ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕೊಪ್ಪಳದಲ್ಲಿ ಕೋತಿ ತಳ್ಳಿದ್ದಕ್ಕೆ ನೆಲಕ್ಕೆ ಬಿದ್ದು ವೃದ್ಧೆ ಸಾವು; ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ

Viral News: ಮಗವೊಂದು ದಾಳಿ ಮಾಡಿದ ಪರಿಣಾಮ ವೃದ್ಧೆಯೊಬ್ಬರು ಪ್ರಾಣ ಕಳೆದುಕೊಂಡ ಆಘಾತಕಾರಿ ಘಟನೆಯೊಂದು ನಡೆದಿದೆ. ಮನೆ ಮುಂದೆ ನಿಂತಿದ್ದ 91 ವರ್ಷದ ವೃದ್ಧೆಯೊಬ್ಬರ ಮೇಲೆ ಮಂಗವೊಂದು ಇದ್ದಕ್ಕಿದ್ದಂತೆ ದಾಳಿ ನಡೆಸಿದೆ. ಈ ಪರಿಣಾಮ ಕೆಳಗೆ ಬಿದ್ದು ಅವರು ಸಾವನ್ನಪ್ಪಿದ್ದಾರೆ

ಮಂಗ ದಾಳಿಯಿಂದ ವೃದ್ಧೆ ಸಾವು

ಕೊಪ್ಪಳ, ಸೆ.21: ಮಗವೊಂದು ದಾಳಿ ಮಾಡಿದ ಪರಿಣಾಮ ವೃದ್ಧೆಯೊಬ್ಬರು ಪ್ರಾಣ ಕಳೆದು ಕೊಂಡ ಆಘಾತಕಾರಿ ಘಟನೆಯೊಂದು ನಡೆದಿದೆ. ಮನೆ ಮುಂದೆ ನಿಂತಿದ್ದ 91 ವರ್ಷದ ವೃದ್ಧೆಯೊಬ್ಬರ ಮೇಲೆ ಮಂಗವೊಂದು ಇದ್ದಕ್ಕಿದ್ದಂತೆ ದಾಳಿ (Viral News) ನಡೆಸಿದೆ. ಈ ಪರಿಣಾಮ ಕೆಳಗೆ ಬಿದ್ದು ಅವರು ಸಾವನ್ನಪ್ಪಿದ್ದಾರೆ. ಮೃತ ಮಹಿಳೆಯನ್ನು 91 ವರ್ಷದ ನಜ್ಮುನ್ನಿಸಾ ಬೇಗಂ ಎಂದು ಗುರುತಿಸಲಾಗಿದೆ.

ಹೊರಗಿನಿಂದ ಉಂಟಾದ ಶಬ್ದವೊಂದನ್ನು ಕೇಳಿ ಅವರು ಮನೆಯಿಂದ ಹೊರ ಬರುವುದನ್ನು ದೃಶ್ಯಾವಳಿಗಳಲ್ಲಿ ಕಾಣಬಹುದು. ಕೆಲವೇ ಕ್ಷಣಗಳಲ್ಲಿ, ಕೋತಿಯೊಂದು ಅವರತ್ತ ಜಿಗಿದು ದಾಳಿ ಮಾಡಲು ಮುಂದಾಗಿದೆ. ಇದರಿಂದ ಅಘಾತಗೊಂಡು ಕೆಳಗೆ ಬಿದ್ದ ಪರಿಣಾಮ ಅವರ ತಲೆಗೆ ಗಾಯವಾಗಿದ್ದು, ನಂತರ ಆಸ್ಪತ್ರೆಯಲ್ಲಿ ಮೃತಪಟ್ಟರು.

ವಿಡಿಯೋ ನೋಡಿ:



ಈ ದಾರುಣ ಘಟನೆ ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ಈ ಇಡೀ ಘಟನೆಯೂ ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಶಬ್ದವೊಂದನ್ನು ಕೇಳಿ ನಜ್ಮುನ್ನಿಸಾ ಅವರು ಹೊರಗೆ ಬರುತ್ತಿದ್ದಂತೆಯೇ, ಕೋತಿಯೊಂದು ಹಠಾತ್ತನೆ ಅವರತ್ತ ಧಾವಿಸಿ ಬಂದು ಅವರನ್ನು ಕೆಳಗೆ ಕೆಡವಿತು.

Viral Video: ಸೂರತ್ ರೈಲ್ವೆ ನಿಲ್ದಾಣದಲ್ಲಿ ಕಳಪೆ ಆಹಾರ; ಫುಡ್ ಕೌಂಟರ್‌ನಲ್ಲಿ ಪ್ರಯಾಣಿಕರಿಗಾಗಿ ತಯಾರಿಸಿದ ಪಫ್ ತಿಂದ ಇಲಿ

ವೈರಲ್ ಆದ ವಿಡಿಯೊದಲ್ಲಿ ಶಬ್ದವೊಂದನ್ನು ಕೇಳಿ ಅವರು ಮನೆಯಿಂದ ಹೊರಗೆ ಬರುವುದನ್ನು ದೃಶ್ಯಾವಳಿಗಳಲ್ಲಿ ಕಾಣಬಹುದು. ಕೆಲವೇ ಕ್ಷಣಗಳಲ್ಲಿ, ಕೋತಿಯೊಂದು ಅವರತ್ತ ಜಿಗಿದು ಅವರನ್ನು ಕೆಳಗೆ ತಳ್ಳುತ್ತದೆ. ಬಿದ್ದಾಗ ಅವರಿಗೆ ತಲೆಗೆ ತೀವ್ರ ಗಾಯವಾಗಿತ್ತು.

ಈ ಘಟನೆಯ ಶಬ್ದ ಕೇಳಿ ಮನೆಯೊಳಗಿದ್ದ ಮತ್ತೊಬ್ಬ ವೃದ್ಧೆ ಹೊರಗೆ ಓಡಿಬಂದಿದ್ದಾರೆ. ಆ ಸಮಯದಲ್ಲೂ ಮಂಗ ಅವರ ಮೇಲೆಯೂ ದಾಳಿ ಮಾಡಲು ಮುಂದಾಗಿದೆ. ಆದರೆ, ತಕ್ಷಣವೇ ಸ್ಥಳೀಯರು ಓಡಿ ಬಂದಿದ್ದು ಮಂಗ ಅಲ್ಲಿಂದ ತೆರಳಿದೆ.