ಮಧ್ಯ ರಸ್ತೆಯಲ್ಲೇ ಕಾರು ನಿಲ್ಲಿಸಿ ಗಾಢ ನಿದ್ದೆಗೆ ಜಾರಿದ ʼಕುಂಭಕರ್ಣʼ: ಎಚ್ಚರಿಸಲು ಹರಸಾಹಸ ಪಟ್ಟ ಸ್ಥಳೀಯರು
Viral News: ಇಲ್ಲೊಬ್ಬ ಚಾಲಕ ನಿದ್ದೆ ಬಂದ ಹಿನ್ನೆಲೆಯಲ್ಲಿ ರಸ್ತೆ ಮಧ್ಯೆಯೇ ಕಾರ್ ನಿಲ್ಲಿಸಿ ನಿದ್ರೆಗೆ ಜಾರಿದ್ದಾನೆ. ಇದು ತೀವ್ರ ಟ್ರಾಫಿಕ್ ಜಾಮ್‌ಗೆ ಕಾರಣವಾಗಿದ್ದು ಜನರು ಅವನನ್ನು ಎಬ್ಬಿಸಲು ಪ್ರಯತ್ನಿಸುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಆತ ಎಷ್ಟು ಗಾಢ ನಿದ್ದೆಗೆ ಜಾರಿದ್ದಾನೆ ಎಂದರೆ ಜನರು ಕೂಗಿದರೂ ಎಚ್ಚರಗೊಂಡಿಲ್ಲ. ಕೇರಳಂನ ಕೋಟಯಂ ಜಿಲ್ಲೆಯ ಅತಿರಂಪುಳ ಪಲ್ಲಿ ಜಂಕ್ಷನ್‌ನಲ್ಲಿ ಈ ಘಟನೆ ನಡೆದಿದೆ. ಕ್ಯಾಮರಾದಲ್ಲಿ ಈ ದೃಶ್ಯ ಸೆರೆಹಿಡಿಯಲಾಗಿದ್ದು ಭಾರೀ ವೈರಲ್ ಆಗಿದೆ.
ಕೇರಳಂನಲ್ಲಿ ಮಧ್ಯ ರಸ್ತೆಯಲ್ಲೇ ಕಾರು ನಿಲ್ಲಿಸಿ ಗಾಢ ನಿದ್ದೆಗೆ ಜಾರಿದ ಚಾಲಕ -
ತಿರುವನಂತಪುರಂ, ಆ. 26: ನಿದ್ದೆಗಣ್ಣಿನಲ್ಲಿ ವಾಹನ ಚಲಾಯಿಸುವುದು ಅಪಾಯಕಾರಿ ಎಂಬುದು ನಮಗೆಲ್ಲ ತಿಳಿದೇ ಇದೆ. ಇಲ್ಲೊಬ್ಬ ಚಾಲಕ ನಿದ್ದೆಯ ಮಂಪರಿನಲ್ಲಿ ರಸ್ತೆ ಮಧ್ಯೆಯೇ ಕಾರ್ ನಿಲ್ಲಿಸಿ ನಿದ್ರೆಗೆ ಜಾರಿದ್ದಾನೆ. ಇದು ತೀವ್ರ ಟ್ರಾಫಿಕ್ ಜಾಮ್‌ಗೆ ಕಾರಣವಾಗಿದ್ದು ಜನರು ಚಾಲಕನನ್ನು ಎಬ್ಬಿಸಲು ಪ್ರಯತ್ನಿಸುತ್ತಿರುವುದು ವಿಡಿಯೊದಲ್ಲಿ ಕಂಡುಬಂದಿದೆ. ಕೇರಳಂನ ಕೋಟಯಂ ಜಿಲ್ಲೆಯ ಅತಿರಂಪುಳ ಪಲ್ಲಿ ಜಂಕ್ಷನ್‌ನಲ್ಲಿ ಈ ಘಟನೆ ನಡೆದಿದೆ. ಕ್ಯಾಮರಾದಲ್ಲಿ ಈ ದೃಶ್ಯ ಸೆರೆಹಿಡಿಯಲಾಗಿದ್ದು, ಭಾರಿ ವೈರಲ್ (Viral News) ಆಗಿದೆ.
ದಣಿದ ಚಾಲಕನೊಬ್ಬ ಪ್ರಯಾಣ ಮಾಡುವ ಬದಲಿಗೆ ನಿದ್ದೆಯನ್ನು ಪೂರ್ಣಗೊಳಿಸಲು ನಿರ್ಧರಿಸಿದ್ದಾನೆ. ಆತ ರಸ್ತೆಯ ಮಧ್ಯದಲ್ಲಿ ಕಾರು ನಿಲ್ಲಿಸಿ ಸ್ಟೀರಿಂಗ್ ಮೇಲೆ ಮಲಗಿದ್ದಾನೆ. ಕೆಲವು ಗಂಟೆಗಳ ಕಾಲ ಆತ ಕದಲಲೇ ಇಲ್ಲ. ಇದು ತೀವ್ರ ಟ್ರಾಫಿಕ್ ಜಾಮ್‌ಗೆ ಕಾರಣವಾಗಿದ್ದು ಆತನನ್ನು ಎಬ್ಬಿಸಲು ಅಲ್ಲಿ ನೆರೆದಿದ್ದ ಜನ ಪ್ರಯತ್ನಿಸಿದ್ದಾರೆ.
ವಿಡಿಯೊ ನೋಡಿ:
Sleep so deep that 100 people had to move his car to wake him up.. 😂 pic.twitter.com/efPmIua3Hc
— Shilpa (@shilpa_cn) August 21, 2026
ರಸ್ತೆಯಲ್ಲಿ ಸುಗಮವಾಗಿ ಹೋಗುತ್ತಿದ್ದ ವಾಹನಗಳು ನಡುರಸ್ತೆಯಲ್ಲೇ ಇದ್ದಕ್ಕಿದ್ದಂತೆ ನಿಂತಿವೆ. ಇದರಿಂದ ಹಿಂದೆ ಬಂದ ವಾಹನಗಳು ಸಾಲುಗಟ್ಟಿ ನಿಂತು ಕಾಯುತ್ತಿದ್ದವು. ಆದರೆ ಚಾಲಕ ಮಾತ್ರ ತನಗೆ ನಿದ್ರೆಯೆ ಮುಖ್ಯ ಎಂಬಂತೆ ಕುಂಭ ಕರ್ಣನಂತೆ ಮಲಗಿದ್ದ. ಕಾರ್ ಕದಲದೆ ಇರುವುದನ್ನು ಗಮನಿಸಿದ ಸ್ಥಳೀಯರು ಹಾಗೂ ವಾಹನ ಸವಾರರು ಕಾರಿನ ಹತ್ತಿರ ಹೋಗಿ ನೋಡಿದ್ದಾರೆ. ಚಾಲಕ ಮಾತ್ರ ಗಾಢ ನಿದ್ರೆಯಲ್ಲೇ ಇದ್ದ. ಆತನನ್ನು ಎಚ್ಚರಿಸಲು ಸಾರ್ವಜನಿಕರು ಸತತ ಪ್ರಯತ್ನ ನಡೆಸಿದರು.
ಪೊಲೀಸ್ ಬೈಕ್‌ನಲ್ಲಿ ರ‍್ಯಾಪಿಡೋ ಸೇವೆ? ಸರ್ಕಾರಿ ವಾಹನ ದುರುಪಯೋಗ ಪಡಿಸಿಕೊಂಡ ಸಬ್ ಇನ್ಸ್‌ಪೆಕ್ಟರ್ ವಿರುದ್ಧ ಕ್ರಮ
ಕಾರಿನ ಡೋರ್ ಎಷ್ಟೇ ತಟ್ಟಿದರೂ ಆತ ಏದ್ದೆಳಲಿಲ್ಲ. ಜನರೆಲ್ಲ ಸೇರಿ ಕಾರನ್ನೇ ಬಲವಾಗಿ ಅಲ್ಲಾಡಿಸಿದರೂ ಆತ ಎಚ್ಚರಗೊಳ್ಳಲಿಲ್ಲ. ಸಾಕಷ್ಟು ಪ್ರಯತ್ನಗಳ ನಂತರ ಕೊನೆಗೂ ಎಚ್ಚರಗೊಂಡ ಚಾಲಕ ತನ್ನ ಸುತ್ತ ನೆರೆದಿದ್ದ ಜನ ಕಂಡು ಬೆಚ್ಚಿ ಬಿದ್ದಿದ್ದಾನೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಚಾಲಕನನ್ನು ಕುಂಭಕರ್ಣನಿಗೆ ಹೋಲಿಸಿದ್ದಾರೆ. ನೆಟ್ಟಿಗರೊಬ್ಬರು ತಮಾಷೆಯಾಗಿ ಅವನನ್ನು “21 ನೇ ಶತಮಾನದ ಕುಂಭಕರ್ಣ ” ಎಂದು ಕರೆದಿದ್ದಾರೆ. ಇನ್ನೊಬ್ಬರು, ʼʼಚಿಂತೆ ಇಲ್ಲದೆ ನಿದ್ದೆ ಮಾಡುವುದೆಂದ್ರೆ ಹೀಗೆʼʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ.