ಬಿಹಾರ,ಆ.6: ಸಾಮಾನ್ಯವಾಗಿ ಕಾಲು- ಕೈಗೆ ಯಾವುದೇ ಗಾಯವಾದಾಗ ಪ್ಲಾಸ್ಟರ್ ಹಾಕಿ ಬ್ಯಾಂಡೇಜ್ ಮಾಡಿರುವುದನ್ನು ನೀವು ನೋಡಿರಬಹುದು. ಆದರೆ ಬಿಹಾರದ ಬೇಗೂಸರಾಯ್ ಆಸ್ಪತ್ರೆಯೊಂದರಲ್ಲಿ ಪ್ಲಾಸ್ಟರ್ ಬದಲಿಗೆ ಗಾಯಗೊಂಡ ವ್ಯಕ್ತಿಯ ಕಾಲಿಗೆವಖಾಲಿ ರಟ್ಟಿನ ಬಾಕ್ಸ್ ಬಳಸಿ ಬ್ಯಾಂಡೇಜ್ ಮಾಡಿರುವ ವಿಡಿಯೊವೊಂದು ವೈರಲ್ (Viral News) ಆಗಿದೆ. ಈ ದೃಶ್ಯ ಬಿಹಾರದ ಆರೋಗ್ಯ ವ್ಯವಸ್ಥೆಯ ಬಗ್ಗೆ ವ್ಯಾಪಕ ಟೀಕೆಗೆ ಕಾರಣವಾಗಿದ್ದು ನೆಟ್ಟಿಗರು ಆಸ್ಪತ್ರೆ ಸಿಬ್ಬಂದಿಗಳ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ.
ಬಿಹಾರದ ಬೇಗುಸರಾಯ್ ಜಿಲ್ಲೆಯ ಮಂಜೌಲ್ ಉಪ-ವಿಭಾಗೀಯ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಗಾಯಾಳು ವ್ಯಕ್ತಿಗೆ ಕಾರ್ಡ್‌ಬೋರ್ಡ್ ಬಳಸಿ ಪ್ರಥಮ ಚಿಕಿತ್ಸೆ ನೀಡಲಾಯಿತು ಎಂದು ಹೇಳಲಾಗಿದೆ. ಅಧಿಕಾರಿಗಳ ಪ್ರಕಾರ, ಆಗಸ್ಟ್ 3 ರ ಸಂಜೆ ಈ ಘಟನೆ ಸಂಭವಿಸಿದೆ. ನೌಕೋಥಿ ಪೊಲೀಸ್ ಠಾಣೆ ವ್ಯಾಪ್ತಿಯ ಮಹೇಶ್ವರ ಗ್ರಾಮದ ನಿವಾಸಿ ಕುನಾಲ್ ಕುಮಾರ್ ಅವರ ಬೈಕ್ಹರ್ ಸಿಂಗ್ ಸೇತುವೆ ಬಳಿ ಅಪಘಾತಕ್ಕೀಡಾಗಿಡಾಗಿದ್ದು ಕಾಲನ್ನು ಮುರಿದುಕೊಂಡಿದ್ದರು.
ವಿಡಿಯೋ ನೋಡಿ:
ಸಾರ್ವಜನಿಕರು ಆತನನ್ನು ಆಸ್ಪತ್ರೆಗೆ ಸೇರಿಸಿದಾಗ, ವೈದ್ಯರು ಕಾಲನ್ನು ಸ್ಥಿರವಾಗಿ ಇರಿಸಲು ರಟ್ಟಿನ ಬಾಕ್ಸ್ ಕಟ್ಟಿ, ಹೆಚ್ಚಿನ ಚಿಕಿತ್ಸೆಗೆ ಬೇರೊಂದು ದೊಡ್ಡ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಹಲವಾರು ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಮಂಜೌಲ್ ಉಪ-ವಿಭಾಗೀಯ ಆಸ್ಪತ್ರೆಯಲ್ಲಿ ರಸ್ತೆ ಅಪಘಾತ ಗಳಿಂದ ಉಂಟಾಗುವ ಪ್ರಕರಣಗಳಿಗೆ ಚಿಕಿತ್ಸೆ ನೀಡಲು ಸೌಲಭ್ಯಗಳಿಲ್ಲ ನೆಟ್ಟಿಗರು ಕಿಡಿಕಾರಿದ್ದಾರೆ.
ಈ ವಿವಾದಕ್ಕೆ ಪ್ರತಿಕ್ರಿಯಿಸಿದ ಆಸ್ಪತ್ರೆಯ ಉಸ್ತುವಾರಿ ಅಭಿನವ್ ಪ್ರಿಯದರ್ಶಿ, ಕಾಲು,ಕೈ ಮುರಿತದ ರೋಗಿಗಳಿಗೆ ತಾತ್ಕಾಲಿಕ ಸ್ಪ್ಲಿಂಟ್ ಆಗಿ ಕಾರ್ಡ್‌ಬೋರ್ಡ್ ಅನ್ನು ಬಳಸುವುದು ತುರ್ತು ಪ್ರಥಮ ಚಿಕಿತ್ಸೆಯಾಗಿದೆ. ರಕ್ತಸ್ರಾವ ತಡೆಯಲು ಮತ್ತು ಮೂಳೆ ಹೆಚ್ಚು ಅಲ್ಲಾಡದಂತೆ ಮಾಡಲು ಈ ತುರ್ತು ಪ್ರಥಮ ಸಮರ್ಥಿಸಿಕೊಂಡಿದ್ದಾರೆ. ಸದ್ಯ ಈ ಘಟನೆಯು ಬಿಹಾರದಲ್ಲಿ ತುರ್ತು ಆರೋಗ್ಯ ಸೌಲಭ್ಯಗಳ ಕುರಿತು ಚರ್ಚೆಯನ್ನು ಹುಟ್ಟುಹಾಕಿದೆ.