ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಉಡುಪಿ ಕೃಷ್ಣ ಜನ್ಮಾಷ್ಟಮಿ ಆಚರಣೆಯಲ್ಲಿ ಭರ್ಜರಿ ಸ್ಟೆಪ್‌ ಹಾಕಿದ ದಳಪತಿ 'ವಿಜಯ್‌': ತಮಿಳುನಾಡು ಸಿಎಂಗೆ ಇಲ್ಲೇನು ಕೆಲ್ಸ ಎನ್ನುವ ಮುನ್ನ ಈ ಸ್ಟೋರಿ ಓದಿ

Krishna Janmashtami 2026: ಉಡುಪಿಯಲ್ಲಿ ನಡೆದ ವಿಟ್ಲಪಿಂಡಿ ಉತ್ಸವದ ಸಂದರ್ಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಮತ್ತು ನಟ ವಿಜಯ್ ಅವರನ್ನು ಹೋಲುವ ವ್ಯಕ್ತಿಯೊಬ್ಬರು ಕಾಣಿಸಿಕೊಂಡಿದ್ದಾರೆ. ರಥಬೀದಿ ಮೂಲಕ ತೆರೆದ ವಾಹನದಲ್ಲಿ ಅವರು ಸವಾರಿ ಮಾಡಿದ್ದು ಬ್ಲ್ಯಾಕ್‌ ಕೋಟ್ ಧರಿಸಿ ಮಿಂಚಿದ್ದಾರೆ. ಜತೆಗೆ ಭರ್ಜರಿ ಡ್ಯಾನ್ಸ್‌ ಮಾಡಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

ಉಡುಪಿಯ ವಿಟ್ಲಪಿಂಡಿ ಉತ್ಸವಕ್ಕೆ ಬಂದಿದ್ರಾ ದಳಪತಿ ವಿಜಯ್? ವಿಡಿಯೊ ನೋಡಿ

ಉಡುಪಿ ಅಷ್ಟಮಿಯಲ್ಲಿ ಗಮನ ಸೆಳೆದ ತಮಿಳು ನಟ ವಿಜಯ್‌ ಹೋಲುವ ವ್ಯಕ್ತಿ -

Profile
Pushpa Kumari Sep 7, 2026 8:22 PM

ಉಡುಪಿ, ಸೆ. 7: ಕೃಷ್ಣನಗರಿಯಲ್ಲಿ ಈ ಬಾರಿಯೂ ಅಷ್ಟಮಿ ವೈಭವ ಜೋರಾಗಿತ್ತು (Krishna Janmashtami 2026). ಕರಾವಳಿಯ ವಿಶಿಷ್ಟ ಜನಪದ ಕಲೆಯಾದ ಹುಲಿವೇಷ, ಪೌರಾಣಿಕ ಪಾತ್ರಗಳು, ಯಕ್ಷಗಾನ ಸೇರಿ ಬಣ್ಣ ಬಣ್ಣದ ವಿವಿಧ ವೇಷದ ಅಬ್ಬರ ಜನರ ಗಮನ ಸೆಳೆದಿತ್ತು. ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೆ ನೂರಾರು ಕಲಾವಿದರು ಬಣ್ಣ ಬಳಿದುಕೊಂಡು ರಥಬೀದಿಯಲ್ಲಿ ಮನರಂಜಿಸಿದರು. ಈ ಪ್ರಸಿದ್ಧ ಉತ್ಸವದಲ್ಲಿ ತಮಿಳು ನಟ ಹಾಗೂ ರಾಜಕಾರಣಿ ದಳಪತಿ ವಿಜಯ್ ಅವರನ್ನು ಹೋಲುವ ವ್ಯಕ್ತಿಯೊಬ್ಬರು ಪ್ರತ್ಯಕ್ಷವಾಗಿ ಎಲ್ಲರ ಗಮನ ಸೆಳೆದರು. ವಿಜಯ್ ಕಾಣುವ ಅವರು ಡ್ಯಾನ್ಸ್‌ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದೆ.

ಉಡುಪಿಯಲ್ಲಿ ನಡೆದ ವಿಟ್ಲಪಿಂಡಿ ಉತ್ಸವದ ಸಂದರ್ಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಮತ್ತು ನಟ ವಿಜಯ್ ಅವರನ್ನು ಹೋಲುವ ವ್ಯಕ್ತಿಯೊಬ್ಬರು ಕಾಣಿಸಿಕೊಂಡಿದ್ದಾರೆ. ರಥಬೀದಿ ಮೂಲಕ ಅವರು ತೆರೆದ ವಾಹನದಲ್ಲಿ ಸವಾರಿ ಮಾಡಿದ್ದು, ವಿಜಯ್‌ ಅವರಂತೆಯೇ ಬ್ಲ್ಯಾಕ್‌ ಕೋಟ್ ಧರಿಸಿದ್ದರು. ಅವರ ಕಾರಿನ ಮುಂದೆ ಭದ್ರತಾ ಸಿಬ್ಬಂದಿ ಹೋಲುವ ಒಂದಷ್ಟು ಮಂದಿ ಸಾಗಿದ್ದು ವಿಐಪಿ ಶೈಲಿಯ ವಾತಾವರಣ ಸೃಷ್ಟಿಸಿದೆ.

ವಿಡಿಯೊ ನೋಡಿ:



ವಿಜಯ್ ವೇಷಧಾರಿ ಪ್ರಸಿದ್ಧ ರಥಬೀದಿ ಪ್ರದೇಶದ ಮೂಲಕ ತೆರೆದ ವಾಹನದಲ್ಲಿ ಪ್ರಯಾಣಿಸಿದರು. ದಳಪತಿ ವಿಜಯ್ ಅವರಂತಹ ನೋಟ ಮತ್ತು ನೃತ್ಯದ ಶೈಲಿ ಜನರಲ್ಲಿ ಕುತೂಹಲ ಹುಟ್ಟುಹಾಕುವಲ್ಲಿ ಯಶಸ್ವಿಯಾಗಿತ್ತು. ಉಡುಪಿಗೆ ನಿಜವಾದ ವಿಜಯ್ ಬಂದಿದ್ದಾರೆ ಎಂದು ಹಲವರು ಆರಂಭದಲ್ಲಿ ಭಾವಿಸಿದ ಪ್ರಸಂಗವೂ ನಡೆಯಿತು. ಅನೇಕರು ಈ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

8 ಅಡಿ 10 ಇಂಚು ಉದ್ದ ಕೂದಲು ಬೆಳೆಸಿ ದಾಖಲೆ ಬರೆದ ಉತ್ತರಾಖಂಡದ ಮಹಿಳೆ

ಈ ಸಾಂಪ್ರದಾಯಿಕ ಹಬ್ಬವನ್ನು ಆಚರಿಸಲು ಭಕ್ತರು ಸೇರುತ್ತಿದ್ದಂತೆ ಆ ವ್ಯಕ್ತಿ ಉತ್ಸಾಹದಿಂದ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ವಿಜಯ್ ಅವರ ಹೋಲಿಕೆಯು ಸುತ್ತಲಿನವರ ಗಮನ ಸೆಳೆಯಿತು. ವಿಡಿಯೊದಲ್ಲಿ ಆ ವ್ಯಕ್ತಿ ತೆರೆದ ವಾಹನದಲ್ಲಿ ನಿಂತು ಬೀಯಲ್ಲಿ ನೆರೆದಿದ್ದ ಜನರತ್ತ ಕೈ ಬೀಸುತ್ತಿರುವುದು ಕಂಡು ಬಂದಿದೆ.