ಮುಂಬೈ, ಜ. 19: ಪ್ರತಿ ವರ್ಷ ನಡೆಯುವ 'ಟಾಟಾ ಮುಂಬೈ ಮ್ಯಾರಾಥಾನ್' ಈ ವರ್ಷ ವಿಶೇಷವಾಗಿ ಗಮನ ಸೆಳೆದಿದೆ. ಆದಾಗ್ಯೂ, ಈ ವರ್ಷ, ಅನಿರೀಕ್ಷಿತ ಮತ್ತು ಹೃದಯ ಗೆಲ್ಲುವ ಕ್ಷಣವೊಂದು ನೋಡುಗರಿಗೆ ಆಕರ್ಷಿಸುವಂತೆ ಮಾಡಿದೆ. ಹೌದು ಬೆಳಗಿನ ಜಾವದಲ್ಲಿ ಓಟದ ಸ್ಪರ್ಧೆ ನಡೆಯುತ್ತಿದ್ದಂತೆ ಎರಡು ಬೀದಿ ನಾಯಿಗಳು ಓಟಗಾರರೊಂದಿಗೆ ಹೆಜ್ಜೆ ಹಾಕಿದ ದೃಶ್ಯ ಕಂಡು ಬಂದಿದೆ. ಸಾವಿರಾರು ಓಟಗಾರರು ಕಿಲೋಮೀಟರ್‌ಗಳಷ್ಟು ಬೆವರು ಸುರಿಸಿ ಓಡುತ್ತಿದ್ದಂತೆ ಎರಡು ಬೀದಿ ನಾಯಿಗಳು ಅತ್ಯಂತ ಉತ್ಸಾಹದಿಂದ ಅವರ ಜೊತೆಗೆ ಓಡುತ್ತಿರುವುದು ಕಂಡು ಬಂದಿದೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral Video) ಆಗಿದೆ.
ವೀಡಿಯೊದಲ್ಲಿ, ಬೆಳಗಿನ ಜಾವದಲ್ಲಿ ಓಟದ ಸ್ಪರ್ಧೆ ನಡೆಯುತ್ತಿದ್ದಂತೆ ಎರಡು ಬೀದಿ ನಾಯಿಗಳು ಬಹಳಷ್ಟು ಆತ್ಮವಿಶ್ವಾಸದಿಂದ ಓಟಗಾರರೊಂದಿಗೆ ಜೊತೆಯಾಗಿದೆ. ಮ್ಯಾರಾಥಾನ್‌ನ ಇನ್‌ಸ್ಟಾಗ್ರಾಮ್ ಪೇಜ್ನಲ್ಲಿ ವಿಡಿಯೊ ಶೇರ್ ಮಾಡಲಾಗಿದ್ದು ಬಹಳಷ್ಟು ಜನರು ಪ್ರತಿಕ್ರಿಯೆ ನೀಡಿ ದ್ದಾರೆ. ಬೆಳಗ್ಗಿನ ಜಾವ ಸಾವಿರಾರು ಓಟಗಾರರು ರಸ್ತೆಯಲ್ಲಿ ಓಡಾಡುವಂತೆ ಎರಡು ಬೀದಿ ನಾಯಿಗಳು ಅತ್ಯಂತ ಉತ್ಸಾಹದಿಂದ ಅವರ ಜೊತೆಗೂಡಿ ಓಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋಗೆ "ಪಾವ್ಸ್ ಮತ್ತು ಅಪ್ಲಾಸ್" ಎಂಬ ಆಕರ್ಷಕ ಶೀರ್ಷಿಕೆ ನೀಡಲಾಗಿದೆ.
ವಿಡಿಯೋ ನೋಡಿ:
ಅಥ್ಲೀಟ್‌ಗಳು ಬೆವರು ಸುರಿಸುತ್ತಾ ಓಡುತ್ತಿದ್ದರೆ ಈ ಶ್ವಾನಗಳು ಯಾವುದೇ ಒತ್ತಡವಿಲ್ಲದೆ, ಆರಾಮಾವಾಗಿ ಅವರ ವೇಗಕ್ಕೆ ಸರಿಯಾಗಿಯೇ ಓಡಿವೆ. ಈ ದೃಶ್ಯವು ಸ್ಪರ್ಧೆಯ ನಡುವೆ ಅಪರೂಪದ ಸಹಬಾಳ್ವೆ ಸಂದೇಶವನ್ನು ಜಗತ್ತಿಗೆ ನೀಡಿದೆ. ಆದರೆ ಇವುಗಳ ಉತ್ಸಾಹ ಮಾತ್ರ ಮ್ಯಾರಾಥಾನ್ ಓಟಗಾರರಿಗಿಂತ ಕಡಿಮೆಯೇನೂ ಇರಲಿಲ್ಲ. ಈ ದೃಶ್ಯವು ಬಹಳಷ್ಟು ನೆಟ್ಟಿಗರ ಗಮನ ಸೆಳೆದಿದೆ
Viral Video: ಮಿನರಲ್ ವಾಟರ್ ಬಾಟಲಿಗೆ ಟ್ಯಾಪ್ ನೀರು ತುಂಬಿಸಿ ರೈಲಿನಲ್ಲಿ ಮಾರಾಟ; ವಿಡಿಯೊ ಕಂಡು ನೆಟ್ಟಿಗರು ಗರಂ
ಸಾಮಾಜಿಕ ಮಾಧ್ಯಮ ಬಳಕೆದಾರರು ಕಾಮೆಂಟ್‌ಗಳ ವಿಭಾಗವನ್ನು ಪ್ರೀತಿಯಿಂದ ತುಂಬಿದ್ದಾರೆ. ಒಬ್ಬ ಬಳಕೆದಾರರು ಎಷ್ಟು ಮುದ್ದಾಗಿದೆ ಈ ದೃಶ್ಯ ಎಂದು ಬರೆದಿದ್ದಾರೆ. ಇನ್ನೊಬ್ಬರು "ಡೊಗೇಶ್ ಭಾಯ್ ಬಹಳಷ್ಟು ಆತ್ಮವಿಶ್ವಾಸ ಹೊಂದಿದ್ದಾನೆ" ಎಂದು ತಮಾಷೆ ಮಾಡಿದ್ದಾರೆ. "ನಾಯಿಗಳ ಓಟದ ವೇಗ ಅದ್ಭುತವಾಗಿದೆ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ . ಕೇವಲ ಮನರಂಜನೆ ಮಾತ್ರವಲ್ಲದೆ, ಬೀದಿ ಪ್ರಾಣಿಗಳ ಬಗ್ಗೆ ಕರುಣೆ ತೋರುವಂತೆ ಈ ವಿಡಿಯೋ ಮೆಚ್ಚುಗೆಗೆ ಪಾತ್ರವಾಗಿದೆ.