ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಇರಾನ್-ಇಸ್ರೇಲ್ ಯುದ್ಧದ ಕುರಿತಾಗಿ ಮೊದಲೇ ಭವಿಷ್ಯ ನುಡಿದಿದ್ದ ಟ್ರಾವೆಲ್ ಅಸ್ಟ್ರೋಲಜರ್; ಅಂದು ಹೇಳಿದ್ದೇನು?

Israel-Iran War: ಸೋಶಿಯಲ್ ಮೀಡಿಯಾದಲ್ಲಿ ಪ್ರವಾಸಿ ಜ್ಯೋತಿಷ್ಯರೊಬ್ಬರ ಹಳೆಯ ವಿಡಿಯೊ ಭಾರಿ ವೈರಲ್ ಆಗಿದೆ. ಈ ವರ್ಷ ಭೀಕರ ಯುದ್ಧ ಉಂಟಾಗಲಿದೆ ಎಂದು ಅವರು ಹೇಳಿಕೊಂಡಿದ್ದರು. ಈ ಉದ್ವಿಗ್ನತೆಗಳು ಉಲ್ಬಣಗೊಳ್ಳುವ ಕೆಲವೇ ದಿನಗಳ ಮೊದಲು ವಿಡಿಯೊ ಪೋಸ್ಟ್ ಮಾಡಿದ ಅವರು ಕೆಲವೊಂದು ಪ್ರದೇಶವನ್ನು "ಅನಿಶ್ಚಿತತೆಯ ತಾಣ" ಎಂದು ಹೇಳಿದ್ದರು.

ಇರಾನ್-ಇಸ್ರೇಲ್ ಯುದ್ಧದ ಬಗ್ಗೆ ಭವಿಷ್ಯವಾಣಿ

ನವದೆಹಲಿ, ಮಾ. 1: ಅಮೆರಿಕ ಮತ್ತು ಇಸ್ರೇಲ್ ಸೇರಿ ಇರಾನ್ ಮೇಲೆ (Israel-Iran War) ಸಂಘಟಿತ ಮಿಲಿಟರಿ ದಾಳಿ ನಡೆಸಿದೆ. ಇದಕ್ಕೆ ಪ್ರತೀಕವಾಗಿ ಇರಾನ್ ಕೂಡ ಕ್ಷಿಪ್ರ ಪ್ರತ್ಯುತ್ತರ. ಇದೀಗ ಯುದ್ಧದ ವಾತಾವರಣ ಬಿಗಿಗೊಂಡಿದ್ದು ಇಡಿ ಜಗತ್ತೇ ಆತಂಕಕೊಂಡಿದೆ. ಈ ಭೀಕರ ಆತಂಕದ ನಡುವೆ, ಸೋಶಿಯಲ್ ಮೀಡಿಯಾದಲ್ಲಿ ಪ್ರವಾಸಿ ಜ್ಯೋತಿಷ್ಯರೊಬ್ಬರ ಹಳೆಯ ವಿಡಿಯೊ ಭಾರಿ ವೈರಲ್ ಆಗಿದೆ. ಈ ವರ್ಷ ಭೀಕರ ಯುದ್ಧ ಉಂಟಾಗಲಿದೆ ಎಂದು ಅವರು ಹೇಳಿಕೊಂಡಿದ್ದರು. ಈ ಉದ್ವಿಗ್ನತೆಗಳು ಉಲ್ಬಣಗೊಳ್ಳುವ ಕೆಲವೇ ದಿನಗಳ ಮೊದಲು ವಿಡಿಯೊ ಪೋಸ್ಟ್ ಮಾಡಿದ ಅವರು ಕೆಲವೊಂದು ಪ್ರದೇಶವನ್ನು "ಅನಿಶ್ಚಿತತೆಯ ತಾಣ" ಎಂದು ಹೇಳಿದ್ದರು.

ಸದ್ಯ ಇರಾನ್-ಇಸ್ರೇಲ್ ಯುದ್ಧ ನಡೆಯುತ್ತಿದ್ದಂತೆ ಈ 'ಪ್ರಯಾಣ' ಜ್ಯೋತಿಷಿ ಮಧ್ಯಪ್ರಾಚ್ಯದಲ್ಲಿ ಆಗುವ ಏರಿಳಿತವನ್ನು ನಿಖರವಾಗಿ ಊಹಿಸಿದ್ದಾರಾ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿನಡೆಯುತ್ತಿದೆ. ನತಾಲಿಯಾ ಎನ್ನುವ ಖಗೋಳ ನಕ್ಷೆ ಮತ್ತು ಪ್ರವಾಸಿ ಜ್ಯೋತಿಷ್ಯರು @astronatofficial ಹ್ಯಾಂಡಲ್‌ನಲ್ಲಿ ಯುದ್ಧದ ಭವಿಷ್ಯವಾಣಿ ಶೇರ್ ಮಾಡಿಕೊಂಡಿದ್ದರು. ಅದರಲ್ಲೂ ಫೆಭ್ರವರಿ ಕೊನೆಯ ವಾರದಲ್ಲಿ‌ ಅವರು ಈ ವಿಚಾರ ಹಂಚಿಕೊಂಡಿದ್ದರು‌.

ಬೆಂಗಳೂರಿನಲ್ಲಿ 4 ಲಕ್ಷ ಲಂಚ ಸ್ವೀಕರಿಸುವಾಗ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದ ಇನ್ಸ್‌ಪೆಕ್ಟರ್

ಅದರಲ್ಲಿ ಅವರು ಫೆಬ್ರವರಿ 27ರಿಂದ ಮಾರ್ಚ್ 2ರ ಒಳಗೆ ಮಧ್ಯಪ್ರಾಚ್ಯದಲ್ಲಿ ಭಾರಿ ಅಶಾಂತಿ ಮತ್ತು ಸಂಘರ್ಷ ಉಂಟಾಗಿ ಜನರಲ್ಲಿ ಗೊಂದಲ ಮೂಡಬಹುದು ಎಂದು ಎಚ್ಚರಿಕೆ ನೀಡಿದ್ದರು. ಫೆಬ್ರವರಿ 27ರಿಂದ ಮಾರ್ಚ್ 2ರವರೆಗೆ ಕುಂಭ ರಾಶಿಯಲ್ಲಿ ಮಂಗಳವು ವೃಷಭ ರಾಶಿಯಲ್ಲಿ ಇರಲಿದ್ದು, ಇದು ದೇಶಗಳು ಹಾಗೂ ಸಾಮೂಹಿಕ ಶಾಂತಿಗೆ ಸಂಬಂಧಿಸಿ ಪ್ರಮುಖ ಅಡಚಣೆಗಳನ್ನು ಸೂಚಿಸುತ್ತದೆ ಎಂದಿದ್ದರು. ವಿಶೇಷವಾಗಿ ಯುಎಇ (UAE), ಒಮನ್ ಮತ್ತು ಇರಾನ್‌ಗೆ ಪ್ರಯಾಣಿಸುವವರು ದಯವಿಟ್ಟು ಜಾಗರೂಕರಾಗಿರಿ ಎಂದು ಅವರು ಎಚ್ಚರಿಸಿದ್ದರು.

ʼʼಗ್ರಹಗಳ ನಡುವಿನ ಬದಲಾವಣೆಯಿಂದಾಗಿ ಭೂಪ್ರದೇಶಗಳು ಮತ್ತು ಗಡಿಗಳಿಗೆ ಸಂಬಂಧಿಸಿದಂತೆ ಅಡೆತಡೆಗಳು ಉಂಟಾಗುತ್ತವೆ. ಹಾಗಾಗಿ ಅನಗತ್ಯ ಅಪಾಯಗಳನ್ನು ತೆಗೆದುಕೊಳ್ಳದೆ ಸುರಕ್ಷಿತವಾಗಿರಿ. ಖಂಡಿತವಾಗಿಯೂ ಉತ್ತಮ ಟ್ರಾವೆಲ್ ಇನ್ಶೂರೆನ್ಸ್ (ಪ್ರವಾಸ ವಿಮೆ) ಮಾಡಿಸಿಕೊಳ್ಳಿ" ಎಂದಿದ್ದರು.‌ ಸದ್ಯ ನತಾಲಿಯಾ ಹೇಳಿದಂತೆಯೇ ಫೆಬ್ರವರಿ 28ರಂದು ಇರಾನ್ ಮತ್ತು ಇಸ್ರೇಲ್ ನಡುವೆ ದೊಡ್ಡ ಮಟ್ಟದ ಯುದ್ಧ ಆರಂಭವಾಗಿದೆ.