ಮಹಾರಾಷ್ಟ್ರ, ಮಾ.20: ಪ್ರಾಣಿಗಳ ಮುದ್ದಾಟದ ಹಲವು ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತವೆ. ಆಟೋ ರಿಕ್ಷಾದ ಮೇಲೆ ನಾಯಿ ಸವಾರಿ, ನಾಯಿಯ ವರ್ಕೌಟ್ ವಿಡಿಯೊ, ಬಾಲಕಿಯನ್ನು ಶಾಲಾ ಬಸ್ ಹತ್ತಿಸುವ ದೃಶ್ಯ ಹೀಗೆ ಹಲವು ವಿಡಿಯೊ ವೈರಲ್ ಆಗಿತ್ತು. ಇದೀಗ ಯುಗಾದಿ ಸಂಭ್ರಮ ಆಚರಣೆಯ ಮೆರವಣಿಗೆಯಲ್ಲಿ ಸಾಕು ನಾಯಿಯೊಂದು ಬೈಕ್ ನಲ್ಲಿ ಸವಾರಿ ಮಾಡಿದ ಘಟನೆ ಕಂಡು ಬಂದಿದೆ. ಮಹಾರಾಷ್ಟ್ರದ ಡೊಂಬಿವಲಿಯಲ್ಲಿ ಮಾಲೀಕ ನೊಂದಿಗೆ ಬೈಕ್ ಸವಾರಿಯನ್ನು ಆನಂದಿಸುತ್ತಿದೆ.
ಡೊಂಬಿವಲಿಯ ಶೋಭಾ ಯಾತ್ರೆಯಲ್ಲಿ ಸಾಕು ನಾಯಿ ಬೈಕ್ ಸವಾರಿ ಮಾಡಿದೆ. ಬೈಕ್‌ನ ಮುಂಭಾಗದಲ್ಲಿ ಬಹಳ ತಾಳ್ಮೆಯಿಂದ ಕುಳಿತಿದ್ದ ನಾಯಿ ಸಾಲುಗಟ್ಟಿ ನಿಂತಿದ್ದ ನೋಡುಗರ ಗಮನ ಸೆಳೆಯಿತು. ಮಾಲೀಕನ ಮುಂದೆ ಬೈಕಿನಲ್ಲಿ ಕುಳಿತಿದ್ದ ಶ್ವಾನ ಗತ್ತಿನಿಂದ ಕುಳಿತು ಸಾಗುತ್ತಿತ್ತು. ಇದನ್ನು ಕಂಡ ಜನರು ಕೂಡ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ @navinsingh_1622 ಎಂಬುವವರು ಈ ವಿಡಿಯೋ ಶೇರ್ ಮಾಡಿಕೊಂಡಿದ್ದು ಬಳಕೆದಾರರು ಶ್ವಾನದ ಆತ್ಮವಿಶ್ವಾಸಕ್ಕೆ ಫಿದಾ ಆಗಿದ್ದಾರೆ.
ವಿಡಿಯೋ ನೋಡಿ:
ಮಾರ್ಚ್ 19 ರಂದು ನಡೆದ ಹಬ್ಬದ ಮೆರವಣಿಗೆಯ ನಡುವೆ ನಾಯಿ ತನ್ನ ಮಾಲೀಕರೊಂದಿಗೆ ಬೈಕ್ ಸವಾರಿಯನ್ನು ಆನಂದಿಸುತ್ತಿದೆ. ಬೈಕ್‌ನ ಮುಂಭಾಗದಲ್ಲಿ ಆತ್ಮವಿಶ್ವಾಸದಿಂದ ಕುಳಿತಿದ್ದ ನಾಯಿ ಶಾಂತವಾಗಿ ಮತ್ತು ಸಂಯಮದಿಂದ ಕಾಣಿಸಿಕೊಂಡಿದೆ.. ಈ ವಿಶಿಷ್ಟ ದೃಶ್ಯವು ಕುತೂಹಲ ಮತ್ತು ಸಂತೋಷವನ್ನು ಹುಟ್ಟುಹಾಕಿದೆ. ಅನೇಕ ಜನರು ತಮ್ಮ ಫೋನ್‌ಗಳಲ್ಲಿ ಆ ಕ್ಷಣವನ್ನು ಸೆರೆಹಿಡಿದಿದ್ದಾರೆ.
ಈ ಮೆರವಣಿಗೆಯಲ್ಲಿದ್ದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂದೆ ಮತ್ತು ಅವರ ಪುತ್ರ ಶ್ರೀಕಾಂತ್ ಶಿಂಧೆ ಅವರು ಈ ದೃಶ್ಯ ಕಂಡು ನಕ್ಕಿದ್ದಾರೆ. ನೆಟಿಜನ್‌ಗಳು ಕೂಡ ನಾಯಿಯ ಶಾಂತ ನಡವಳಿಕೆಯನ್ನು ಶ್ಲಾಘಿಸಿದ್ದಾರೆ ಮತ್ತು ಆ ಕ್ಷಣವನ್ನು ಮುದ್ದಾಗಿದೆ ಕರೆದಿದ್ದಾರೆ.