ಲಖನೌ, ಏ. 8: ವಂದೇ ಭಾರತ್ ರೈಲಿನಲ್ಲಿ ಇತ್ತೀಚೆಗೆ ಆಘಾತಕಾರಿ ಘಟನೆವೊಂದು ನಡೆದಿದೆ. ರೈಲಿನಲ್ಲಿ ಕ್ಯಾಟರಿಂಗ್ ಸಿಬ್ಬಂದಿ ಅಂಗವಿಕಲ ಪ್ರಯಾಣಿಕನನ್ನು ತಳ್ಳಿದ ಘಟನೆ ನಡೆದಿದೆ. ಉತ್ತರ ಪ್ರದೇಶದ ಮೀರತ್ ಮತ್ತು ವಾರಣಾಸಿ ನಡುವೆ ಚಲಿಸುವ ರೈಲು ಸಂಖ್ಯೆ ಸ್ವಲ್ಪ ಸಮಯದವರೆಗೆ ನಿಲ್ಲುವ ಚಾರ್‌ಬಾಗ್ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಸದ್ಯ ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿರುವ ಅಡುಗೆ ಸಿಬ್ಬಂದಿ ವಿಶೇಷಚೇತನ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ್ದಾನೆ. ಸದ್ಯ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಆರ್ಡರ್ ಮಾಡಿದ್ದ ಶಾಹಿ ಪನೀರ್ ಬದಲಿಗೆ ಬೇರೆ ಆಹಾರ ನೀಡಿದ್ದಕ್ಕೆ ಈ ಜಗಳ ಆರಂಭವಾಗಿದೆ.
ವಿಡಿಯೊ ನೋಡಿ
ಲಖನೌನ ಚಾರ್‌ಬಾಗ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ವೈರಲ್ ಆದ ಈ ದೃಶ್ಯ ಪ್ರಯಾಣಿಕ ಮತ್ತು ವಂದೇ ಭಾರತ್ ಅಡುಗೆ ಸಿಬ್ಬಂದಿ ನಡುವೆ ನಡೆದ ವಾಗ್ವಾದವನ್ನು ತಿಳಿಸಿದೆ. ದೃಶ್ಯದಲ್ಲಿ ಅಡುಗೆ ಸಿಬ್ಬಂದಿಯೊಬ್ಬ ಪ್ರಯಾಣಿಕನನ್ನು ಪ್ಲಾಟ್‌ಫಾರ್ಮ್‌ಗೆ ತಳ್ಳುತ್ತಿರುವುದನ್ನು ಕಾಣಬಹುದು. ಬೆಲ್ಟ್ ತೆಗೆದು ಬೆದರಿಕೆ ಹಾಕುತ್ತಿರುವುದು ಕೂಡ ಕಂಡು ಬಂದಿದೆ.
ವಿಡಿಯೊ ಮಾಡುತ್ತ ಮೈಮರೆತು ಚರಂಡಿಗೆ ಬಿದ್ದ ಯುವತಿ
ಸಹ ಪ್ರಯಾಣಿಕರೊಬ್ಬರು ಈ ದೃಶ್ಯ ರೆಕಾರ್ಡ್ ಮಾಡಿದ್ದಾರೆ. ಉತ್ತರ ರೈಲ್ವೆಯ ಲಖನೌ ವಿಭಾಗವು ಸಾಮಾಜಿಕ ಮಾಧ್ಯಮದಲ್ಲಿ ಘಟನೆಯನ್ನು ಒಪ್ಪಿಕೊಂಡಿದ್ದು, ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ಅನ್ನು ಟ್ಯಾಗ್ ಮಾಡಿದೆ. ವಿಶೇಷ ಚೇತನ ಪ್ರಯಾಣಿಕ ಮತ್ತು ಅಡುಗೆ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ ಎಂದು ರೈಲ್ವೆ ಪ್ರಾಧಿಕಾರ ಹೇಳಿದೆ. ಈ ಬಗ್ಗೆ ಸಂಬಂಧಪಟ್ಟ ಪರವಾನಗಿದಾರರಿಗೆ ಎಚ್ಚರಿಕೆ ನೀಡಲಾಗಿದೆ ಮತ್ತು ಪ್ರಯಾಣಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸಲು ಸೂಚಿಸಲಾಗಿದೆ ಎಂದು ತಿಳಿಸಿದೆ.
ನೆಟ್ಟಿಗರೊಬ್ಬರು ಪ್ರಯಾಣಿಕರೊಂದಿಗೆ ಇಂತಹ ಅಮಾನವೀಯ ವರ್ತನೆ ಸರಿಯಲ್ಲ. ಸಿಬ್ಬಂದಿಗೆ ಸರಿಯಾದ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದ್ದಾರೆ.