ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬಿಎಂಡಬ್ಲ್ಯು ಕಾರು, 1 ಕೋಟಿ ರುಪಾಯಿ ನಗದು; ದುಬಾರಿ ವರದಕ್ಷಿಣೆ ಹಸ್ತಾಂತರದ ವಿಡಿಯೊ ವೈರಲ್

Viral Video: ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದ ಮದುವೆಯ ದೃಶ್ಯವೊಂದು ಎಲ್ಲರನ್ನು ಅಚ್ಚರಿಗೆ ದೂರಿದೆ. ಮದುವೆಯೊಂದರಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ವರದಕ್ಷಿಣೆ ನೀಡುವ ವಿಡಿಯೊ ವೈರಲ್ ಆಗಿದೆ. ಈ ದೃಶ್ಯ ನೋಡಿದ ಅನೇಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಕೋಟ್ಯಂತರ ಮೌಲ್ಯದ ವರದಕ್ಷಿಣೆ ವಿತರಣೆ

ಲಖನೌ, ಮೇ 12: ಭಾರತದಲ್ಲಿ ಮದುವೆಯ ಸಮಯದಲ್ಲಿ ವರದಕ್ಷಿಣೆ ನೀಡುವುದು ಅಥವಾ ತೆಗೆದುಕೊಳ್ಳುವುದನ್ನು ನಿಷೇಧಿಸಲಾಗಿದೆ. ಆದರೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದ ಮದುವೆಯ ದೃಶ್ಯವೊಂದು ಎಲ್ಲರನ್ನು ಅಚ್ಚರಿಗೆ ದೂಡಿದೆ. ಮದುವೆಯಲ್ಲಿ ಕೋಟ್ಯಂತರ ರುಪಾಯಿ ಮೌಲ್ಯದ ವಸ್ತುಗಳನ್ನು ವರದಕ್ಷಿಣೆ ನೀಡುವ ವಿಡಿಯೊವೊಂದು ವೈರಲ್ (Viral News) ಆಗಿದೆ. ಈ ದೃಶ್ಯ ನೋಡಿದ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರನ ಕುಟುಂಬವು ಪಡೆದ ಉಡುಗೊರೆಗಳನ್ನು ಹೆಮ್ಮೆಯಿಂದ ಘೋಷಿಸುತ್ತಿರುವುದು ಕಾಣಬಹುದು. ಅದರಲ್ಲಿ ಬಿಎಂಡಬ್ಲ್ಯು ಕಾರು ಮತ್ತು 1 ಕೋಟಿ ರುಪಾಯಿಗಿಂತ ಹೆಚ್ಚು ನಗದು ಸೇರಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೊ ಚರ್ಚೆಗೆ ಕಾರಣವಾಗಿದೆ. ಕಟ್ಟುನಿಟ್ಟಾದ ಕಾನೂನು ನಿರ್ಬಂಧಗಳ ಹೊರತಾಗಿಯೂ ಭಾರತದಲ್ಲಿ ವರದಕ್ಷಿಣೆ ಪದ್ಧತಿ ಮುಂದುವರಿದಿರುವ ಬಗ್ಗೆ ಇದೀಗ ಚರ್ಚೆ ನಡೆಯುತ್ತಿದೆ.

ವಿಡಿಯೊ ನೋಡಿ:



ಮದುವೆ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ನೆರೆದಿರುವ ಅತಿಥಿಗಳ ಮುಂದೆ ವರದಕ್ಷಿಣೆ ನೀಡಿದ ವಸ್ತುಗಳ ಬಗ್ಗೆ ಉಲ್ಲೇಖಿಸುತ್ತಿದ್ದು, ಒಂದು ಬಿಎಂಡಬ್ಲ್ಯು ಕಾರು, 1 ಕೋಟಿ 1 ಲಕ್ಷ 11 ಸಾವಿರ ರುಪಾಯಿ ನಗದು ಎಂದು ಮೈಕ್‌ನಲ್ಲಿ ಹೇಳಿದ್ದಾರೆ‌. ಈ ವೇಳೆ ನೆರೆದಿದ್ದ ಹಲವರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

25 ಸಾವಿರ ರೂ.ಗೆ ಎಐ ಶಿಕ್ಷಕಿ ಸೃಷ್ಟಿಸಿದ 17 ವರ್ಷದ ವಿದ್ಯಾರ್ಥಿ; ರೋಬೋಟ್ ಉಪನ್ಯಾಸದ ವಿಡಿಯೊ ವೈರಲ್

ವೈರಲ್ ಪೋಸ್ಟ್‌ನೊಂದಿಗೆ, “1 BMW, 1 ಕೋಟಿಯ 1 ಲಕ್ಷ, 11 ಸಾವಿರ ರುಪಾಯಿ ನಗದು ಹುಡುಗಿಯ ಕುಟುಂಬವು ಹುಡುಗನಿಗೆ ವರದಕ್ಷಿಣೆಯಾಗಿ ನೀಡಿದೆ. ಸಮುದಾಯದ ವಿನಾಶ ಇಲ್ಲಿಂದಲೇ ಪ್ರಾರಂಭವಾಗುತ್ತದೆ‌. ವರದಕ್ಷಿಣೆ ತೆಗೆದುಕೊಳ್ಳಲು ಅಥವಾ ನೀಡಲು ಸ್ವಲ್ಪ ಮಿತಿ ಇರಬೇಕುʼʼ ಎಂದು ಬರೆದು ಶೇರ್ ಮಾಡಲಾಗಿದೆ. ಅನೇಕರು ವರದಕ್ಷಿಣೆಯ ನಿರ್ಧಾರವನ್ನು ಟೀಕಿಸಿದ್ದಾರೆ.

1961ರ ವರದಕ್ಷಿಣೆ ನಿಷೇಧ ಕಾಯ್ದೆ ಜಾರಿಗೆ ಬಂದಾಗಿನಿಂದ ಭಾರತದಲ್ಲಿ ವರದಕ್ಷಿಣೆಯನ್ನು ನಿಷೇಧಿಸಲಾಗಿದೆ. ಕಾನೂನಿನ ಅಡಿಯಲ್ಲಿ ವರದಕ್ಷಿಣೆ ನೀಡುವುದು ಮತ್ತು ಸ್ವೀಕರಿಸುವುದು ಎರಡೂ ಶಿಕ್ಷಾರ್ಹ ಅಪರಾಧ. ಆರೋಪ ಸಾಬೀತಾದರೆ ಆರು ತಿಂಗಳಿಂದ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು ಎಂದು ಕಾನೂನು ಹೇಳುತ್ತದೆ. ಇದೀಗ ಈ ವಿಡಿಯೊ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.