ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಪ್ರಾಪ್ತ ಬಾಲಕಿ ಇರುವುದನ್ನು ಗಮನಿಸಿ ಮನೆ ಒಳಗೆ ನುಗ್ಗಲು ಯತ್ನಿಸಿದ ಡೆಲಿವರಿ ಬಾಯ್; ತಾಯಿಯ ಸಮಯಪ್ರಜ್ಞೆಯಿಂದ ತಪ್ಪಿತು ಭಾರಿ ದುರಂತ

Viral Video: ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಪಾರ್ಸೆಲ್ ನೀಡಲು ಬಂದ ಡೆಲಿವರಿ ಬಾಯ್ ಶೌಚಾಲಯ ಬಳಸುವ ನೆಪದಲ್ಲಿ ಮಹಿಳೆಯೊಬ್ಬರ ಮನೆಗೆ ನುಗ್ಗಿ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿತ್ತು. ಇದೀಗ ಅಪ್ರಾಪ್ತ ಬಾಲಕಿಗೆ ಆರ್ಡರ್ ನೀಡುವ ನೆಪದಲ್ಲಿ ಮನೆ ಒಳಗೆ ನುಗ್ಗಲು ಯತ್ನಿಸಿದ ಡೆಲಿವರಿ ಬಾಯ್‌ಯ ವಿಡಿಯೊವೊಂದು ವೈರಲ್ ಆಗಿದೆ. ಕೂಡಲೇ ಎಚ್ಚೆತ್ತುಕೊಂಡ ಬಾಲಕಿಯ ತಾಯಿ ಆತನಿಗೆ ತಕ್ಕ ಪಾಠ ಕಲಿಸಿದ್ದಾಳೆ.

ದೆಹಲಿಯಲ್ಲಿ ಪಾರ್ಸೆಲ್ ನೆಪದಲ್ಲಿ ಮನೆಯೊಳಗೆ ನುಗ್ಗಲು ಯತ್ನಿಸಿದ ಡೆಲಿವರಿ ಬಾಯ್

ನವದೆಹಲಿ, ಜು. 20: ಒಂಟಿ ಮಹಿಳೆಯರು ಮನೆಯೊಳಗೂ ಸುರಕ್ಷಿತರಲ್ಲವೆ? ಇಂತಹ ಪ್ರಶ್ನೆ ಪದೇ ಪದೆ ಮೂಡುವಂತಹ ಅನೇಕ ಘಟನೆಗಳು ಇತ್ತೀಚೆಗೆ ಆಗಾಗ ನಡೆಯುತ್ತಿವೆ‌. ಕೆಲವು ದಿನಗಳ ಹಿಂದೆಯಷ್ಟೇ ಬೆಂಗಳೂರಿನಲ್ಲಿ ಪಾರ್ಸೆಲ್ ನೀಡಲು ಬಂದ ಡೆಲಿವರಿ ಬಾಯ್ ಶೌಚಾಲಯ ಬಳಸುವ ನೆಪದಲ್ಲಿ ಮಹಿಳೆಯೊಬ್ಬರ ಮನೆಗೆ ನುಗ್ಗಿ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿತ್ತು. ಇದೀಗ ಆರ್ಡರ್ ನೀಡುವ ನೆಪದಲ್ಲಿ ಅಪ್ರಾಪ್ತ ಬಾಲಕಿಗೆ ಮನೆ ಒಳಗೆ ನುಗ್ಗಲು ಯತ್ನಿಸಿದ ಡೆಲಿವರಿ ಬಾಯ್‌ ವಿಡಿಯೊವೊಂದು ವೈರಲ್ (Viral Video) ಆಗಿದೆ. ಕೂಡಲೇ ಎಚ್ಚೆತ್ತುಕೊಂಡ ಬಾಲಕಿಯ ತಾಯಿ ಆತನಿಗೆ ತಕ್ಕ ಪಾಠ ಕಲಿಸಿದ್ದಾಳೆ.

ಆರ್ಡರ್ ತಲುಪಿಸಲೆಂದು ಆಗಮಿಸಿದ ಡೆಲಿವರಿ ಬಾಯ್ ಬಲವಂತದಿಂದ ಅಪ್ರಾಪ್ತ ಗ್ರಾಹಕಿಯ ಮನೆ ಒಳ ಪ್ರವೇಶಿಸಲು ಪ್ರಯತ್ನಿಸುತ್ತಿರುವ ಸಿಸಿಟಿವಿ ಕ್ಲಿಪ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಮನೆಯಲ್ಲಿರುವ ಮಹಿಳೆಯರ ಸುರಕ್ಷತೆ ಮತ್ತು ಡೆಲಿವರಿ ಸಮಯದಲ್ಲಿ ಜಾಗರೂಕರಾಗಿರಬೇಕಾದ ಅಗತ್ಯವನ್ನು ಮತ್ತೊಮ್ಮೆ ಸಾರಿ ಹೇಳಿದೆ.

ವಿಡಿಯೊ ನೋಡಿ:



ಈ ಘಟನೆ ಜುಲೈ 16ರ ರಾತ್ರಿ 8:30ರ ಸುಮಾರಿಗೆ ನಡೆದಿದೆ. ಡೆಲಿವರಿ ಎಕ್ಸಿಕ್ಯೂಟಿವ್ ಒಬ್ಬ ಗ್ರಾಹಕರ ಮನೆಗೆ ಆರ್ಡರ್ ತಲುಪಿಸಲು ಬಂದಿದ್ದಾನೆ. ಬಾಗಿಲು ತೆರೆಯಲು ಪುಟ್ಟ ಬಾಲಕಿ ಬಂದಿದ್ದು, ಪಾರ್ಸೆಲ್ ನೀಡಿದ್ದಾನೆ‌. ಆದರೆ ಡೆಲಿವರಿ ನೀಡಿದ್ದಕ್ಕೆ ಸಾಕ್ಷಿಗಾಗಿ ಸರಿಯಾದ ಫೋಟೊ ತೆಗೆದುಕೊಳ್ಳಲು ಆಗುತ್ತಿಲ್ಲ ಎಂದು ನೆಪ ಹೇಳಿ ಮನೆಯಲ್ಲಿ ಆಕೆ ಒಬ್ಬಂಟಿಯಾಗಿದ್ದಾಳೆಂದು ಭಾವಿಸಿ ಒಳಗೆ ಹೋಗಲು ಪ್ರಯತ್ನಿಸಿದ್ದಾನೆ.

ರೈಲು ನಿಲ್ದಾಣದಲ್ಲಿ ​ಸಾರ್ವಜನಿಕವಾಗಿ ಪ್ರೇಯಸಿಯ ಕಾಲು ಹಿಡಿದು ಯುವಕನ ಹೈಡ್ರಾಮ

ಅದೇ ವೇಳೆ ಸಮಯ ಪ್ರಜ್ಞೆ ಮೆರೆದ ಬಾಲಕಿಯ ತಾಯಿ, ಆತನ ವರ್ತನೆಯನ್ನು ಖಂಡಿಸಿ ಮನೆಯಿಂದ ಹೊರಗೆ ನಿಲ್ಲುವಂತೆ ಗದರಿಸಿದ್ದಾರೆ. ತಾಯಿಯ ಎಂಟ್ರಿಯಿಂದ ತಬ್ಬಿಬ್ಬಾದ ಡೆಲಿವರಿ ಬಾಯ್ ಇದಕ್ಕೆ ಸಮಜಾಯಿಷಿ ನೀಡಲು ಯತ್ನಿಸಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಸದ್ಯ ತಾಯಿಯ ತ್ವರಿತ ಪ್ರತಿಕ್ರಿಯೆಯನ್ನು ಸೋಷಿಯಲ್ ಮೀಡಿಯಾ ಬಳಕೆದಾರರು ಶ್ಲಾಘಿಸಿದ್ದಾರೆ.

ಈ ಬಗ್ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ʼʼಬಾಗಿಲ ಬಳಿಯೇ ಡೆಲಿವರಿಯನ್ನು ನಿಲ್ಲಿಸುವುದು ಉತ್ತಮʼʼ ಎಂದು ಒಬ್ಬರು ಹೇಳಿದ್ದಾರೆ. ಮತ್ತೊಬ್ಬರು, ʼʼಈತನ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳಿʼʼ ಎಂದು ಆಗ್ರಹಿಸಿದ್ದಾರೆ.