ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಾವಿರಾರು ಕಿಲೋ ಮೀಟರ್ ನಡೆದು ಮಾಲೀಕನ ಮನೆ ತಲುಪಿದ ನಾಯಿ; ಶ್ವಾನದ ನಿಷ್ಠೆಗೆ ಮನಸೋತ ನೆಟ್ಟಿಗರು

Viral News: ನಾಯಿಗಳಿಗೆ ನಾವು ಪ್ರೀತಿ ತೋರಿಸಿದರೆ ಅವು ಸಹಾಯವನ್ನು ನೆನಪಿಸಿ ದುಪ್ಪಟ್ಟು ಪ್ರೀತಿ ನೀಡುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಕಳೆದು ಹೋದ ನಾಯಿಯೊಂದು ಕಿಲೊ ಮೀಟರ್ ಗಟ್ಟಲೆ ಕಾಲ್ನಡಿಗೆಯಲ್ಲೇ ನಡೆದು ಮಾಲೀಕನ ಮನೆ ತಲುಪಿದ ಘಟನೆಯೊಂದು ನಡೆದಿದೆ. ಒರೆಗಾನ್‌ನಲ್ಲಿ ತನ್ನ ಮಾಲೀಕರೊಂದಿಗೆ ಮತ್ತೆ ಒಂದಾಗಲು ಬಾಬಿ ಎಂಬ ನಾಯಿ 4,000 ಕಿಲೋಮೀಟರ್‌ಗಳಿಗಿಂತ ಹೆಚ್ಚು ದೂರ ಪ್ರಯಾಣಿಸಿದ್ದು ಇಡೀ ಜಗತ್ತನ್ನೆ ಆಶ್ಚರ್ಯ ಪಡುವಂತೆ ಮಾಡಿದೆ.‌ ಸದ್ಯ ಇದರ ಸುದ್ದಿ ಸೋಷಿಯಲ್ ಮೀಡಿಯದಲ್ಲಿ ಭಾರೀ ವೈರಲ್ ಆಗಿದೆ.

ಕಿಲೋ ಮೀಟರ್ ಮೈಲಿ ನಡೆದು ಮಾಲೀಕನ ಮನೆ ತಲುಪಿದ ನಾಯಿ

ವಾಷಿಂಗ್ಟನ್‌,ಮೇ 9: ನಾಯಿಯ ನಿಷ್ಠೆ, ಪ್ರಾಮಾಣಿಕತೆ ಸಾರುವ ಹಲವು ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತವೆ. ಅದರಲ್ಲೂ ನಾಯಿಗಳಿಗೆ ನಾವು ಪ್ರೀತಿ ತೋರಿಸಿದರೆ ಅವು ಸಹಾಯವನ್ನು ನೆನಪಿಸಿ ದುಪ್ಪಟ್ಟು ಪ್ರೀತಿ ನೀಡುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಕಳೆದು ಹೋದ ನಾಯಿಯೊಂದು ಕಿಲೊ ಮೀಟರ್ ಗಟ್ಟಲೆ ಕಾಲ್ನಡಿಗೆಯಲ್ಲೇ ನಡೆದು ಮಾಲೀಕನ ಮನೆ ತಲುಪಿದ ಘಟನೆಯೊಂದು ನಡೆದಿದೆ. ಒರೆಗಾನ್‌ನಲ್ಲಿ ತನ್ನ ಮಾಲೀಕ ರೊಂದಿಗೆ ಮತ್ತೆ ಒಂದಾಗಲು ಬಾಬಿ ಎಂಬ ನಾಯಿ 4,000 ಕಿಲೋಮೀಟರ್‌ಗಳಿಗಿಂತ ಹೆಚ್ಚು ದೂರ ಪ್ರಯಾಣಿಸಿದ್ದು ಇಡೀ ಜಗತ್ತನ್ನೆ ಆಶ್ಚರ್ಯ ಪಡುವಂತೆ ಮಾಡಿದೆ.‌ ಸದ್ಯ ಇದರ ಸುದ್ದಿ ಸೋಷಿಯಲ್ ಮೀಡಿಯದಲ್ಲಿ ಭಾರೀ ವೈರಲ್ ಆಗಿದೆ.

1923ರಲ್ಲಿ ಓರೆಗಾನ್‌ನ ನಿವಾಸಿಗಳಾದ ಫ್ರಾಂಕ್ ಮತ್ತು ಎಲಿಜಬೆತ್ ಬ್ರೇಜಿಯರ್ ದಂಪತಿಗಳು ತಮ್ಮ ಸಾಕುನಾಯಿ 'ಬಾಬಿ'ಯೊಂದಿಗೆ ಇಂಡಿಯಾನಾ ಪ್ರಾಂತ್ಯಕ್ಕೆ ಪ್ರವಾಸ ಹೋಗಿದ್ದರು. ಅಲ್ಲಿ ಬೀದಿನಾಯಿಗಳನ್ನು ನೋಡಿ ಹೆದರಿ ಓಡಿಹೋದ ಬಾಬಿ ಕಾಣೆಯಾಗಿದ್ದನು. ಬಹಳ ಹುಡು ಕಾಡಿದರೂ ನಾಯಿ ಸಿಗದೇ ಇದ್ದಾಗ ಮಾಲೀಕರು ಅನಿವಾರ್ಯವಾಗಿ ಬಾಬಿ ಇನ್ನು ಸಿಗುವುದಿಲ್ಲ ಎಂಬ ನೋವಿನೊಂದಿಗೆ ಮನೆಗೆ ಮರಳಿದ್ದಾರೆ.

Viral Video: ಶಿಕ್ಷಕಿಗೆ ಬೀಸಣಿಕೆಯಿಂದ ಗಾಳಿ ಹಾಕಿದ ವಿದ್ಯಾರ್ಥಿ: ಸರ್ಕಾರಿ ಶಾಲೆಯ ಶಿಕ್ಷಣ ಗುಣಮಟ್ಟ ಬಗ್ಗೆ ಪ್ರಶ್ನೆ ಮಾಡಿದ ನೆಟ್ಟಿಗರು!

ಆದರೆ ಫೆಬ್ರವರಿ 1924 ರಲ್ಲಿ, ತಮ್ಮ ಕಳೆದುಹೋದ ನಾಯಿ ಮತ್ತೆ ಕಾಣಿಸಿಕೊಂಡಿದೆ. ಸುಮಾರು ಆರು ತಿಂಗಳುಗಳ ನಂತರ ಬಾಬಿ ಓರೆಗಾನ್‌ನ ಸಿಲ್ವರ್ಟನ್‌ನಲ್ಲಿರುವ ತನ್ನ ಮಾಲೀಕರ ಮನೆಯ ಮುಂದೆ ಪ್ರತ್ಯಕ್ಷನಾದನು..ಸುಮಾರು 4,100 ಕಿಲೋಮೀಟರ್ ನಾಯಿ ಕ್ರಮಿಸಿದ್ದು ಮೈ ನಡುಗಿಸುವ ಚಳಿ,, ಪರ್ವತಗಳು ಮತ್ತು ವಿಶಾಲವಾದ ಮೈದಾನಗಳನ್ನು ಬಾಬಿ ಏಕಾಂಗಿಯಾಗಿ ದಾಟಿದ್ದನು. ಆದರೆ ತನ್ನ ಕಾಲ್ನಡಿಗೆಯ ಪ್ರಯಾಣದಿಂದ ದಣಿದ ಮತ್ತು ಗಾಯಗೊಂಡಂತೆ ತೋರುತ್ತಿತ್ತು

ಈ ಸುದ್ದಿಯೂ ಅಮೆರಿಕದ್ಯಾಂತ ವೈರಲ್ ಆಗುತ್ತಿದ್ದಂತೆ ಬಾಬಿಗೆ ಆಹಾರ ನೀಡಿದ ಜನರು ಪತ್ರಗಳನ್ನು ಬರೆಯಲು ಪ್ರಾರಂಭಿಸಿದ್ದಾರೆ. ಅದ್ಭುತ ಪ್ರಯಾಣದ ಗೌರವಾರ್ಥವಾಗಿ, ಬಾಬಿಯನ್ನು "ಬಾಬಿ ದಿ ವಂಡರ್ ಡಾಗ್" ಎಂದು ಕರೆಯಲಾಗುತ್ತದೆ. ಬಾಬಿಯ ಈ ನಿಷ್ಠೆ ಪ್ರಾಣಿ ಪ್ರೇಮಿಗಳಿಗೆ ಸ್ಫೂರ್ತಿಯಾಗಿದೆ. ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಅಚ್ಚರಿ ವ್ಯಕ್ತ ಪಡಿಸಿದ್ದಾರೆ