Viral Video: ಡ್ಯೂಟಿ ಟೈಂನಲ್ಲಿ ಹೆಂಡ್ತಿ ಜೊತೆ ಭರ್ಜರಿ ಸ್ಟೆಪ್- ಆಮೇಲೆ ಆಗಿದ್ದೇ ಬೇರೆ!
Education officer dance video: ಶಿಕ್ಷಣಾಧಿಕಾರಿಯೊಬ್ಬರು ತಮ್ಮ ಕಚೇರಿಯೊಳಗೆ ಪತ್ನಿಯೊಂದಿಗೆ ನೃತ್ಯ ಮಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಪಂಜಾಬ್ ಸರ್ಕಾರ ಅವರನ್ನು ಅಮಾನತುಗೊಳಿಸಿದೆ. ಪಂಜಾಬ್ ಶಾಲಾ ಶಿಕ್ಷಣ ಸಚಿವ ಹರ್ಜೋತ್ ಸಿಂಗ್ ಬೈನ್ಸ್ ಅವರ ನಿರ್ದೇಶನದ ಮೇರೆಗೆ ಪಂಜಾಬ್ ಶಾಲಾ ಶಿಕ್ಷಣ ಕಾರ್ಯದರ್ಶಿ ಅನಿಂದಿತಾ ಮಿತ್ರಾ ಅವರು ಅಮಾನತು ಆದೇಶವನ್ನು ಹೊರಡಿಸಿದ್ದಾರೆ.


ಮೋಗಾ: ಶಿಕ್ಷಣಾಧಿಕಾರಿಯೊಬ್ಬರು ತಮ್ಮ ಕಚೇರಿಯೊಳಗೆ ಪತ್ನಿಯೊಂದಿಗೆ ನೃತ್ಯ ಮಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಮಂಗಳವಾರ ಪಂಜಾಬ್ ಸರ್ಕಾರ ಅವರನ್ನು ಅಮಾನತುಗೊಳಿಸಿದೆ. ದೇವಿ ಪ್ರಸಾದ್ ಎಂದು ಗುರುತಿಸಲಾದ ಅಧಿಕಾರಿ ಮೋಗಾ ಜಿಲ್ಲೆಯ ಭಾಗಪುರಾಣದಲ್ಲಿ ಬ್ಲಾಕ್ ಪ್ರಾಥಮಿಕ ಶಿಕ್ಷಣ ಅಧಿಕಾರಿ (ಬಿಪಿಇಒ) ಆಗಿ ಸೇವೆ ಸಲ್ಲಿಸುತ್ತಿದ್ದರು.
ಪಂಜಾಬ್ ಶಾಲಾ ಶಿಕ್ಷಣ ಸಚಿವ ಹರ್ಜೋತ್ ಸಿಂಗ್ ಬೈನ್ಸ್ ಅವರ ನಿರ್ದೇಶನದ ಮೇರೆಗೆ ಪಂಜಾಬ್ ಶಾಲಾ ಶಿಕ್ಷಣ ಕಾರ್ಯದರ್ಶಿ ಅನಿಂದಿತಾ ಮಿತ್ರಾ ಅವರು ಅಮಾನತು ಆದೇಶ ಹೊರಡಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ ದೇವಿಪ್ರಸಾದ್ ತಮ್ಮ ಪತ್ನಿಯೊಂದಿಗೆ ಮುಖೇಶ್, ಲತಾ ಮಂಗೇಶ್ಕರ್ ಅವರ ಹಿಟ್ ರೆಟ್ರೊ ಟ್ರ್ಯಾಕ್ ತುಮ್ ರೂಥಿ ರಹೋಗೆ ಹಾಡಿಗೆ ತಮ್ಮ ಕಚೇರಿಯೊಳಗೆ ನೃತ್ಯ ಮಾಡಿದ್ದಾರೆ. ಇದನ್ನು ಅವರ ಪತ್ನಿಯ ಯೂಟ್ಯೂಬ್ ಚಾನೆಲ್‌ಗೆ ಅಪ್‌ಲೋಡ್ ಮಾಡಲಾಗಿದೆ.
ವಿಡಿಯೊ ವೀಕ್ಷಿಸಿ:
An education department official from Moga, identified as Devi Prasad, has been suspended after his video of dancing with his wife inside office premises went viral. The video was reportedly uploaded on his wife’s YouTube channel @IndianExpress @iepunjab @ieeducation_job pic.twitter.com/YkYojRGkDH
— Divya Goyal (@divya5521) August 12, 2025
ಘಟನೆಯ ಕುರಿತು ಮಾತನಾಡಿದ ಹರ್ಜೋತ್ ಸಿಂಗ್ ಬೈನ್ಸ್, ನಿಯಮಗಳನ್ನು ಉಲ್ಲಂಘಿಸುವ ಅಥವಾ ಕರ್ತವ್ಯದಲ್ಲಿ ವಿಫಲರಾಗುವ ಯಾವುದೇ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ. ಜುಲೈನಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದಾಗ ಈ ವಿಡಿಯೊವನ್ನು ಚಿತ್ರೀಕರಿಸಲಾಗಿದೆ ಎಂದು ದೇವಿಪ್ರಸಾದ್ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅವರು ತಮ್ಮ ಕಚೇರಿಯಲ್ಲಿ ತಮ್ಮ ಕುಟುಂಬದೊಂದಿಗೆ ಕೆಲವು ಗಂಟೆಗಳ ಕಾಲ ಕಳೆದರು. ಆ ಸಮಯದಲ್ಲಿ ಮನರಂಜನಾ ಉದ್ದೇಶಗಳಿಗಾಗಿ ಮಾತ್ರ ಈ ವಿಡಿಯೊವನ್ನು ರೆಕಾರ್ಡ್ ಮಾಡಲಾಗಿದೆ ಎಂದು ಅವರು ಹೇಳಿದರು. ಅವರ ಪತ್ನಿ ಯೂಟ್ಯೂಬ್ ಚಾನೆಲ್ ಹೊಂದಿದ್ದು, ಅವರ ಮಕ್ಕಳು ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Pahalgam Terror Attack: ಪಹಲ್ಗಾಮ್ ಉಗ್ರ ದಾಳಿಯ ಮತ್ತೊಂದು ವಿಡಿಯೊ ವೈರಲ್-ಏನಿದೆ ಅದ್ರಲ್ಲಿ?
ಇನ್ನು ಸ್ಥಳೀಯ ಚಾನೆಲ್‌ವೊಂದಕ್ಕೆ ಮಾತನಾಡಿದ ಅವರು, ವಿಡಿಯೊ ಚಿತ್ರೀಕರಿಸಿದ ದಿನ ತಮ್ಮ ಮೋಗಾ ಕಚೇರಿಯಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದರು ಎಂದು ಹಂಚಿಕೊಂಡರು. ‘ನಮ್ಮ ವಿವಾಹ ವಾರ್ಷಿಕೋತ್ಸವದ ಕಾರಣ ಹೆಂಡತಿ ಕಚೇರಿಗೆ ಬಂದಿದ್ದಳು. ಹೀಗಾಗಿ ವಿಡಿಯೊವನ್ನು ಕೇವಲ ಮೋಜಿಗಾಗಿ ಚಿತ್ರೀಕರಿಸಲಾಗಿದೆ’ ಎಂದು ಅವರು ವಿವರಿಸಿದರು.