Bengaluru Road Rage: ಬೆಂಗಳೂರಿನಲ್ಲಿ ನಿಲ್ಲದ ರೋಡ್ ರೇಜ್; ಮಹಿಳೆಯ ಕಾರು ಬೆನ್ನಟ್ಟಿ ಹಲ್ಲೆಗೈದ 10 ಕ್ಯಾಬ್ ಚಾಲಕರು
Bengaluru Road Rage: ಮಹಿಳೆಯ ಕಾರನ್ನು 10-12 ಕ್ಯಾಬ್ ಚಾಲಕರ ಬೆನ್ನಟ್ಟಿ, ಹಲ್ಲೆ ಮಾಡಿರುವ ಘಟನೆ ನಗರದ ಹುಳಿಮಾವುನಲ್ಲಿ ನಡೆದಿದೆ. ಈ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಎಫ್‌ಐಆರ್ ದಾಖಲಿಸಿ, ತನಿಖೆ ಅರಂಭಿಸಿದ್ದಾರೆ.


ಬೆಂಗಳೂರು: ರಾಜಧಾನಿಯಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ (Bengaluru Road Rage) ನಡೆದಿದೆ. ಮಹಿಳೆಯ ಕಾರನ್ನು 10-12 ಕ್ಯಾಬ್ ಚಾಲಕರ ಬೆನ್ನಟ್ಟಿ, ಹಲ್ಲೆ ಮಾಡಿರುವ ಘಟನೆ ನಗರದ ಹುಳಿಮಾವುನಲ್ಲಿ ನಡೆದಿದೆ. ಈ ಗುಂಪು ತನ್ನ ಕುಟುಂಬದ ಮೇಲೂ ಹಲ್ಲೆ ನಡೆಸಿದೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.
ಅಡ್ಡಾದಿಡ್ಡಿಯಾಗಿ ಬಂದು ನನ್ನ ಕಾರನ್ನು ತಡೆದ ಕ್ಯಾಬ್ ಚಾಲಕನೊಬ್ಬ, ಕ್ಯಾತೆ ತೆಗೆದು ಜಗಳ ಮಾಡಿದ. ನಂತರ ಚಾಲಕರ ಗುಂಪು ತನ್ನ ಅಪಾರ್ಟ್‌ಮೆಂಟ್‌ನವರೆಗೆ ಬೆನ್ನಟ್ಟಿ ಹಲ್ಲೆ ನಡೆಸಿದ್ದಾರೆ. ವ್ಯಕ್ತಿಯೊಬ್ಬ ಕಾರಿನ ಗಾಜನ್ನು ಗುದ್ದುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಜಗಳದ ವೇಳೆ ಕಾರಿನ ಗಾಜು ಒಡೆದುಹೋಗಿದೆ. ಇದಾದ ಸ್ವಲ್ಪ ಸಮಯದ ನಂತರ ಕ್ಯಾಬ್ ಡ್ರೈವರ್‌ಗಳ ಗುಂಪು ಎಲ್ಲಾ ಕಡೆಯಿಂದ ಮಹಿಳೆಯ ಕಾರನ್ನು ಸುತ್ತುವರೆದಿದೆ. ಚಾಲಕರ ಗುಂಪು ಮಹಿಳೆಯ ವಸತಿ ಪ್ರದೇಶಕ್ಕೆ ಪ್ರವೇಶಿಸುವುದನ್ನು ಮತ್ತೊಂದು ವೀಡಿಯೊದಲ್ಲಿದೆ. ಆಕೆಯ ಕುಟುಂಬದ ಮೇಲೂ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ.
Its Bangalore again in News for .............
— Woke Eminent (@WokePandemic) August 13, 2025
A woman in Bengaluru was allegedly chased and attacked by 10–12 men after a road incident in Hulimavu.
The clash began when she overtook a cab, prompting a group to pursue her with bricks and vandalise her car inside her… pic.twitter.com/5OObdWNdQX
ದುಷ್ಕರ್ಮಿಗಳು ಆಕೆಯ ಕಾರನ್ನು ಧ್ವಂಸಗೊಳಿಸಿದ್ದು, ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ ಆಕೆಯ ತಂದೆ ಮತ್ತು ಸಂಬಂಧಿಕರ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಆಕೆಯ ತಂದೆ ಹುಳಿಮಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಎಫ್‌ಐಆರ್ ದಾಖಲಿಸಿ, ತನಿಖೆ ಅರಂಭಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Viral Video: ವರದಕ್ಷಿಣೆಗಾಗಿ ಪತ್ನಿ ಮೇಲೆ ಮನಸೋ ಇಚ್ಛೆ ಹಲ್ಲೆ; ವೈರಲ್ ಆಯ್ತು ಪತಿಯ ಕ್ರೌರ್ಯ