ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕ್ಯಾಬ್ ರೈಡ್ ಕ್ಯಾನ್ಸಲ್ ಮಾಡಿದ್ದಕ್ಕೆ ಮನೆಯ ಡೋರ್ ಬಡಿದು ಬೆದರಿಕೆ: ಆಘಾತಕಾರಿ ಅನುಭವ ಬಿಚ್ಚಿಟ್ಟ ಮಹಿಳೆ

Viral News: ಇತ್ತೀಚೆಗೆ ಮಹಿಳೆಯರ ಮೇಲೆ ಕಿರುಕುಳ ಎಸಗುತ್ತಿರುವ ಅನೇಕ ಘಟನೆಗಳು ವರದಿಯಾಗುತ್ತಿವೆ. ಸಾರ್ವಜನಿಕ ಸ್ಥಳ, ಮನೆಯಲ್ಲೂ ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂಬಂತಾಗಿದೆ. ಈ ನಡುವೆ ಮಹಿಳೆಯೊಬ್ಬರು ತಮಗೆ ಎದುರಾದ ಮೂರು ಆತಂಕಕಾರಿ ಅನುಭವ ಹಂಚಿಕೊಂಡಿದ್ದಾರೆ. ಇಂತಹ ಪುರುಷರಿಂದ ತಮಗೆ ಮುಕ್ತಿ ಯಾವಾಗ ಎಂದು ಪ್ರಶ್ನಿಸಿದ್ದಾರೆ.

ಸಾಂದರ್ಭಿಕ ಚಿತ್ರ

ದೆಹಲಿ, ಅ.1: ಇತ್ತೀಚೆಗೆ ಮಹಿಳೆಯರ ಮೇಲೆ ಕಿರುಕುಳ ಎಸಗುತ್ತಿರುವ ಅನೇಕ ಘಟನೆಗಳು ವರದಿಯಾಗುತ್ತಿವೆ. ಸಾರ್ವಜನಿಕ ಸ್ಥಳದಲ್ಲೂ ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂಬಂತಾಗಿದೆ. ಈ ನಡುವೆ ಮಹಿಳೆಯೊಬ್ಬರು ಉಂಟಾದ ಮೂರು ಆತಂಕಕಾರಿ ಅನುಭವ ಹಂಚಿಕೊಂಡಿದ್ದಾರೆ. ಇಂತಹ ಪುರುಷರಿಂದ ತಮಗೆ ಮುಕ್ತಿ ಯಾವಾಗ ಎಂದು ಪ್ರಶ್ನಿಸಿದ್ದಾರೆ. ಈ ಪ್ರತಿಯೊಂದು ಅನುಭವವು ಆತಂಕಕ್ಕೀಡು ಮಾಡಿದ್ದು ಸಮಾಜವು ಮಹಿಳೆಯರನ್ನು ಹೇಗೆ ನೋಡುತ್ತದೆ ಎಂಬುದನ್ನು ಪ್ರಶ್ನಿಸುವಂತೆ ಮಾಡಿತು ಎಂದು ಆ ಮಹಿಳೆ (Viral News) ವಿವರಿಸಿದ್ದಾರೆ.

ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರು ಸುರಕ್ಷತೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ, ಮಹಿಳೆಯೊಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ ತಮಗಾದ ಮೂರು ಆತಂಕಕಾರಿ ಅನುಭವ ಬಿಚ್ಚಿಟ್ಟಿದ್ದಾರೆ.

ಅವರು ಬೆಳಗ್ಗೆ ಆರು ಗಂಟೆಗೆ ಉತ್ತರ ಪ್ರದೇಶದ ಘಾಜಿಯಾಬಾದ್‌ನಿಂದ ಹರಿಯಾಣದ ಗುರುಗ್ರಾಮಕ್ಕೆ ಹೋಗಲು ಕ್ಯಾಬ್ ಬುಕ್ ಮಾಡಿದ್ದರು. ಆದರೆ ಕಾದು ಸುಸ್ತಾಗಿ ಚಾಲಕ ಬಂದಿಲ್ಲ ಎನ್ನುವ ಕಾರಣಕ್ಕೆ ರೈಡ್‌ ರದ್ದುಗೊಳಿಸಿ ಬೇರೆ ಕ್ಯಾಬ್ ಬುಕ್ ಮಾಡಿದ್ದಾರೆ. ​ಆದರೆ ಮೊದಲ ಚಾಲಕನೇ ನೇರವಾಗಿ ಆಕೆಯ ಮನೆ ಬಾಗಿಲಿಗೆ ಬಂದು "ಬಾಗಿಲು ತೆಗೆ,  ಇವತ್ತು ನಿನ್ನನ್ನು ನಾನೇ ಕರೆದುಕೊಂಡು ಹೋಗುವುದು" ಎಂದು ಗದರಿಸಿದ್ದಾನೆ. ಚಾಲಕನಿಗೆ ಭಯಪಟ್ಟು ಅವರು ಅಂದಿನ ಪ್ರಯಾಣವನ್ನೇ ರದ್ದುಗೊಳಿಸಿ, ಮನೆಯಲ್ಲೇ ಭಯದಿಂದ ಕುಳಿತುಕೊಳ್ಳಬೇಕಾಯಿತು.

ವಿಡಿಯೊ ನೋಡಿ:



ನಂತರ ಮಹಿಳೆಯು 2019ರ ಮತ್ತೊಂದು ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಆಗ ಅವರು ದೆಹಲಿ ವಿಶ್ವ ವಿದ್ಯಾಲಯದಲ್ಲಿ ಓದುತ್ತಿದ್ದು ಪಿಜಿಯಲ್ಲಿ ವಾಸಿಸುತ್ತಿದ್ದರು. ತಮ್ಮ ಸ್ನೇಹಿತೆಯರು ತಡರಾತ್ರಿ ವಸತಿ ಸ್ಥಳಕ್ಕೆ ಮರಳುತ್ತಿದ್ದಾಗ, ಮೂವರು ಅಪರಿಚಿತ ಪುರುಷರು ಬೈಕ್‌ನಿಂದ ಇಳಿದು ಅಟ್ಟಿಸಿಕೊಂಡು ಬಂದಿದ್ದರು. ತಕ್ಷಣವೇ ಎಲ್ಲರೂ ಒಳಗೆ ಓಡಿ ಬಾಗಿಲು ಹಾಕಿ ಪ್ರಾಣಾಪಾಯದಿಂದ ಪಾರಾಗಿದ್ದರು. ದಿನಕ್ಕೊಂದು ಇಂತಹ ಘಟನೆಗಳ ಅನುಭವ ಆಗುತ್ತದೆ ಎಂದು ಬೇಸರ ಹೊರಹಾಕಿದ್ದಾರೆ.

ಈ ಟ್ಯಾಕ್ಸಿಯಲ್ಲಿದೆ ಮಿನಿ ಮಾರ್ಟ್; ನೀವು ಪ್ರಯಾಣ ಮಾಡ್ತಾ ಉಚಿತ ಶಾಪಿಂಗ್‌ ಕೂಡ ಮಾಡಬಹುದು

ಇನ್ನು ​ಪರೀಕ್ಷಾ ಕೇಂದ್ರದಲ್ಲೇ ಅಧಿಕಾರಿಯೇ ಅಸಭ್ಯ ಕಾಮೆಂಟ್  ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ​ಇತ್ತೀಚೆಗೆ ಉತ್ತರ ಪ್ರದೇಶದ ಲಖನೌದಲ್ಲಿ ನೆಟ್ ಪರೀಕ್ಷೆಗೆ ತೆರಳಿದ್ದಾಗ, ದಾಖಲೆ ಪರಿಶೀಲಿಸುತ್ತಿದ್ದ ಅಧಿಕಾರಿಯೊಬ್ಬ ಆಕೆಯ ಸೀಟ್ ಸಂಖ್ಯೆ 69 ಇರುವುದನ್ನು ನೋಡಿ ಅಸಭ್ಯವಾಗಿ ಕಾಮೆಂಟ್ ಮಾಡಿದ್ದ. ಇದರಿಂದ ಪರೀಕ್ಷೆಯಲ್ಲಿ ಸೂಕ್ತವಾಗಿ ಗಮನ ಹರಿಸಲಾಗದೆ ಒಂದು ಪ್ರಶ್ನೆಯನ್ನು ಬಿಟ್ಟುಬರಬೇಕಾಯಿತು ಎಂದಿದ್ದಾರೆ.

​ಈ ಘಟನೆ ಬಗ್ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ಹಲವು ಮಂದಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದು ದೇಶದ ಪ್ರತಿಯೊಬ್ಬ ಮಹಿಳೆಯ ಕಥೆ, ಈ ರೀತಿಯ ಅನುಭವ ಪ್ರತಿಯೊಬ್ಬರಿಗೂ ಎದುರಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.