ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಐಐಟಿ ಬಾಂಬೆ ತರಗತಿ ಕೋಣೆಯಲ್ಲಿ 'ಡೋಗೇಶ್ ಭಾಯ್' ದರ್ಬಾರ್; ರ‍್ಯಾಂಕ್ ವಿದ್ಯಾರ್ಥಿ ಎಂದ ನೆಟ್ಟಿಗರು!

Viral Video: ಸಾಮಾನ್ಯವಾಗಿ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ತೆರಳಿ ಕ್ಲಾಸ್ ನಲ್ಲಿ ಕೂತು ಪಾಠ ಕೇಳುತ್ತಾರೆ. ಆದರೆ ಇಲ್ಲಿ 'ಡೋಗೇಶ್ ಭಾಯ್'ಮಾತ್ರ ಯಾವುದೇ ಎಂಟ್ರೆನ್ಸ್ ಎಕ್ಸಾಮ್ ಉತ್ತೀರ್ಣ ವಾಗದೆ ಕ್ಲಾಸ್‌ರೂಮ್ ಒಳಗೆ ಎಂಟ್ರಿ ಕೊಟ್ಟು ವಿದ್ಯಾರ್ಥಿಗಳ ಬೆಂಚ್ ಮೇಲೆ ರಾಜನಂತೆ ಕುಳಿತಿದೆ. ಈ ವಿಡಿಯೊ ಸದ್ಯ ನೆಟ್ಟಿಗರ ಮನ ಗೆದ್ದಿದೆ...

ತರಗತಿ ಕೋಣೆಯಲ್ಲಿ 'ಡೋಗೇಶ್ ಭಾಯ್' ದರ್ಬಾರ್

ಮುಂಬೈ,ಫೆ.18: ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿಗಳ ಹಲವು ವಿಡಿಯೊಗಳು ನೆಟ್ಟಿಗರ ಗಮನ ಸೆಳೆಯುತ್ತವೆ. ಇದೀಗ ಡೊಗೇಶ್ ಭಾಯ್ ಕ್ಯೂಟ್ ವಿಡಿಯೊವೊಂದು ಭಾರೀ ವೈರಲ್ (Viral Video) ಆಗಿದೆ. ಸಾಮಾನ್ಯವಾಗಿ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ತೆರಳಿ ಕ್ಲಾಸ್ ನಲ್ಲಿ ಕೂತು ಪಾಠ ಕೇಳುತ್ತಾರೆ. ಆದರೆ ಇಲ್ಲಿ 'ಡೋಗೇಶ್ ಭಾಯ್'ಮಾತ್ರ ಯಾವುದೇ ಎಂಟ್ರೆನ್ಸ್ ಎಕ್ಸಾಮ್ ಉತ್ತೀರ್ಣವಾಗದೆ ಕ್ಲಾಸ್‌ರೂಮ್ ಒಳಗೆ ಎಂಟ್ರಿ ಕೊಟ್ಟು ವಿದ್ಯಾರ್ಥಿಗಳ ಬೆಂಚ್ ಮೇಲೆ ರಾಜನಂತೆ ಕುಳಿತಿದೆ. ಈ ವಿಡಿಯೊ ಸದ್ಯ ನೆಟ್ಟಿಗರ ಮನ ಗೆದ್ದಿದೆ.

ಐಐಟಿ ಬಾಂಬೆಯಲ್ಲಿ ಶಿಕ್ಷಣ ಪಡೆಯುವುದು, ತರಗತಿ ಪ್ರವೇಶಾತಿಗೆ ಎಕ್ಸಾಮ್ ಪಾಸ್ ಆಗುವುದು ಅಷ್ಟು ಸುಲಭದ ಕೆಲಸವಲ್ಲ. ಆದರೆ ಇಲ್ಲಿ ಡೊಗೇಶ್ ಭಾಯ್ ಯಾವ ಎಕ್ಸಾಮ್ ಮತ್ತು ಯಾರ ಪರ್ಮಿಷನ್ ಇಲ್ಲದೆಯೂ ಕ್ಲಾಸ್ ಒಳಗೆ ಎಂಟ್ರಿ ಕೊಟ್ಟಿದೆ. ವಿದ್ಯಾರ್ಥಿಯೊಬ್ಬರು ಹಂಚಿಕೊಂಡ ವೀಡಿಯೊ ಈಗ ವೈರಲ್ ಆಗಿದೆ. ಕ್ಲಿಪ್‌ನಲ್ಲಿ ನಾಯಿ ತರಗತಿಯ ಮೇಜಿನ ಮೇಲೆ ಆತ್ಮವಿಶ್ವಾಸ ದಿಂದ ಕುಳಿತಿದೆ.

ವಿಡಿಯೋ ನೋಡಿ:



ಸಾಮಾನ್ಯವಾಗಿ ನಾಯಿಗಳು ಯಾರನ್ನದಾರೂ ಕಂಡಾಗ ಭಯ ಪಡುತ್ತವೆ. ಆದರೆ ಈ 'ಡೋಗೇಶ್ ಭಾಯ್' ಮಾತ್ರ ತಾನು ಕೂಡ ಒಬ್ಬ ವಿದ್ಯಾರ್ಥಿ ಎಂಬಂತೆ ಬಹಳ ಗಂಭೀರವಾಗಿ ಕುತೂ ನೋಡುತ್ತಿದೆ. ವಿಡಿಯೋ ಶೇರ್ ಮಾಡಿದ ವಿದ್ಯಾರ್ಥಿ, "ಕೊನೆಗೂ ಡೋಗೇಶ್ ಭಾಯ್‌ಗೆ ಸೀಟ್ ಸಿಕ್ಕಿತು" ಎಂದು ಕ್ಯಾಪ್ಚನ್ ನೀಡಿ ದ್ದಾರೆ. ಇಂಟರ್ನೆಟ್ ಬಳಕೆದಾರರು ಈ ದೃಶ್ಯ ಇನ್ನಷ್ಟು ಆನಂದಿ ಸಿದ್ದು ವೀಡಿಯೊ ಮಿಲಿಯನ್ ವೀಕ್ಷಣೆಯ ಗಡಿಯನ್ನು ದಾಟಿದೆ ಮತ್ತು ಕಾಮೆಂಟ್‌ಗಳ ವಿಭಾಗವು ಸಂಪೂರ್ಣ ಹಾಸ್ಯಮಯದಿಂದ ತುಂಬಿದೆ.

Viral News: ಬಾಂಗ್ಲಾದೇಶದ ಶಾಂತಿಗಾಗಿ ಭಾರತ ತುಂಡು ತುಂಡಾಗಬೇಕು; ವಿವಾದ ಹೊತ್ತಿಸಿದ ಮಾಜಿ ಸೇನಾ ಜನರಲ್

ಬಳಕೆದಾರೊಬ್ಬರು ಇವ ಇಲ್ಲಿನ ರ‍್ಯಾಂಕ್ ಸ್ಟೂಡೆಂಟ್ ಆಗುತ್ತಾನೆ ಎಂದಿದ್ದಾರೆ. ಮತ್ತೊಬ್ಬರು ಇವನಿಗೆ ಮೆರಿಟ್ ಮೇಲೆ ಸೀಟ್ ಸಿಕ್ಕಿಲ್ಲ, ಅನಿಮಲ್ ಕೋಟಾದಲ್ಲಿ ಬಂದಿದ್ದಾನೆ ಎಂದು ಇನ್ನೊ ಬ್ಬರು ತಮಾಷೆ ಮಾಡಿದ್ದಾರೆ. ಇತ್ತೀಚೆಗಷ್ಟೇ ಈಶಾನ್ಯ ಬ್ರೆಜಿಲ್‌ನಲ್ಲಿ ಬೀದಿ ನಾಯಿಯೊಂದು‌ ಆಸ್ವತ್ರೆಗೆ ದಿಢೀರ್ ಎಂಟ್ರಿಯಾಗಿರುವ ವಿಡಿಯೊ ವೈರಲ್ ಆಗಿತ್ತು. ನಾಯಿಯ ಕಾಲಿಗೆ ಪೆಟ್ಟಾಗಿದ್ದು, ಕ್ಲಿನಿಕ್ ಪ್ರವೇಶಿಸಿದ ನಾಯಿ ತನ್ನ ಪೆಟ್ಟಾಗಿದ್ದ ಕಾಲು ತೋರಿಸಿ ಅಲ್ಲಿದ್ದ ಸಿಬ್ಬಂದಿಗೆ ಶುಶ್ರೂಷೆ ಮಾಡುವಂತೆ ಕೇಳಿಕೊಂಡಿತ್ತು.