ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Viral Video: ಹಿಂದೂ ದೇವಾಲಯದಲ್ಲಿ ಮುಸ್ಲಿಂ ಯುವಕನ ರೀಲ್ಸ್; ಕಲ್ಯಾಣಿಗೆ ನೀರು ಉಗಿದ ಯೂಟ್ಯೂಬರ್‌!

ಸಿಖ್ಖರ ಪವಿತ್ರ ಧಾರ್ಮಿಕ ಸ್ಥಳವಾದ ಅಮೃತಸರದ ಸುವರ್ಣ ದೇವಾಲಯದಲ್ಲಿ‌ ಮುಸ್ಲಿಂ ಯುವಕ ನೊಬ್ಬ ರೀಲ್ಸ್ ಮಾಡಿರುವ ದೃಶ್ಯ ವೈರಲ್ ಆಗಿದೆ. ಮುಸ್ಲಿಂ ಪ್ರಾರ್ಥನಾ ಟೋಪಿಯನ್ನ ಧರಿಸಿದ್ದ ಯುವಕ ಪವಿತ್ರ ಸರೋವರದ ದಂಡೆಯ ಮೇಲೆ ಕುಳಿತು, ಅದರ ನೀರಿನಿಂದ ಬಾಯಿ ಮುಕ್ಕಳಿಸುತ್ತಿ ರುವುದು ಕಂಡುಬಂದಿದ್ದು‌ ಅದೇ ದೇವಾಲಯದಲ್ಲಿ ರೀಲ್ಸ್ ಕೂಡ ಮಾಡಿದ್ದಾನೆ..

ಹಿಂದೂ ದೇವಾಲಯದ ಮುಂದೆ ರೀಲ್ಸ್ ಮಾಡಿದ ಮುಸ್ಲಿಂ ವ್ಯಕ್ತಿ: ವಿಡಿಯೊ ವೈರಲ್!

ಹಿಂದು ದೇವಾಲಯದಲ್ಲಿ ಮುಸ್ಲಿಂ ಯುವಕನ ರೀಲ್ಸ್ -

Profile
Pushpa Kumari Jan 18, 2026 1:20 PM

ಅಮೃತಸರ: ಜ.18: ಇತ್ತೀಚೆಗಷ್ಟೇ ಹೈದರಾಬಾದ್‌ನ ಮಲ್ಕಜ್‌ ಗಿರಿಯಲ್ಲಿರುವ ದೇವಸ್ಥಾನದ ಬಳಿ ಮುಸ್ಲಿಂ ವ್ಯಕ್ತಿಯೊಬ್ಬ ಮಲವಿಸರ್ಜನೆ ಮಾಡಿ ಅಪವಿತ್ರಗೊಳಿಸಿದ ಘಟನೆ ಕಂಡು ಬಂದಿತ್ತು.‌ಇದರ ಬೆನ್ನಲ್ಲೇ ಸಿಖ್ಖರ ಪವಿತ್ರ ಧಾರ್ಮಿಕ ಸ್ಥಳವಾದ ಅಮೃತಸರದ ಸುವರ್ಣ ದೇವಾಲಯದಲ್ಲಿ‌ ಮುಸ್ಲಿಂ ಯುವಕನೊಬ್ಬ ರೀಲ್ಸ್ ಮಾಡಿರುವ ದೃಶ್ಯ ವೈರಲ್ (Viral Video) ಆಗಿದೆ. ಮುಸ್ಲಿಂ ಪ್ರಾರ್ಥನಾ ಟೋಪಿಯನ್ನ ಧರಿಸಿದ್ದ ಯುವಕ ಪವಿತ್ರ ಸರೋವರದ ದಂಡೆಯ ಮೇಲೆ ಕುಳಿತು, ಅದರ ನೀರಿನಿಂದ ಬಾಯಿ ಮುಕ್ಕಳಿಸುತ್ತಿರುವುದು ಕಂಡುಬಂದಿದ್ದು‌ ಅದೇ ದೇವಾಲಯದಲ್ಲಿ ರೀಲ್ಸ್ ಕೂಡ ಮಾಡಿದ್ದಾನೆ‌. ಸದ್ಯ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪರ ವಿರೋಧದ ಚರ್ಚೆಗಳು ಕಂಡು ಬಂದಿವೆ.

ಕ್ಲಿಪ್‌ನಲ್ಲಿ, ಮುಸ್ಲಿಂ ವ್ಯಕ್ತಿ ಪವಿತ್ರ ಸರೋವರದ ನೀರಿನಿಂದ ಬಾಯಿ ಮುಕ್ಕಳಿಸುತ್ತಿರುವುದನ್ನು ಮತ್ತು ದೇವಾಲಯದಲ್ಲಿ ಒಂದು ರೀಲ್ ಅನ್ನು ಚಿತ್ರೀಕರಿಸುತ್ತಿರುವುದನ್ನು ಕಾಣಬಹುದು. ಈ ಕೃತ್ಯವು ಸರಳವಾಗಿ ಕಂಡುಬಂದರೂ ಪವಿತ್ರ ಸ್ಥಳದಲ್ಲಿ ಅವರ ಕಾರ್ಯಗಳು ಸೂಕ್ತವೇ ಎಂಬ ಬಗ್ಗೆ ಬಳಕೆದಾರರು ಪ್ರಶ್ನೆ ಮಾಡಿದ್ದಾರೆ. ಪವಿತ್ರ ಸರೋವರದ ನೀರನ್ನು ಈ ರೀತಿ ಬಳಸಿದ್ದು ತಪ್ಪು ಮತ್ತು ಧಾರ್ಮಿಕ ಸ್ಥಳದಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದು ಬಳಕೆದಾರರ ಆಕ್ರೋಶಕ್ಕೆ ಕಾರಣವಾಗಿದೆ.

ವಿಡಿಯೋ ನೋಡಿ:



ವೈರಲ್ ಆಗಿರುವ ವಿಡಿಯೋದಲ್ಲಿ, ಮುಸ್ಲಿಂ ಪ್ರಾರ್ಥನಾ ಟೋಪಿ ಧರಿಸಿರುವ ಯುವಕ ಪವಿತ್ರ ಸರೋವರದ ದಂಡೆಯ ಮೇಲೆ ಕುಳಿತು, ಅದರ ನೀರಿನಿಂದ ಬಾಯಿ ಮುಕ್ಕಳಿಸುತ್ತಿರುವುದು ಕೂಡ ಕಂಡುಬಂದಿದೆ. ಇದರ ಬೆನ್ನಲ್ಲೇ ಆತ ದೇವಾಲಯದ ಮುಂದೆ‌ ಮೊಬೈಲ್ ರೀಲ್ಸ್ ಕೂಡ ಮಾಡಿ ದ್ದಾನೆ.ಈ ಬಗ್ಗೆ ಟೀಕೆ ಹೆಚ್ಚಾದಂತೆ, ಆ ವ್ಯಕ್ತಿಯ ಮತ್ತೊಂದು ವೀಡಿಯೊ ಆನ್‌ಲೈನ್‌ನಲ್ಲಿ ಶೇರ್ ಮಾಡಿದ್ದಾನೆ. ನಾನು ದೇವಾಲಯದ ಒಳಗೆ ಟೋಪಿ ಧರಿಸಿಯೇ ಓಡಾಡುತ್ತಿದ್ದರೂ, ಅಲ್ಲಿನ ಸಿಖ್ ಬಾಂಧವರು ನನ್ನನ್ನು ಪ್ರೀತಿಯಿಂದ ಸ್ವಾಗತ ಮಾಡಿದ್ದಾರೆ. ಯಾರು ಕೂಡ ಈ ಬಗ್ಗೆ‌ ಆಕ್ಷೇಪಿ ಸಲಿಲ್ಲ" ಎಂದು ಹೇಳಿದ್ದಾನೆ. ಅಲ್ಲದೆ, "ಹಿಂದೂ-ಮುಸ್ಲಿಂ-ಸಿಖ್ ಎಲ್ಲರೂ ಅಣ್ಣತಮ್ಮಂದಿರು" ಎಂಬ ಭಾವನೆ ತಮ್ಮಲಿದೆ ಎಂದು ಕೋಮು ಸೌಹಾರ್ದತೆಯ ಬಗ್ಗೆ ಮಾತನಾಡಿದ್ದಾನೆ.

Viral News: ಆಫೀಸ್‌ನಲ್ಲೇ ನಡೆಯುತ್ತೆ ರೊಮ್ಯಾನ್ಸ್; ಸಮೀಕ್ಷೆಯಲ್ಲಿ ಭಾರತಕ್ಕೆ ಸಿಕ್ಕಿದ್ದು ಎಷ್ಟನೇ ಸ್ಥಾನ?

ಈ ಬಗ್ಗೆ ನೆಟ್ಟಿಗರು ಕೂಡ ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದು ಬಳಕೆದಾರರೊಬ್ಬರು ಇಲ್ಲಿ ಜಾತಿ-ಮತದ ಭೇದವಿಲ್ಲದೆ ಎಲ್ಲರಿಗೂ ಪ್ರವೇಶವಿದೆ. ಯುವಕನ ನಡೆ ಸೌಹಾರ್ದತೆಯ ಉದ್ದೇಶಎಂದು ಹಲವರು ಬೆಂಬಲಿಸಿದ್ದಾರೆ. ಮತ್ತೊಬ್ಬರು ಧರ್ಮ ಯಾವುದೇ ಇರಲಿ, ಪವಿತ್ರ ಸ್ಥಳದ ನಿಯಮ ಗಳನ್ನು ಗೌರವಿಸಬೇಕು. ಸರೋವರದ ನೀರನ್ನು ಬಾಯಿ ಮುಕ್ಕಳಿಸಲು ಬಳಸುವುದು ಅಶಿಸ್ತಿನ ಕ್ರಮ ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು "ಆಕ್ಷೇಪಿಸಲ್ಪಟ್ಟಿದ್ದೀರಾ?? ಅವರು ಮುಸ್ಲಿಂ ಎಂಬ ಕಾರಣಕ್ಕಾಗಿ, ಸಿಖ್ಖರು ಯಾವುದೇ ಕ್ರಮ ಕೈಗೊಂಡಿಲ್ಲ. ಅವರು ಹಿಂದೂ ಆಗಿದ್ದರೆ, ಅವರನ್ನು ಈಗಲೇ ನಿಂದಿಸುತ್ತಿದ್ದರು ಎಂದು ಹೇಳಿದ್ದಾರೆ...