ನವದೆಹಲಿ, ಮಾ.27: ಧುರಂಧರ್: ದಿ ರಿವೆಂಜ್' (Dhurandhar) ಸಿನಿಮಾದ ಕ್ರೇಜ್ ಜೋರಾಗಿದೆ. ಇದರ ಡೈಲಾಗ್ ಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟ್ರೆಡಿಂಗ್ ನಲ್ಲಿದೆ. ಟಾಪ್ ಬ್ರ್ಯಾಂಡ್ ಗಳು, ಸರ್ಕಾರಿ ಸೇವೆಗಳು ಇದರ ಡೈಲಾಗ್ ಅನ್ನು ಕೂಡ ಬಳಸಿಕೊಂಡಿದೆ. ಈ ನಡುವೆ ರೆಸ್ಟೋರೆಂಟ್ ವೊಂದು 'ಧುರಂಧರ್ 2' ಎಂಬ ಹೆಸರಿನ ಸಸ್ಯಾಹಾರಿ ಥಾಲಿಯನ್ನು ಪರಿಚಯಿಸಿದೆ.
ಇತ್ತೀಚೆಗೆ ವಿಭಿನ್ನ ರೀತಿಯ ಆಹಾರಗಳು ಗಮನ ಸೆಳೆಯುತ್ತಿರುತ್ತವೆ. ಇದೀಗ ದೆಹಲಿ ಮೂಲದ ರೆಸ್ಟೋರೆಂಟ್ ವಿಶೇಷ ಥಾಲಿಯೊಂದನ್ನು ಪರಿಚಯಿಸಿದೆ. ಇದೀಗ ಧುರಂಧರ್: ದಿ ರಿವೆಂಜ್‌ನ ಕ್ರೇಜ್ ಆಹಾರಕ್ಕೂ ಲಗ್ಗೆ ಇಟ್ಟಿದೆ.
ವಿಡಿಯೋ ನೋಡಿ:
ಅಂಗಿಥಿ ತಡ್ಕಾ ಎಂಬ ರೆಸ್ಟೋರೆಂಟ್ ತನ್ನ ವಿಶೇಷ 'ಧುರಂಧರ್ 2' ಸಸ್ಯಾಹಾರಿ ಥಾಲಿಯನ್ನು ಬಿಡುಗಡೆ ಮಾಡಿದೆ, ಇದು ಸುಮಾರು 1199 ಬೆಲೆಯ 35ಕ್ಕೂ ಹೆಚ್ಚು ಭಕ್ಷ್ಯಗಳನ್ನು ಒಳಗೊಂಡಿದೆ. ಬಹು ಜನರಿಗೆ ವಿನ್ಯಾಸಗೊಳಿಸಲಾದ ಈ ಬೃಹತ್ ಥಾಲಿಯನ್ನು ಅದರ ವೈವಿಧ್ಯತೆ ಮತ್ತು ರುಚಿ ಎರಡಕ್ಕೂ ಸಿದ್ದತೆ ಮಾಡಲಾಗಿದೆ
Viral Video: ರೈಲಿನಲ್ಲೇ ಮಿನಿ ಕನ್ಸರ್ಟ್: ಅಹಮದಾಬಾದ್-ಲಖನೌ ಪ್ರಯಾಣಿಕರಿಂದ ಫುಲ್ ಮಸ್ತಿ
ಇದೀಗ ಈ ಸಿನಿಮಾವು ಮಾರ್ಕೆಟಿಂಗ್ ತಂತ್ರವಾಗಿಯೂ ಎಲ್ಲರ ಗಮನ ಸೆಳೆಯುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿ ದಾಡುತ್ತಿರುವ ವೀಡಿಯೊಗಳಲ್ಲಿ, ರೆಸ್ಟೋರೆಂಟ್ ಮಾಲೀಕರು ಸ್ಪ್ರೆಡ್ ಅನ್ನು ಜೋಡಿಸಿ, ಪ್ರತಿ ಖಾದ್ಯಕ್ಕೂ ಹೆಸರಿಸಿ ಅದನ್ನು ಬೃಹತ್ ಟ್ರೇನಲ್ಲಿ ಇಡುವುದನ್ನು ತೋರಿಸಲಾಗಿದೆ. ಥಾಲಿಯು ಭಾರತೀಯ, ಇಂಡೋ-ಚೈನೀಸ್ ಮತ್ತು ತಂದೂರಿ ಐಟಂಗಳ ಮಿಶ್ರಣವನ್ನು ಇದರಲ್ಲಿ ಇಟ್ಟಿದೆ.
ಈ ಮೆನು ಫ್ರೆಂಚ್ ಫ್ರೈಸ್, ಫ್ರೈಡ್ ಮೊಮೊಸ್, ಮಸಾಲಾ ಕಾರ್ನ್, ಸ್ಪ್ರಿಂಗ್ ರೋಲ್ಸ್, ದಹಿ ಕೆ ಶೋಲೆ, ಮಂಚೂರಿಯನ್ ಮತ್ತು ನೂಡಲ್ಸ್‌ನಂತಹ ಭಕ್ಷ್ಯಗಳೊಂದಿಗೆ ಪ್ರಾರಂಭವಾಗುತ್ತದೆ. ಇದು ಪನೀರ್ ಟಿಕ್ಕಾ, ವೆಜ್ ಸೀಖ್ ಕಬಾಬ್ ಮತ್ತು ಚಾಪ್ ಐಟಂಗಳನ್ನು ಕೂಡ ಒಳಗೊಂಡಿದೆ.