ಲಖನೌ, ಜ. 26: ಕ್ಷುಲ್ಲಕ ಕಾರಣಕ್ಕೆ ಆರಂಭವಾದ ವಾಗ್ವಾದವೊಂದು ದೊಡ್ಡ ರಾದ್ಧಾಂತಕ್ಕೆ ಎಡೆ ಮಾಡಿಕೊಟ್ಟ ಘಟನೆ ನಡೆದಿದೆ. ಆಹಾರ ವಿತರಣಾ ಏಜೆಂಟ್ ಮತ್ತು ಭದ್ರತಾ ಸಿಬ್ಬಂದಿ ನಡುವಿನ ವಾಗ್ವಾದ ಉಂಟಾಗಿದ್ದು, ಡೆಲಿವರಿ ಬಾಯ್ ತಪ್ಪಾಗಿ ಬೇರೆ ಮನೆಯೊಂದರ ಕಾಲಿಂಗ್ ಬೆಲ್ ಒತ್ತಿದ್ದೇ ಈ ಎಲ್ಲ ಜಗಳಕ್ಕೆ ಕಾರಣವಾಗಿದೆ. ಈ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಬೀಟಾ-2 ಪ್ರದೇಶದ ಎಕ್ಸ್‌ಪ್ರೆಸ್ ಪಾರ್ಕ್ ವ್ಯೂ ಸೊಸೈಟಿಯಲ್ಲಿ ನಡೆದಿದೆ.
ಗ್ರೇಟರ್ ನೋಯ್ಡಾದ ನಿಂಬಸ್ ಸೊಸೈಟಿಯಲ್ಲಿ ಜನವರಿ 24ರ ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ರೋಹನ್ ಕುಮಾರ್ (20) ಎಂಬ ವಿತರಣಾ ಏಜೆಂಟ್ ಆಹಾರವನ್ನು ತಲುಪಿಸಲು ತಪ್ಪಾಗಿ ಮನೆಯೊಂದರ ಡೋರ್‌ಬೆಲ್ ಒತ್ತಿದ್ದ. ಇದರಿಂದ ಕೋಪಗೊಂಡ ಮನೆಯ ಮಾಲಕ ಮತ್ತು ರೋಹನ್ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಮಧ್ಯ ಪ್ರವೇಶಿಸಿದ ಸೊಸೈಟಿಯ ಸೆಕ್ಯುರಿಟಿ ಗಾರ್ಡ್ ಕೂಡ ರೋಹನ್ ಜತೆ ಜಗಳಕ್ಕಿಳಿದಿದ್ದಾನೆ.
ವಿಡಿಯೊ ನೋಡಿ:
ರಾತ್ರಿ ಸುಮಾರು 10 ಗಂಟೆಯ ಸಮಯದಲ್ಲಿ ರೋಹನ್ ಕುಮಾರ್ ಎಂಬ ಡೆಲಿವರಿ ಏಜೆಂಟ್ ಆಹಾರ ವಿತರಿಸಲು ಹೋದಾಗ ಆಕಸ್ಮಿಕವಾಗಿ ತಪ್ಪಾಗಿ ಬೇರೆ ಮನೆಯ ಡೋರ್ ಬೆಲ್ ಒತ್ತಿದ್ದಾನೆ. ಇದೇ ಕಾರಣಕ್ಕೆ ತೀವ್ರ ವಾಗ್ವಾದ ನಡೆದಿದೆ. ಜಗಳ ತಾರಕಕ್ಕೇರಿದಾಗ ರೋಹನ್ ತನ್ನ ಸ್ನೇಹಿತರಿಗೆ ಕರೆ ಮಾಡಿದ್ದಾನೆ. ಕೆಲವೇ ನಿಮಿಷಗಳಲ್ಲಿ ಎರಡು ಬೈಕ್‌ಗಳಲ್ಲಿ ಬಂದ 4-5 ಯುವಕರು ಸೆಕ್ಯುರಿಟಿ ಗಾರ್ಡ್‌ಗಳ ಮೇಲೆ ದಾಳಿ ಮಾಡಲು ಮುಂದಾಗಿದ್ದಾರೆ.
ಮಧ್ಯಾಹ್ನದ ಬಿಸಿಯೂಟದಲ್ಲಿ ಸತ್ತ ಕಪ್ಪೆ ಪತ್ತೆ; ಶಾಲೆ ವಿರುದ್ಧ ತನಿಖೆಗೆ ಆದೇಶ
ಜಗಳ ಮಿತಿಮೀರಿ ಎರಡು ಕಡೆಯವರು ಕೋಲು ಮತ್ತು ಕಬ್ಬಿಣದ ರಾಡ್‌ಗಳಿಂದ ಹೊಡೆದಾಡಿದ್ದಾರೆ. ಘಟನೆಯ ವೈರಲ್ ದೃಶ್ಯಗಳಲ್ಲಿ ಭದ್ರತಾ ಸಿಬ್ಬಂದಿ ಮತ್ತು ವಿತರಣಾ ಏಜೆಂಟ್‌ಗಳು ಪರಸ್ಪರ ಕೋಲುಗಳು ಮತ್ತು ರಾಡ್‌ಗಳಿಂದ ಹೊಡೆದಾಡಿಕೊಳ್ಳುತ್ತಿರುವುದು ಕಂಡು ಬಂದಿದೆ. ಕೂಡಲೇ ಇದನ್ನು ತಿಳಿದ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿದ್ದರು.
ಆದರೆ ಈಗಾಗಲೇ ಆರೋಪಿಗಳು ತಮ್ಮ ಬೈಕ್‌ಗಳನ್ನು ಬಿಟ್ಟು ಪರಾರಿಯಾಗಿದ್ದರು. ತನಿಖೆ ಚುರುಕುಗೊಳಿಸಿದ ಪೊಲೀಸರು ಈಗ ನಾಲ್ವರನ್ನು ಬಂಧಿಸಿದ್ದಾರೆ. ವಿಡಿಯೊ ಸಾಕ್ಷ್ಯ, ಸಿಸಿಟಿವಿ ದೃಶ್ಯಾವಳಿ ಮತ್ತು ಸಬ್ ಇನ್ಸ್‌ಪೆಕ್ಟರ್ ಒಬ್ಬರ ದೂರಿನ ಆಧಾರದ ಮೇಲೆ, ಪೊಲೀಸರು ಭಾರತೀಯ ನ್ಯಾಯ ಸಂಹಿತಾ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ