ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪಾದಚಾರಿ ತಪ್ಪಿದ್ದರೂ ಸಿಟ್ಟು ಬಿಟ್ಟು ಅಪ್ಪಿಕೊಂಡ ಕಾರ್‌ ಚಾಲಕ; ಅಪರೂಪದ ದೃಶ್ಯ ಎಂದ ನೆಟ್ಟಿಗರು

Viral Video: ಉತ್ತರಾಖಂಡದಲ್ಲಿ ನಡೆದ ಅಪರೂಪದ ಘಟನೆಯೊಂದು ಎಲ್ಲರ ಹೃದಯ ಗೆದ್ದಿದೆ. ರಸ್ತೆ ಕ್ರಾಸ್ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಕಾರ್‌ ಆಕಸ್ಮಿಕವಾಗಿ ತಗುಲಿದೆ. ಇಲ್ಲಿ ಪಾದಚಾರಿಯದ್ದೇ ತಪ್ಪಾಗಿದ್ದರೂ ಕಾರ್ ಚಾಲಕ ಕೆಳಗೆ ಇಳಿದುಬಂದು ಜಗಳವಾಡುವ ಬದಲು ಆ ಪಾದಚಾರಿಯನ್ನು ಪ್ರೀತಿಯಿಂದ ಅಪ್ಪಿಕೊಂಡು ಆರೋಗ್ಯ ವಿಚಾರಿಸಿದ್ದಾನೆ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಉತ್ತರಾಖಂಡದಲ್ಲಿ ನಡೆದ ರಸ್ತೆ ಅಪಘಾತ

ಡೆಹ್ರಾಡೂನ್‌, ಅ. 10: ರಸ್ತೆಯಲ್ಲಿ ಸಣ್ಣಪುಟ್ಟ ಅಪಘಾತವಾದಾಗ ವಾಹನ ಸವಾರರು ಪರಸ್ವರ ಜಗಳವಾಡುವುದು, ಹೊಡೆದಾಡಿಕೊಂಡಿರುವುದನ್ನು ನೀವು ನೋಡಿರಬಹುದು. ಯಾರದೇ ತಪ್ಪು- ಸರಿ ಇದ್ದರೂ ಮಾನವೀಯತೆ ಮರೆತು ವರ್ತಿಸುವುದು ಇಂದಿನ ದಿನದಲ್ಲಿ ಸಾಮಾನ್ಯ ಎಂಬಂತಾಗಿದೆ. ಆದರೆ ಉತ್ತರಾಖಂಡದ ಈ ಘಟನೆ ಎಲ್ಲರ ಹೃದಯ ಗೆದ್ದಿದೆ. ರಸ್ತೆ ಕ್ರಾಸ್ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಕಾರ್‌ ಆಕಸ್ಮಿಕವಾಗಿ ತಗುಲಿದೆ. ಇಲ್ಲಿ ಪಾದಚಾರಿಯದ್ದೇ ತಪ್ಪಾಗಿದ್ದರೂ ಕಾರ್ ಚಾಲಕ ಕೆಳಗೆ ಇಳಿದುಬಂದು ಜಗಳವಾಡುವ ಬದಲು ಆ ಪಾದಚಾರಿಯನ್ನು ಪ್ರೀತಿಯಿಂದ ಅಪ್ಪಿಕೊಂಡು ಆರೋಗ್ಯ ವಿಚಾರಿಸಿದ್ದಾನೆ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಈ ದೃಶ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಾರ್ ಚಾಲಕ ತಾನು ಆಕಸ್ಮಿಕವಾಗಿ ಡಿಕ್ಕಿ ಹೊಡೆದ ಪಾದಚಾರಿಯೊಂದಿಗೆ ಜಗಳವಾಡುವ ಬದಲು ಅಪ್ಪಿಕೊಳ್ಳುವ ಮೂಲಕ ಮಾನವೀಯತೆಯ ಸಂದೇಶ  ಸಾರಿದ್ದಾನೆ. ಈ ಘಟನೆ ರಸ್ತೆಗಳಲ್ಲಿ ತಾಳ್ಮೆ ಮತ್ತು ಸಹಾನುಭೂತಿಯ ಮಹತ್ವವನ್ನು ಎತ್ತಿ ತೋರಿಸಿದೆ.

ವಿಡಿಯೊ ನೋಡಿ:



ಯುವಕನೊಬ್ಬ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಾರ್‌ ಸಣ್ಣದಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ತಕ್ಷಣ ಚಾಲಕ ಕಾರ್ ನಿಲ್ಲಿಸಿದ್ದಾನೆ. ನಂತರ ಚಾಲಕ ವಾಹನದಿಂದ ಕೆಳಗಿಳಿದು ಪಾದಚಾರಿಯತ್ತ ನಡೆದಿದ್ದಾನೆ. ಆತನನ್ನು ದೂಷಿಸುವ ಅಥವಾ ವಾಗ್ವಾದಕ್ಕಿಳಿಯುವ ಬದಲು, ಆ ಯುವಕನ ಯೋಗಕ್ಷೇಮದ ಬಗ್ಗೆ ಕಾಳಜಿ ವ್ಯಕ್ತಪಡಿಸಿ ಆತನನ್ನು ಅಪ್ಪಿಕೊಂಡಿದ್ದಾನೆ.

ರೈಲ್ವೆ ಗೇಟ್‌ನಲ್ಲೇ ಟ್ರೈನ್ ನಿಲ್ಲಿಸಿ ಹತ್ತಿದ ಕುಟುಂಬ; ಇದೇನು ನಿಮ್ಮ ಮನೆಯ ಆಸ್ತಿಯೇ?

ತಪ್ಪು ಯಾರದೇ ಇರಲಿ ವ್ಯಕ್ತಿಯ ಯೋಗಕ್ಷೇಮ ಮುಖ್ಯ ಎಂದು ಅರಿತು ಚಾಲಕ ಪಾದಚಾರಿಯನ್ನು ವಿಚಾರಿಸಿದ್ದಾನೆ. ಈ ವಿಡಿಯೊವನ್ನು ಉತ್ತರಾಖಂಡ ಪೊಲೀಸರು ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಸ್ತೆ ಅಪಘಾತಗಳ ಸಂದರ್ಭದಲ್ಲಿ ಕೋಪ ಮಾಡಿಕೊಳ್ಳದೆ, ತಾಳ್ಮೆ ಮತ್ತು ಮಾನವೀಯತೆ ಸಾರುವುದು ಮುಖ್ಯ ಎಂದು ಬರೆದಿದ್ದಾರೆ.

​ಈ ವಿಡಿಯೊ ಭಾರಿವೈರಲ್ ಆಗಿದ್ದು ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬರು, ʼʼಇಂತಹ ಹೃದಯವಂತರು ನಮಗೆ ಬೇಕುʼʼ ಎಂದಿದ್ದಾರೆ. ಮತ್ತೊಬ್ಬರು, ʼʼಯಾರದ್ದು ತಪ್ಪು ಎಂದು ನಿರ್ಧರಿಸುವುದಕ್ಕಿಂತ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಮೊದಲ ಆದ್ಯತೆಯಾಗಿರಬೇಕುʼʼ ಎಂದು ಕಾಮೆಂಟ್‌ ಮಾಡಿದ್ದಾರೆ.