಾರವಾಗಿದೆ. 2016 ರಲ್ಲಿ ಒಎಂಜಿ ಯೇ ಮೇರಾ ಇಂಡಿಯಾದಲ್ಲಿ ಕೂಡ ಅವರು ಕಾಣಿಸಿಕೊಂಡು ವಿಶ್ವದಾದ್ಯಂತ ಫೇಮಸ್ ಆಗಿದ್ದರು. ಬಳಿಕ ಅವರಿಗೆ ಕೆಲವು ಚೀನಾದ ಕಂಪೆನಿಗಳು ತಮ್ಮ ಕಂಪೆನಿ ಪರವಾಗಿ ಕೆಲಸ ಮಾಡುವ ಆಫರ್ ನೀಡಿತ್ತು.ಆದರೆ ಮೊಹಮ್ಮದ್ ರಯೀಸ್ ಅವರು ಇದಕ್ಕೆ ಒಪ್ಪಲಿಲ್ಲ. ಹಾಗಿದ್ದರೂ ನಮ್ಮ ದೇಶದಲ್ಲಿ ಇವರ ಪ್ರತಿಭೆಗೆ ಸೂಕ್ತ ಮಣ್ಣನೆ ಸಿಕ್ಕಿರ ಲಿಲ್ಲ. ಇಂತಹ ಅದ್ಭುತ ಆವಿಷ್ಕಾರ ಮಾಡಿದ್ದರೂ ಕೂಡ ಅವರಿಗೆ ಹೂಡಿಕೆದಾರರಿಂದ ಅಥವಾ ಸರ್ಕಾರದಿಂದ ಯಾವುದೇ ಬೆಂಬಲ ಸಿಗಲಿಲ್ಲ ಎಂದು ಅವರ ಆಪ್ತರೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದರು

ಸದ್ಯ ಇವರು ನಾಪತ್ತೆಯಾದ ಬಗ್ಗೆಯೂ ಚರ್ಚೆ ಆಗಿದ್ದು ಸೋಶಿಯಲ್ ಮಿಡಿಯಾದಲ್ಲಿ ಈ ಪೋಸ್ಟ್ ಗೆ ನಾನಾ ತರನಾಗಿ ಕಾಮೆಂಟ್ ಹಾಕಲಾಗುತ್ತಿದೆ. ಈ ಆವಿಷ್ಕಾರ ಅಷ್ಟು ಪ್ರಯೋಜನ ವಿಲ್ಲ, ಇದ ರಿಂದ ಮೈಲೇಜ್ ಕೂಡ ತುಂಬಾ ಕಡಿಮೆ... ಅದಕ್ಕಾಗಿಯೇ ಅದನ್ನು ಆತ ಕೈಬಿಟ್ಟು ದೇಶಾಂತರ ಹೋಗಿರಬಹುದು ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಹಾಕಿದ್ದಾರೆ. ನಮ್ಮ ದೇಶದಲ್ಲಿ ಸೂಕ್ತ ಅವಕಾಶ ಕೊಟ್ಟಿಲ್ಲ ಅದಕ್ಕಾಗಿ ಬೇರೆ ಕಡೆ ಹೋಗಿರಬಹುದು. ನಮ್ಮ ದೇಶದ ಪ್ರತಿಭೆಗೆ ಬೆಲೆ ನೀಡಬೇಕಿದೆ ಎಂದು ಬಳಕೆದಾರರೊಬ್ಬರು ಕಾಮೆಂಟ್ ಹಾಕಿದ್ದಾರೆ.