ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಡಿವೋರ್ಸ್‌ ಸಿಕ್ಕ ಖುಷಿಯಲ್ಲಿ ಪಾರ್ಟಿ ಮಾಡಿದ ಮಹಿಳೆ; ಸಿಕ್ಕಾಪಟ್ಟೆ ವೈರಲ್‌ ಆಯ್ತು ಮೆಹೆಂದಿ ಡಿಸೈನ್‌!

ಮಹಿಳೆಯೊಬ್ಬಳು ತನ್ನ ಡಿವೋರ್ಸ್‌ ಅನ್ನು ಪಾರ್ಟಿ ಮಾಡುವ ಮೂಲಕ ಸೆಲೆಬ್ರೆಟ್ ಮಾಡಿದ್ದಾಳೆ. ಅದಕ್ಕಾಗಿ ಅವಳು ಫೈನಲೀ ಡಿವೋರ್ಸ್‌ ಎಂದು ಮೆಹೆಂದಿ ಹಾಕಿಕೊಂಡಿದ್ದಾಳೆ. ಈ ವಿಡಿಯೊ ಈಗ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌(Viral Video) ಆಗಿದೆ.

ನವದೆಹಲಿ: ಒಂದು ಕಾಲದಲ್ಲಿ ಡಿವೋರ್ಸ್‌ ಅನ್ನು ಬಹಳ ದುಃಖಕರ ಸಂಗತಿ ಎಂದು ಪರಿಗಣಿಸಲಾಗಿತ್ತು.ಆದರೆ ಇಂದಿನ ಕಾಲದಲ್ಲಿ ಡಿವೋರ್ಸ್‌ ಪಡೆದು ಅದನ್ನು ಖುಷಿಯಿಂದ ಸೆಲೆಬ್ರೆಟ್ ಮಾಡುತ್ತಾರೆ.ಇದಕ್ಕೆ ಸಂಬಂಧಪಟ್ಟ ವಿಡಿಯೊ ಕೂಡ ಸೋಶಿಯಲ್‌ ಮೀಡಿಯಾದಲ್ಲಿ ಆಗಾಗ ವೈರಲ್‌ ಆಗುತ್ತಿರುತ್ತದೆ. ಇಲ್ಲೊಬ್ಬಳು ಮಹಿಳೆ ಡಿವೋರ್ಸ್‌ ಪಡೆದ ನಂತರ ಕೈಗೆ ಮೆಹೆಂದಿ ಹಾಕಿಕೊಂಡು ಖುಷಿಯಿಂದ ಪಾರ್ಟಿ ಮಾಡುವ ಮೂಲಕ ಸೆಲೆಬ್ರೆಟ್ ಮಾಡಿದ್ದಾಳೆ. ಈ ವಿಡಿಯೊ ಈಗ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದ್ದು, ನೆಟ್ಟಿಗರು ಶಾಕ್‌ ಆಗಿದ್ದಾರೆ. ವೈರಲ್ ಆದ ವಿಡಿಯೊದಲ್ಲಿ ಆಕೆ ಕೈಗೆ ಹಾಕಿದ ಮೆಹಂದಿ ಡಿಸೈನ್ ಬ್ರೈಡಲ್ ಮೆಹೆಂದಿ ಡಿಸೈನ್ ಆಗಿರಲಿಲ್ಲ. ಬದಲಾಗಿ, ಆ ಮೆಹಂದಿ ಡಿಸೈನಲ್ಲಿ "100 ಗ್ರಾಂ ಪ್ರೀತಿ", "200 ಗ್ರಾಂ ಜಗಳ", ಮತ್ತು ನ್ಯಾಯದ ತಕ್ಕಡಿಗೆ ಸಂಬಂಧಪಟ್ಟ ಚಿತ್ರಗಳಿತ್ತು.

ವಿಡಿಯೊ ಇಲ್ಲಿದೆ ನೋಡಿ...



ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದಿದೆ. ಕೆಲವರು ಇದನ್ನು ನೈತಿಕ ಅವನತಿ ಅಥವಾ ಮದುವೆಗೆ ನೀಡುವ ಅಗೌರವದ ಸಂಕೇತವೆಂದು ಟೀಕಿಸಿದರೆ, ಇತರರು ಇದನ್ನು ವೈಯಕ್ತಿಕ ಸ್ವಾತಂತ್ರ್ಯದ ಕಡೆಗೆ ಧೈರ್ಯಶಾಲಿ ಮತ್ತು ಸಾಂಕೇತಿಕ ಹೆಜ್ಜೆ ಎಂದು ಹೊಗಳಿದ್ದಾರೆ. ಕೆಟ್ಟ ಸಂಬಂಧವನ್ನು ಸಹಿಸಿಕೊಂಡು ಜೀವನಪರ್ಯಂತ ಮೌನವಾಗಿ ದುಃಖವನ್ನು ಸಹಿಸುವುದಕ್ಕಿಂತ ಡಿವೋರ್ಸ್‌ ಪಡೆಯುವುದೇ ಒಳ್ಳೆಯದು ಎಂದು ಕೆಲವರು ವಾದಿಸಿದ್ದಾರೆ.

ಡಿವೋರ್ಸ್‌ ಅನ್ನು ಮಹಿಳೆಯರು ಸೆಲೆಬ್ರೆಟ್ ಮಾಡಿದ್ದು ಇದೇ ಮೊದಲಲ್ಲ. ಈ ಹಿಂದೆ, ಮಹಿಳೆಯೊಬ್ಬಳು ತನ್ನ ವಿವಾಹ ವಿಚ್ಛೇದನವನ್ನು "ಹ್ಯಾಪಿ ಡಿವೋರ್ಸ್" ಪಾರ್ಟಿಯೊಂದಿಗೆ ಆಚರಿಸಿದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಈ ಸುದ್ದಿಯನ್ನೂ ಓದಿ:Viral Video: ನಡುರಸ್ತೆಯಲ್ಲಿ ಮಹಿಳೆಗೆ ಪೊಲೀಸರಿಂದ ಕಪಾಳಮೋಕ್ಷ; ನೆಟ್ಟಿಗರು ಫುಲ್‌ ಗರಂ!

ವಿಡಿಯೊದಲ್ಲಿ, ಮಹಿಳೆ ಸಂತೋಷದಿಂದ ಹಾರ್ಟ್ ಶೇಪ್‍ ಕೇಕ್ ಕತ್ತರಿಸಿ "ಹ್ಯಾಪಿ ಡಿವೋರ್ಸ್" ಎಂಬ ಪದಗಳನ್ನು ಪ್ರದರ್ಶಿಸಿದ್ದಳು. ನಂತರ ಅವಳು ತನ್ನ ಕೆಂಪು ಮದುವೆಯ ದುಪಟ್ಟಾವನ್ನು ತೆಗೆದುಹಾಕಿ ಅದನ್ನು ಕತ್ತರಿಯಿಂದ ಕತ್ತರಿಸಿದ್ದಳು. ನಂತರ, ಅವಳು ಕೇಕ್ ಪೀಸ್‍ ಅನ್ನು ತೆಗೆದುಕೊಂಡು, ಕ್ಯಾಮೆರಾ ಮುಂದೆ ಪೋಸ್ ನೀಡಿದ್ದಳು ಮತ್ತು ತನ್ನ ಮಾಜಿ ಪತಿಯನ್ನು ಒಳಗೊಂಡಿರುವ ತನ್ನ ಮದುವೆಯ ಪೋಟೋಗಳನ್ನು ಪ್ರದರ್ಶಿಸುತ್ತಾ ಅವಳು ಸಂತೋಷದಿಂದ ಪೋಟೊಗಳನ್ನು ಒಂದೊಂದಾಗಿ ಪಕ್ಕಕ್ಕೆ ಎಸೆದಿದ್ದಾಳೆ. ಈ ವಿಡಿಯೊ ನೋಡಿದ ನೆಟ್ಟಿಗರು 'ಜೀವನಾಂಶ ರಿಕವರಿ ಪಾರ್ಟಿ' ಎಂದು ಟ್ರೋಲ್ ಮಾಡಿದ್ದರು.