ನವದೆಹಲಿ,ಸೆ.17: ಸಾಮಾನ್ಯವಾಗಿ ಭಾರತದ ಪ್ರವಾಸಿ ತಾಣ, ಆತಿಥ್ಯ,ಸಂಸ್ಕೃತಿ ಕಲೆಗೆ ಫಿದಾ ಆದ ಅನೇಕ ವಿದೇಶಿಗರು ಇದ್ದಾರೆ. ಇದೀಗ ಭಾರತದ ಆಧುನಿಕ ಮೂಲ ಸೌಕರ್ಯ ಹಾಗೂ ಮೆಟ್ರೊದ ಸ್ವಚ್ಚತೆ ಕಂಡು ವಿದೇಶಿ ಪ್ರವಾಸಿಯೊಬ್ಬರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಇಲ್ಲಿನ ಸಾರಿಗೆ ವ್ಯವಸ್ಥೆಯು ಜಪಾನ್, ದಕ್ಷಿಣ ಕೊರಿಯದಂತ ಸ್ಥಳಗಳನ್ನು ನೆನಪಿಸುತ್ತದೆ. ಅಷ್ಟೇ ಅಲ್ಲದೆ ಕೇವಲ 56 ರೂಪಾಯಿಗೆ ದೆಹಲಿ ಏರ್‌ಪೋರ್ಟ್‌ನಿಂದ ನಗರದ ಕೇಂದ್ರ ಭಾಗಕ್ಕೆ ಸುಲಭವಾಗಿ ಪ್ರಯಾಣಿಸಲು ಸಾಧ್ಯ ವಾಗಿರುವುದಕ್ಕೆ ಖುಷಿ ವ್ಯಕ್ತ (Viral News) ಪಡಿಸಿದ್ದಾರೆ.
ಮೆಟ್ರೋ ಸೌಲಭ್ಯಗಳ ಬಗ್ಗೆ ಈಗಾಗಲೇ ಹಲವು ವಿದೇಶಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೀಗ ದೆಹಲಿ ವಿಮಾನ ನಿಲ್ದಾಣಕ್ಕೆ ಇಳಿದ ವಿದೇಶಿ ಯೂಟ್ಯೂಬರ್ ಇಲ್ಲಿನ ಮೆಟ್ರೋದ ಸ್ವಚ್ಛತೆ ಮತ್ತು ಆಧುನಿಕ ಮೂಲಸೌಕರ್ಯಗಳನ್ನು ಕಂಡು ಸಂಪೂರ್ಣವಾಗಿ ಆಶ್ಚರ್ಯವ್ಯಕ್ತ ಪಡಿಸಿದ್ದಾರೆ.
ವಿಡಿಯೋ ನೋಡಿ:
ಸ್ಟೆಫ್ ಎಂಬ ವಿದೇಶಿ ಟ್ರಾವೆಲ್ ವ್ಲಾಗರ್, ದೆಹಲಿ ಏರ್ ಪೋರ್ಟ್‌ನಿಂದ ಪ್ರಯಾಣಿಸಲು ಮೆಟ್ರೋ ಹತ್ತಿದ್ದರು.ಆದರೆ ಇಲ್ಲಿನ ಸ್ವಚ್ಛ, ಆಧುನಿಕ ಸೌಲಭ್ಯ ಕಂಡು ಫುಲ್ ಫಿದಾ ಆಗಿದ್ದಾರೆ. ಈಗ ತಾನು ಭಾರತದಲ್ಲಿದ್ದೇನೆ ಎಂದು ಹೇಳಲು ತನಗೆ ನಂಬಲು ಸಾಧ್ಯವಿಲ್ಲ. ಎಲ್ಲವೂ ಸ್ವಚ್ಛವಾಗಿದ್ದು ಇದು ಹೊಸ ಮೆಟ್ರೋದಂತಿದೆ. ದಕ್ಷಿಣ ಕೊರಿಯಾ ಅಥವಾ ಜಪಾನ್‌ನಂತೆಯೇ ಅನುಭವ ನೀಡುತ್ತಿದೆ ಎಂದು ಸಂತಸ ವ್ಯಕ್ತ ಪಡಿಸಿದ್ದಾರೆ.
Viral Video: ಮರೆಯಾದ ಮಾನವೀಯತೆ; ನೇಪಾಳ ಪ್ರವಾಹದಲ್ಲಿ ಮೃತಪಟ್ಟ ಮಹಿಳೆಯ ಚಿನ್ನದ ಓಲೆ ಕದ್ದ ಕಿಡೀಗೆಡಿಗಳು!
ಮೆಟ್ರೋ ನಿಲ್ದಾಣದ ಬಣ್ಣ ಹಾಗೂ ನೈರ್ಮಲ್ಯವು ಜಪಾನ್ ವಿಮಾನ ನಿಲ್ದಾಣದ ಮಾದರಿ ಯಂತಿದೆ ಎಂದು ಅವರು ಹೊಗಳಿದ್ದಾರೆ. ಕೇವಲ 56 ರೂಪಾಯಿಗೆ ದೆಹಲಿ ಏರ್ ಪೋರ್ಟ್‌ನಿಂದ ನಗರದ ಕೇಂದ್ರ ಭಾಗಕ್ಕೆ ಸುಲಭವಾಗಿ ಪ್ರಯಾಣಿಸಲು ಸಾಧ್ಯವಾಗಿದೆ. ಪ್ರಮುಖವಾಗಿ ಎಸಿ ಕೋಚ್, ಆಸನ ವ್ಯವಸ್ಥೆ ಹಾಗೂ ಶೌಚಾಲಯಗಳ ನಿರ್ವಹಣೆಗೆ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಪ್ರಯಾಣದ ವೇಳೆ ನಿಮಗೆ ಯಾವ ರೀತಿಯಲ್ಲೂ ಒಬ್ಬಂಟಿ ಅನಿಸುವುದಿಲ್ಲ. ಸಹ ಪ್ರಯಾಣಿಕರು ಹಾಸ್ಯ ಮಾಡುತ್ತಾ ಸೌಹಾರ್ದಯುತವಾಗಿ ಮಾತನಾಡುತ್ತಾರೆ ಎಂದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಭಾರತೀಯ ನೆಟ್ಟಿಗರು ದೆಹಲಿ ಮೆಟ್ರೋದ ಸೇವೆಗೆ ಬಹಳಷ್ಟು ಹೆಮ್ಮೆ ವ್ಯಕ್ತಪಡಿಸಿದ್ದಾರೆ.