ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಜಾತ್ರೋತ್ಸವದ ವೇಳೆ ಮಾವುತನನ್ನು ಸೊಂಡಿಲಿನಿಂದ ಎತ್ತಿ ಎಸೆದ ಆನೆ: ಭಯಾನಕ ವಿಡಿಯೊ ವೈರಲ್‌

Viral Video: ಕೇರಳದ ತ್ರಿಶೂರ್ ಜಿಲ್ಲೆಯ ದೇವಾಲಯದಲ್ಲಿ ಆನೆಯೊಂದು ಮಾವುತನ ಮೇಲೆ ಭೀಕರವಾಗಿ ದಾಳಿ ಮಾಡಿದೆ. ಮಹಾದೇವ ದೇವಸ್ಥಾನದಲ್ಲಿ 'ವಲಿಯವಿಳಕ್ಕು' ಹಬ್ಬದ ಸಂಭ್ರಮದ ನಡುವೆಯೇ ಈ ಭೀಕರ ದೃಶ್ಯ ಕಂಡು ಬಂದಿದೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.

ದೇವಾಲಯದ ಉತ್ಸವದ ವೇಳೆ ದಾಳೆ ನಡೆಸಿದ ಆನೆ.

ತಿರುವನಂತಪುರಂ, ಫೆ‌. 27: ಪ್ರಾಣಿಗಳ ವರ್ತನೆ ಯಾವಾಗ ಬದಲಾವಣೆ ಆಗುತ್ತದೆ ಎಂದು ಹೇಳಲಾಗದು. ಕೆಲವೊಮ್ಮೆ ಮನುಷ್ಯರ ಜತೆ ಪ್ರೀತಿಯಿಂದ ನಡೆದುಕೊಂಡರೆ ಕೆಲವೊಮ್ಮೆ ಉಗ್ರ ರೂಪ ತಾಳುತ್ತವೆ. ಇದೀಗ ಕೇರಳದ ತ್ರಿಶೂರ್ ಜಿಲ್ಲೆಯ ದೇವಾಲಯದಲ್ಲಿ ಆನೆಯೊಂದು ಮಾವುತನ ಮೇಲೆ ಭೀಕರವಾಗಿ ದಾಳಿ ಮಾಡಿದೆ. ಮಹಾದೇವ ದೇವಸ್ಥಾನದಲ್ಲಿ 'ವಲಿಯವಿಳಕ್ಕು' ಹಬ್ಬದ ಸಂಭ್ರಮದ ನಡುವೆಯೇ ಈ ಭೀಕರ ದೃಶ್ಯ ಕಂಡು ಬಂದಿದೆ. ಈ ವಿಡಿಯೊ ವೈರಲ್ (Viral Video) ಆಗುತ್ತಿದ್ದಂತೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.

ಫೆಬ್ರವರಿ 26ರಂದು ಈ ಘಟನೆ ನಡೆದಿದೆ. ಧಾರ್ಮಿಕ ಮೆರವಣಿಗೆಗಾಗಿ ಆನೆಯನ್ನು ಆಲಂಕಾರ ಮಾಡಿಸಿ ನಿಲ್ಲಿಸಲಾಗಿತ್ತು. ಈ ವೇಳೆ ಆನೆಯ ಮೇಲೆ ಹತ್ತಲು ಮಾವುತ ಪ್ರಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಆತನ ಮೇಲೆ ಆನೆ ಏಕಾಏಕಿ ದಾಳಿ ಮಾಡಿದೆ. ಕೆಲವೇ ಸೆಕೆಂಡ್‌ಗಳಲ್ಲಿ ಆನೆ ಮುಂದಕ್ಕೆ ಧಾವಿಸಿ, ಆತನ ಕಾಲುಗಳಿಗೆ ತನ್ನ ಸೊಂಡಿಲು ಸುತ್ತಿ, ತನ್ನ ಕಡೆಗೆ ಎಳೆದುಕೊಂಡು, ನೆಲದಿಂದ ಮೇಲಕ್ಕೆತ್ತಿ ಬಲವಾಗಿ ಪಕ್ಕಕ್ಕೆ ಎಸೆದಿದೆ‌. ಈ ದೃಶ್ಯ ಕಂಡು ಭಯಭೀತರಾದ ಭಕ್ತರು ದಿಕ್ಕುಪಾಲಾಗಿ ಓಡಿದ್ದಾರೆ.

ವಿಡಿಯೊ ನೋಡಿ:



ಈ ವಾರ್ಷಿಕ ಕಾರ್ಯಕ್ರಮವು ಹೆಚ್ಚಿನ ಸಂಖ್ಯೆಯ ಭಕ್ತರನ್ನು ಆಕರ್ಷಿಸುತ್ತದೆ. ಈ ವರ್ಷವೂ ಅದ್ದೂರಿಯಾಗಿ ನಡೆದಿದ್ದು ಸಾಂಪ್ರದಾಯಿಕ ಮೆರವಣಿಗೆಗೆ ಸಿದ್ಧತೆಗಳು ನಡೆಯುತ್ತಿದ್ದಾಗಲೇ ಆನೆ ದಾಳಿ ಮಾಡಿದೆ. ಗಾಯಾಳುವನ್ನು ತಕ್ಷಣ ಅಂಗಮಾಲಿಯ ಅಪೊಲೊ ಆಡ್ಲಕ್ಸ್ ಆಸ್ಪತ್ರೆಗೆ ಸಾಗಿಸಲಾಯಿತು. ಅವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಗಳು ತಿಳಿಸಿವೆ.

ಛೇ ಎಂತಾ ಅಮಾನವೀಯ ಕೃತ್ಯ: ಭಾರಿ ತೂಕದ ಪಾರ್ಸೆಲ್ ಹೊತ್ತು ಹೈರಾಣಾದ ಡೆಲಿವರಿ ಬಾಯ್!

ಘಟನೆಯ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಧಾರ್ಮಿಕ ಕಾರ್ಯಕ್ರಮಗಳ ಸಮಯದಲ್ಲಿ ಆನೆಗಳನ್ನು ಬಳಕೆ ಮಾಡುವ ಬಗ್ಗೆ ಅನೇಕರು ಪ್ರಶ್ನೆ ಮಾಡಿದ್ದಾರೆ. ಒಬ್ಬರು ʼʼಆನೆಗಳು ಕಾಡಿನಲ್ಲಿ ಜೀವಿಸಬೇಕು. ಧಾರ್ಮಿಕ ಆಚರಣೆಗಳ ಭಾಗವಾಗಿ ಅವುಗಳನ್ನು ಸರಪಳಿಯಲ್ಲಿ ಕಟ್ಟುವುದು ತಪ್ಪುʼʼ ಎಂದು ಹಲವರು ಬರೆದುಕೊಂಡಿದ್ದಾರೆ.

ಮತ್ತೊಬ್ಬರು, ʼʼಭಯಾನಕವಾಗಿದೆ. ಆನೆಗಳು ಇಷ್ಟೊಂದು ಕ್ರೂರವೇ?ʼʼ ಎಂದು ಪ್ರಶ್ನಿಸಿದ್ದಾರೆ. ಮಗದೊಬ್ಬರು, ʼʼಅದು ನಿಜವಾಗಿಯೂ ಹೃದಯವಿದ್ರಾವಕ. ಯುವಕನ ಚೇತರಿಕೆಗಾಗಿ ಪ್ರಾರ್ಥಿಸುತ್ತಿದ್ದೇನೆʼʼ ಎಂದು ಹೇಳಿದ್ದಾರೆ.