Viral Video: "ಭಾರತದಲ್ಲಿ ಮಾತ್ರ ಇದು ಸಾಧ್ಯ"; ಮನೆ ಬಾಗಿಲಿನ ಉಚಿತ ರಕ್ತ ಪರೀಕ್ಷೆ ಸೇವೆಗೆ ಅಮೆರಿಕದ ಮಹಿಳೆ ಮೆಚ್ಚುಗೆ
Viral News: ಭಾರತೀಯರಿಗೆ ಸಾಮಾನ್ಯ ಎಂದೆನಿಸುವ ಆರೋಗ್ಯ ಸೇವೆಯನ್ನು ಅಮೆರಿಕದ ಮಹಿಳೆಯೊಬ್ಬರು ಕೊಂಡಾಡಿದ್ದಾರೆ. ಭಾರತದಲ್ಲಿ ಸಿಗುವ ಇಂತಹ ಸೌಲಭ್ಯ ಕಂಡು ತಾವು ನಿಜಕ್ಕೂ ಆಶ್ಚರ್ಯಗೊಂಡಿದ್ದು, ಅಮೆರಿಕಕ್ಕೆ ಹೋಲಿಸಿದರೆ ಕಡಿಮೆ ಖರ್ಚಿನಲ್ಲಿ ಆರೋಗ್ಯ ಸೇವೆ ಪಡೆಯಬಹುದು ಎಂದು ವಿಡಿಯೊದಲ್ಲಿ ತಿಳಿಸಿದ್ದಾರೆ.
ಭಾರತದಲ್ಲಿ ಸಿಗುವ ಉಚಿತ ಆರೋಗ್ಯ ಸೌಲಭ್ಯ ವಿವರಿಸಿದ ಅಮೆರಿಕದ ಮಹಿಳೆ -
ಮುಂಬೈ, ಜು. 16: ವಿದೇಶಿ ಪ್ರವಾಸಿಗರು ಭಾರತದ ಸಂಸ್ಕೃತಿ ಹಾಗೂ ಇಲ್ಲಿ ಲಭ್ಯವಿರುವ ಸೌಲಭ್ಯಗಳಿಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಲೇ ಇರುತ್ತಾರೆ. ಇದೀಗ ಭಾರತೀಯರಿಗೆ ಸಾಮಾನ್ಯ ಎಂದೆನಿಸುವ ಆರೋಗ್ಯ ಸೇವೆಯನ್ನು ಅಮೆರಿಕದ ಮಹಿಳೆಯೊಬ್ಬರು ಕೊಂಡಾಡಿದ್ದಾರೆ. ಭಾರತದಲ್ಲಿ ಸಿಗುವ ಇಂತಹ ಸೌಲಭ್ಯ ತಿಳಿದು ನಿಜಕ್ಕೂ ತಾನು ಅಚ್ಚರಿಗೊಂಡಿದ್ದಾಗಿಯೂ ಅಮೆರಿಕಕ್ಕೆ ಹೋಲಿಸಿದರೆ ಕಡಿಮೆ ಖರ್ಚಿನಲ್ಲಿ ಆರೋಗ್ಯ ಸೇವೆ ಪಡೆಯಬಹುದು ಎಂದು ವಿಡಿಯೊದಲ್ಲಿ (Viral News) ತಿಳಿಸಿದ್ದಾರೆ.
ಮಹಾರಾಷ್ಟ್ರದ ಮುಂಬೈಯಲ್ಲಿ ವಾಸಿಸುತ್ತಿರುವ ಅಮೆರಿಕ ಮೂಲದ ಕಂಟೆಂಟ್ ಕ್ರಿಯೇಟರ್ ಲಿಜ್ ತಮ್ಮ ಮನೆಯಿಂದಲೇ ರಕ್ತ ಪರೀಕ್ಷೆಯನ್ನು ಮಾಡಿಸಿಕೊಂಡ ಅನುಭವವನ್ನು ಹಂಚಿಕೊಂಡಿದ್ದಾರೆ. ಮನೆ ಬಾಗಿಲಿನ ಈ ಸೇವೆ ಹೆಚ್ಚುವರಿ ಹಣ ಪಾವತಿಸಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿ, ಇಲ್ಲಿನ ಸೌಲಭ್ಯ ಕೊಂಡಾಡಿದ್ದಾರೆ.
ವಿಡಿಯೊ ನೋಡಿ:
ಲಿಜ್ ಅವರಿಗೆ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕಾಗಿತ್ತು. ಹೀಗಾಗಿ ಅವರು ಮುಂಬೈಯ ಆಸ್ಪತ್ರೆಯೊಂದಕ್ಕೆ ಕಾಲ್ ಮಾಡಿ ವಿಚಾರಿಸಿದ್ದರು. ಇದಕ್ಕಾಗಿ ಭೇಟಿ ನೀಡಿ ಸರದಿಗಾಗಿ ಕಾಯಬೇಕು ಎಂದು ಅವರು ಭಾವಿಸಿದ್ದರು. ಆದರೆ ಆರೋಗ್ಯ ಕಾರ್ಯಕರ್ತೆಯೊಬ್ಬರು ರಕ್ತ ಮಾದರಿಯನ್ನು ಸಂಗ್ರಹಿಸಲು ಮನೆಗೆ ಬರುತ್ತಾರೆ ಎಂದು ತಿಳಿಸಿದಾಗ ಅಚ್ಚರಿಗೆ ಒಳಗಾದರು.
ಹಿಂದೂ ವಿದ್ಯಾರ್ಥಿಗೆ ಇಸ್ಲಾಂ ಧರ್ಮದ ಕಲ್ಮಾ ಕಲಿಯಲು ಹೋಮ್‌ವರ್ಕ್ ಕೊಟ್ಟ ಶಿಕ್ಷಕಿ
"ಭಾರತ, ಇದು ನಿಜಕ್ಕೂ ನಂಬಲಾಗದು. ನಾನು ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕಾಗಿತ್ತು. ಆಸ್ಪತ್ರೆಯಿಂದ ಸಿಬ್ಬಂದಿಯೊಬ್ಬರು ರಕ್ತದ ಮಾದರಿಯನ್ನು ಸಂಗ್ರಹಿಸಲು ನನ್ನ ಅಪಾರ್ಟ್‌ಮೆಂಟ್‌ಗೆ ಬಂದರು. ಇದಕ್ಕಾಗಿ ಯಾವುದೇ ಹೆಚ್ಚುವರಿ ಶುಲ್ಕವನ್ನು ಅವರು ಪಡೆದಿಲ್ಲ. ಆಸ್ಪತ್ರೆಗೆ ಹೋಗಿ ಟೆಸ್ಟ್ ಮಾಡಿಸಿದರೆ ಖರ್ಚು ಆಗುವಷ್ಟೇ ಇಲ್ಲೂ ಆಗಿದೆʼʼ ಎಂದು ತಿಳಿಸಿದ್ದಾರೆ.
“ನಾನು ಇದನ್ನು ಭಾರತದಲ್ಲಿ ಮಾತ್ರ ನೋಡಿದ್ದೇನೆ, ಬೇರೆಲ್ಲಿಯೂ ಇಂತಹ ಸೌಲಭ್ಯ ಇಲ್ಲ. ಆಸ್ಪತ್ರೆಗೆ ಹೋಗುವುದು, ಕಾಯುವುದು, ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳುವುದು, ವೈದ್ಯರಿಗಾಗಿ ಕಾಯುವುದಕ್ಕಿಂತಲೂ ಇದು ತುಂಬಾ ವೇಗದಲ್ಲಿ ನಡೆಯುತ್ತದೆ. ಇಲ್ಲಿ ನಾನು ಮನೆಯಲ್ಲಿ ಆರಾಮವಾಗಿ ಕುಳಿತಿದ್ದೆ, ಕೇವಲ 2 ನಿಮಿಷಗಳಲ್ಲಿ ಕೆಲಸ ಮುಗಿಯಿತು, ನಿಜಕ್ಕೂ ಉತ್ತಮ ಸೌಲಭ್ಯʼʼ ಎಂದು ಹೇಳಿದ್ದಾರೆ.
ಈ ವಿಡಿಯೊ ಆನ್‌ಲೈನ್‌ನಲ್ಲಿ ಗಮನ ಸೆಳೆದಿದ್ದು ಅನೇಕರು ಇದು ಭಾರತದಲ್ಲಿ ಸಾಮಾನ್ಯ ಆರೋಗ್ಯ ಸೇವೆ ಎಂದು ಗಮನ ಸೆಳೆದಿದ್ದಾರೆ. ಒಬ್ಬರು "ಯುರೋಪ್ ಅಥವಾ ಅಮೆರಿಕದಲ್ಲಿ ಇರುವವರಿಗೆ ಗೊತ್ತು ಕಷ್ಟ. ಅಲ್ಲಿ ವೈದ್ಯರನ್ನು ಭೇಟಿಯಾಗುವುದೇ ಕಷ್ಟದ ಕೆಲಸ'' ಮಎಂದು ಕಮೆಂಟ್ ಮಾಡಿದ್ದಾರೆ.