ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Elephant: ಬಹಳ ಭಾವುಕ ಜೀವಿ ಈ ಆನೆ; ತನ್ನ ಪೂರ್ವಿಕರ ತಲೆಬುರುಡೆ ನೋಡಿದ ಗಜರಾಜನ ರಿಯಾಕ್ಷನ್‌ ಹೇಗಿತ್ತು ಗೊತ್ತಾ?

Elephant’s Reaction: ಆನೆಗಳು ಕೂಡ ಮನುಷ್ಯರಂತೆ ಸಂತೋಷ, ಪ್ರೀತಿ, ದುಃಖ, ಕರುಣೆ, ಕ್ರೋಧ ಮತ್ತು ಸಹಾನುಭೂತಿ ಸೇರಿದಂತೆ ವಿವಿಧ ರೀತಿಯ ಭಾವನೆಗಳನ್ನು ಹೊಂದಿವೆ. ಆನೆಗಳು ದುಃಖಿಸುತ್ತವೆ ಕೂಡ. ಪ್ರೀತಿಪಾತ್ರರನ್ನು ಕಳೆದುಕೊಂಡ ಹಲವು ವರ್ಷಗಳ ನಂತರವೂ ನೆನಪಿಸಿಕೊಳ್ಳುತ್ತವೆ ಮತ್ತು ದುಃಖಿಸುತ್ತವೆಯಂತೆ.

ಆನೆಗಳನ್ನು ಸಾಮಾನ್ಯವಾಗಿ ಅತ್ಯಂತ ಬುದ್ಧಿವಂತ ಮತ್ತು ಹೆಚ್ಚು ಭಾವನಾತ್ಮಕ ಪ್ರಾಣಿಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಇದು ದೈತ್ಯ ಜೀವಿಯಾಗಿದ್ದರೂ ಬಹಳ ಮೃದು ಸ್ವಭಾವವನ್ನು ಹೊಂದಿದೆ. ಆನೆಗಳು (elephant) ಕೂಡ ಮನುಷ್ಯರಂತೆ ಸಂತೋಷ, ಪ್ರೀತಿ, ದುಃಖ, ಕರುಣೆ, ಕ್ರೋಧ ಮತ್ತು ಸಹಾನುಭೂತಿ ಸೇರಿದಂತೆ ವಿವಿಧ ರೀತಿಯ ಭಾವನೆಗಳನ್ನು ಪ್ರದರ್ಶಿಸುತ್ತವೆ. ಇವು ದುಃಖವನ್ನು ಕೂಡ ಹೊರಹಾಕುತ್ತವೆ. ಆನೆಗಳು ಪ್ರೀತಿಪಾತ್ರರನ್ನು ಅವರ ಮರಣದ ನಂತರವೂ ಹಲವು ವರ್ಷಗಳ ಕಾಲ ನೆನಪಿಸಿಕೊಳ್ಳುತ್ತವೆ ಮತ್ತು ದುಃಖಿಸುತ್ತವೆಯಂತೆ.

ಆನೆ ದುಃಖಿಸುತ್ತವೆ ಎಂಬುದಕ್ಕೆ ಏನು ಪುರಾವೆಯಿದೆ ಎಂದು ನೀವು ಕೇಳಬಹುದು. ಇತ್ತೀಚೆಗೆ, ಒಂದು ದೈತ್ಯ ಆನೆ ತನ್ನ ಪೂರ್ವಜರ ತಲೆಬುರುಡೆಯನ್ನು ನೋಡಿದ ನಂತರ ತೀವ್ರ ಭಾವುಕವಾಗುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಆನೆಯೊಂದು ತಲೆಬುರುಡೆಯ ಬಳಿಗೆ ಬಂದು ಅದನ್ನು ತನ್ನ ಸೊಂಡಿಲಿನಿಂದ ಪರೀಕ್ಷಿಸಿದೆ. ಅದು ಮತ್ತೊಂದು ಆನೆಗೆ ಅಂದರೆ ತನ್ನ ಪೂರ್ವಜರಿಗೆ ಸೇರಿದ್ದು ಎಂಬುದನ್ನು ಅರಿತುಕೊಂಡ ನಂತರ ಅದು ದುಃಖದಿಂದ ಓಡಲು ಪ್ರಾರಂಭಿಸುತ್ತದೆ. ತನ್ನ ದುಃಖವನ್ನು ವ್ಯಕ್ತಪಡಿಸಲು ಜೋರಾಗಿ ಘೀಳಿಟ್ಟಿದೆ.

ಇದನ್ನೂ ಓದಿ: Viral News: ನಡುರಸ್ತೆಯಲ್ಲಿ ಬಟ್ಟೆ ತೊಳೆದ ಭೂಪಾ.. ಇದು ಅಭಿವೃದ್ಧಿ ಹೊಂದಿರುವ ದೇಶದ ಅವಸ್ಥೆ!

ಆನೆಗಳ ತಲೆಬುರುಡೆಗಳನ್ನು ನೋಡಿದರೆ ಜೀವಂತ ಆನೆಗಳು ಪ್ರತಿಕ್ರಿಯಿಸುತ್ತವೆ ಎಂಬ ಬಗ್ಗೆ ನಾವು ಕೇಳಿದ್ದೆವು ಆದರೆ ಅದನ್ನು ನಾವೇ ನೋಡಿರಲಿಲ್ಲ. ಮಿಸಾವಾ ಸಫಾರಿ ಶಿಬಿರದಲ್ಲಿ ವನ್ಯಜೀವಿ ಚಾಲನೆಯ ಸಮಯದಲ್ಲಿ ಈ ದೃಶ್ಯವನ್ನು ಕಣ್ಣಾರೆ ನೋಡಿದೆವು ಎಂದು ಪೋಸ್ಟ್‌ಗೆ ಶೀರ್ಷಿಕೆ ನೀಡಲಾಗಿದೆ. ಇದಕ್ಕೆ ನೆಟ್ಟಿಗರು ತರಹೇವಾರಿ ಪ್ರತಿಕ್ರಿಯೆ ನೀಡಿದ್ದಾರೆ. ಆನೆಯು ಭಾವನಾತ್ಮಕ ಜೀವಿ ಎಂಬುದು ತಿಳಿದಿರಲಿಲ್ಲ ಎಂದು ಹೇಳಿದ್ದಾರೆ.

ಅಂದಹಾಗೆ, ಆನೆಯು ತನ್ನನ್ನು ಸಾಕುವ ಅಥವಾ ತನ್ನನ್ನು ನೋಡಿಕೊಳ್ಳುವ ಮಾವುತ, ಕಾವಾಡಿಗನನ್ನು ಅತೀವವಾಗಿ ಪ್ರೀತಿಸುತ್ತದೆ. ಮಾವುತನೊಬ್ಬ ರಜೆ ಮೇಲೆ ತೆರಳಿದ್ದು, ಕೆಲವು ದಿನಗಳ ನಂತರ ಬಂದರೆ ಅವು ಖುಷಿಯಿಂದ ಓಡೋಡಿ ಬರುತ್ತವೆ. ಮಾವುತನನ್ನು ಎಲ್ಲೂ ಹೋಗದಂತೆ ಅಡ್ಡಗಟ್ಟುತ್ತವೆ. ಇಂತಹ ವಿಡಿಯೊಗಳು ಹಲವಾರಿವೆ. ದೈತ್ಯ ಪ್ರಾಣಿಯಾದ್ರೂ ಅವು ತುಂಬಾ ನಿಷ್ಠೆಯನ್ನು ಪ್ರದರ್ಶಿಸುತ್ತವೆ. ತಮ್ಮ ಮಾವುತನ ಬೆವರಿನ ವಾಸನೆಯಿಂದಲೇ ಅವುಗಳು ಆತನನ್ನು ಕಂಡುಹಿಡಿಯುತ್ತವೆ. ಅದಕ್ಕೆ ಹೇಳುವುದು- ಮನುಜನಕ್ಕಿಂತ ಪ್ರಾಣಿ ಒಂದು ಕೈ ಮೇಲೆ ಎಂದು.

ಮೂಕ ಪ್ರಾಣಿಗಳ ಪ್ರೀತಿ ಸಿಕ್ಕವರು ನಿಜಕ್ಕೂ ಅದೃಷ್ಟವಂತರೇ ಸರಿ. ಇಲ್ಲಿ ವೈರಲ್ ಆಗಿರುವ ವಿಡಿಯೊವೊಂದರಲ್ಲಿ ತಮ್ಮನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿಯೊಬ್ಬ ವರ್ಷಗಳ ನಂತರ ಬಂದಾಗ ಆನೆಗಳು ಹೇಗೆ ಆತನನ್ನು ಖುಷಿಯಿಂದ ಮುತ್ತಿಕ್ಕಿಕೊಂಡಿತು ಎಂಬುದನ್ನು ನೋಡಬಹುದು.

ವಿಡಿಯೊ ವೀಕ್ಷಿಸಿ: